ಸಿದ್ದಪುರುಷರು ಅವತರಿಸಿದ ಪುಣ್ಯಭೂಮಿ ಅರಸೀಕೆರೆ: ಪರಮಶಿಮೂರ್ತಿ

KannadaprabhaNewsNetwork | Published : Feb 18, 2024 1:33 AM

ಸಾರಾಂಶ

ಕನ್ನಡಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರ ಸಿದ್ದಪುರುಷರು ಮತ್ತು ಯೋಗಿಗಳು ಅವತರಿಸಿದ ಪುಣ್ಯಭೂಮಿ. ರಂಗಭೂಮಿ ಕಲಾವಿದರಿಗೆ ಅನ್ನ ನೀಡಿದ ಆಶ್ರಯ ತಾಣ. ಅನೇಕ ಸಾಹಿತಿಗಳು ಕಲಾವಿದರು ಹೋರಾಟಗಾರರು ಜನಿಸಿದ ಪುಣ್ಯಭೂಮಿ ನಮ್ಮ ಅರಸೀಕೆರೆ ತಾಲೂಕು ಎಂದು ಸಮ್ಮೇಳನಾಧ್ಯಕ್ಷ ಪರಶಿವಮೂರ್ತಿ ಹೇಳಿದರು

ಅರಸೀಕೆರೆಯಲ್ಲಿ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನಕನ್ನಡಪ್ರಭ ವಾರ್ತೆ ಅರಸೀಕೆರೆಕನ್ನಡಕ್ಕೆ ಹಾಸನ ಜಿಲ್ಲೆಯ ಕೊಡುಗೆ ಅಪಾರ ಸಿದ್ದಪುರುಷರು ಮತ್ತು ಯೋಗಿಗಳು ಅವತರಿಸಿದ ಪುಣ್ಯಭೂಮಿ. ರಂಗಭೂಮಿ ಕಲಾವಿದರಿಗೆ ಅನ್ನ ನೀಡಿದ ಆಶ್ರಯ ತಾಣ. ಅನೇಕ ಸಾಹಿತಿಗಳು ಕಲಾವಿದರು ಹೋರಾಟಗಾರರು ಜನಿಸಿದ ಪುಣ್ಯಭೂಮಿ ನಮ್ಮ ಅರಸೀಕೆರೆ ತಾಲೂಕು ಎಂದು ಸಮ್ಮೇಳನಾಧ್ಯಕ್ಷ ಪರಶಿವಮೂರ್ತಿ ಹೇಳಿದರು ನಗರದ ವೆಂಕಟೇಶ್ವರ ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ನಾಡೋಜ ಡಾ.ಚಂದ್ರಶೇಖರ್ ಪಾಟೀಲ್ ವೇದಿಕೆ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದವರು. 2000 ವರ್ಷಗಳ ಹಿಂದಿನ ಹಲ್ಮಿಡಿ ಶಾಸನ ದೊರೆಯುತ್ತಿದ್ದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುತ್ತಿರಲಿಲ್ಲ ಅದಕ್ಕಾಗಿಯೇ ಹಾಸನ ಜಿಲ್ಲೆಯ ಕೊಡುಗೆ ಕನ್ನಡಕ್ಕೆ ಅಪಾರ ಎಂದು ಹೇಳಿದರು.ಕಡುಬಡವರೂ ಸಹ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆಯೇ ಹೊರತು ಸರ್ಕಾರದ ಶಾಲೆಗಳತ್ತ ಸುಳಿಯುವುದೂ ಇಲ್ಲ. ಯಾವ ತರಬೇತಿಯೂ ಇಲ್ಲದ ಆದರೆ ಡಾಂಭಿಕತೆಯೊಂದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳು ನಾಯಿಕೊಡೆಗಳ ಹಾಗೆ ತಲೆಯೆತ್ತುತ್ತಿದ್ದರೆ, ದಶಮಾನಗಳ ಇತಿಹಾಸವಿರುವ ಸರ್ಕಾರಿ ಶಾಲೆಗಳು ಶಿಕ್ಷಕ-ವಿದ್ಯಾರ್ಥಿ ಅನುಪಾತವಿಲ್ಲದೇ ವರ್ಷದಿಂದ ವರ್ಷಕ್ಕೆ ಮುಚ್ಚುತ್ತ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕಳೆದೆ 16 ವರ್ಷಗಳಿಂದ ವಿಧಾನಸಭಾ ಕಾರ್ಯಕಲಾಪಗಳಲ್ಲಿ ಅರಸೀಕೆರೆಯ ಸಮಸ್ಯೆಗಳು ಶಾಸನ ಸಭೆಯಲ್ಲಿ, ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವುದು ನಮ್ಮ ಭಾಗ್ಯ. ಅಧ್ಯಯನ ಮತ್ತು ಅನುಸಂಧಾನಗಳ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಅರಿತು ಅವಕ್ಕೆ ತಕ್ಕುನಾದ ಉತ್ತರವನ್ನು ಕಂಡುಕೊಳ್ಳುತ್ತಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಅಭಿನಂದಿಸಲೇಬೇಕೆಂದು ಹೇಳಿದರು.ವರನಟ ರಾಜಕುಮಾರ್‌ಗೆ ’ನಟಸಾರ್ವಭೌಮ’ ವೆಂಬ ಬಿರುದು ಕೊಟ್ಟಿದ್ದು ಅರಸೀಕೆರೆಯಲ್ಲೇ. ಖ್ಯಾತ ನಟ ಬಾಲಕೃಷ್ಣ ಇದೇ ಊರಿನವರು. ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಹುಟ್ಟಿದೂರು ಅರಸೀಕೆರೆ. ಕನ್ನಡ ಚಿತ್ರ ರಂಗದ ಖ್ಯಾತ ಪೋಷಕ ನಟ ಶ್ರೀ ದೊಡ್ಡಣ್ಣ ನಮ್ಮೂರಿನವರೇ ನಾಯಕ ನಟನಾಗಿ ಮಿಂಚುತ್ತಿರುವ ಧನಂಜಯ ನಮ್ಮ ಊರಿನವರೇ ಎಂಬುದು ಹೆಮ್ಮೆಯ ವಿಚಾರ ಎಂದರು.ಡಾ.ಮಲ್ಲೇಶಗೌಡ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಕಲ್ಪದಿಂದ ಹುಟ್ಟಿದ ಕಸಾಪ, ಸರ್ವರಲ್ಲೂ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು. ೨ ಸಾವಿರ ವಷದ ಇತಿಹಾಸವಿರುವ ಕನ್ನಡ ಭಾಷೆ, ವಿಶ್ವ ಕಂಡ ಉತ್ಕೃಷ್ಟ ಭಾಷೆಗಳಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಸ್ಥಾನ ಪಡೆದಿದೆ ಎಂದರು. ಕನ್ನಡ ನಾಡು-ನುಡಿಯ ಆಳ-ಆಗಲ ಪರಿಚಯಿಸುವ ಕೆಲಸ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಿಂದ, ಚಿಂತಕರಿಂದ ಆಗಬೇಕಿದೆ ಎಂದರು.ಸಮ್ಮೇಳನಾಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಅನ್ನುವ ಬದಲು ಬೆಳೆಸಬೇಕು. ಆಗ ಭಾಷೆ ಉಲಿಯಲಿದೆ ಎಂದರು ಕನ್ನಡಕ್ಕೆ ಸ್ವಂತಿಕೆ ಇದೆ. ಬಳಸುವ ನುಡಿಗಳನ್ನು ಪದಗಳ ಮೂಲಕ ಬರೆಯುವ ಜಗತ್ತಿನ ಕೆಲವೇ ಭಾಷೆಗಳಲ್ಲಿ ಕನ್ನಡ ಒಂದಾಗಿದೆ ಎಂದರು. ನಾಡು ನುಡಿಗೆ ಅರಸೀಕೆರೆ ಕೊಡುಗೆ ಅಪಾರವಾಗಿದ್ದರೂ, ಇಲ್ಲೊಂದು ಸಾಹಿತ್ಯ ಭವನ ಇಲ್ಲ. ಹಲವು ಅಭಿವೃದ್ಧಿ ಕಾರ್ಯ ಮಾಡಿರುವ ಶಿವಲಿಂಗೇಗೌಡರು, ಸಾಹಿತ್ಯ ಭವನ ನಿರ್ಮಾಣಕ್ಕೆ ಗಮನ ಹರಿಸಲಿ ಎಂದು ಮನವಿ ಮಾಡಿದರು. ನಂತರ ಮಾತನಾಡಿದ ಶಿವಲಿಂಗೇಗೌಡ, ನಾವು ವೈಜ್ಞಾನಿಕ ಕಾಲಘಟ್ಟದಲ್ಲಿದ್ದು, ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾಡು-ನುಡಿ ಪ್ರೋತ್ಸಾಹಿಸುವುದು ಇಂದು ಎಲ್ಲರ ಕೆಲಸವಾಗಿದೆ. ಖನಿಜ ಸಂಪತ್ತು ಸೇರಿದಂತೆ ಕನ್ನಡನಾಡು ಸಮೃದ್ಧವಾಗಿದೆ. ಆದರೆ ರಾಜಕೀಯ ವೈ ಮನಸ್ಸಿನಿಂದ ರಾಜ್ಯದ ಅಭಿವೃದ್ಧಿಗೆ ಬಳಕೆ ಆಗುತ್ತಿಲ್ಲ ಎಂದು ವಿಷಾದಿಸಿದರು. ಹಾಸನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು,ನುಡಿ, ಸಂಸ್ಕೃತಿಗೆ ಜಿಲ್ಲೆಯ ಕೊಡುಗೆ. ಹಲ್ಮಿಡಿ ಶಾಸನ ಇದರ ಹೆಗ್ಗುರುತಾಗಿದೆ ಎಂದರು.ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಾರ್ಯಕ್ರಮಗಳು ಮನೋರಂಜನಾ ಕಾರ್ಯಕ್ರಮದಂತಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಎಚ್ಚರಿಸಿದರು. ತಾಯಿ-ಸಾಹಿತಿಯಲ್ಲಿ ಭಿನ್ನತೆ, ತಾರತಮ್ಯ ಇಲ್ಲ. ಹಾಗಾಗಿ ತಾಯಿ, ಸಾಹಿತಿ ಹೇಳುವ ಮಾತಿಗೆ ಅದರದ್ದೇ ಗೌರವ, ಮೌಲ್ಯ ಇದೆ. ದೇವರ ಭಾಷೆ ಸಂಸ್ಕೃತ, ಆದರೆ ಕನ್ನಡಕ್ಕೂ ತನ್ನದೇ ಸಂಸ್ಕೃತಿ ಹೊಂದಿದೆ. ಹಾಗಾಗಿಯೆ ಸಾಲು ಸಾಲು ಜ್ಞಾನಪೀಠ ಪ್ರಶಸ್ತಿ ಲಭಿಸಿವೆ, ದ್ವಾಪರ ಯುಗದಲ್ಲಿ ರಾಮನ ಪರಮಭಕ್ತ ಆಂಜನೇಯ ಸುಲಲಿತವಾಗಿ ಕನ್ನಡ ಮಾತನಾಡುತ್ತಿದ್ದ. ಹೀಗಾಗಿ ಕನ್ನಡಕ್ಕೆ ಯುಗದ ಇತಿಹಾಸ ಇದೆ ಎಂದು ನುಡಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೆಚ್.ಆರ್.ಸ್ವಾಮಿ, ಈಗಿನ ಅಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದರು..ಈ ಸಮಯದಲ್ಲಿ ಜಗದ್ಗುರು ಬಸವೇಶ್ವರ ಭಾವ ಚಿತ್ರ ಅನಾವರಣಗೊಳಿಸಲಾಯಿತು.ವೇದಿಕೆಯಲ್ಲಿ ಕಸಾಪ ಪದಾಧಿಕಾರಿ ದಿವಾಕರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ.ಮದನಗೌಡ, ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, , ಜಾವಗಲ್ ಪ್ರಸನ್ನ ಕುಮಾರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬಾಳ್ಳುಗೋಪಾಲ್, ಟಿಹೆಚ್‌ಒ ಡಾ.ತಿಮ್ಮರಾಜು, ಬಿಇಒ ಮೋಹನ್ ಇದ್ದರುರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಜಿವಿಟಿ ಬಸವರಾಜ್, ತಹಸೀಲ್ದಾರ್ ಸಂತೋಷ್ ಕುಮಾರ್, ಮಾಜಿ ಅಧ್ಯಕ್ಷ ಬಿ.ಪರಮೇಶ್, ಅನಂತ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ನಂತ್ ಕುಮಾರ್, ಕಸಾಪ ಪದಾಧಿಕಾರಿಗಳಾದ ಶೇಖರ್ ಸಂಕೋಡನಹಳ್ಳಿ, ಆನಂದ್ ಕೌಶಿಕ್, ಕರವೇ ನಗರಾಧ್ಯಕ್ಷ ಕಿರಣ್ ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್ ಮೊದಲಾದವರು ಭಾಗಿಯಾಗಿದ್ದರು.

ಕನ್ನಡಭಾಷೆ ಕಾಯುವ ಕೆಲಸವನ್ನು ಸಾಹಿತ್ಯ ಪರಿಷತ್‌ ಮಾಡುತ್ತಿದೆ: ಡಾ.ಮಲ್ಲೇಶ್ ಗೌಡಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಜನ್ಮತಾಳಿ ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಗಡಿಯನ್ನು ಕಾಯುವ ಕೆಲಸವನ್ನು ಪಾಲಿಸಿಕೊಂಡು ಬರುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಮಲ್ಲೇಶ್ ಗೌಡ ತಿಳಿಸಿದರು.

ಶ್ರೀ ವೆಂಕಟೇಶ್ವರ ಕಲಾ ಭವನ ಆವರಣದಲ್ಲಿ 8ನೇ ಸಾಹಿತ್ಯ ಸಮ್ಮೇಳನದ ನಾಡಧ್ವಜ ಆರಿಸಿ ಮಾತನಾಡಿದರು. ಏಕೀಕೃತ ಕರ್ನಾಟಕವನ್ನು ಕಟ್ಟಿ ಕನ್ನಡಿಗರೆಲ್ಲರಿಗೂ ಸಮೃದ್ಧ ನೆಲೆಯನ್ನು ಒದಗಿಸಿ ಹೆಮ್ಮೆ ಮತ್ತು ಅಭಿಮಾನದ ಬದುಕಿಗೆ ದಾರಿ ಮಾಡಿಕೊಟ್ಟಿರುವ ಅಮೂಲ್ಯ ಚೇತನಗಳಿಗೆ ನಾವೆಲ್ಲರು ಚಿರಋಣಿಗಳಾಗಿರಬೇಕು ಕನ್ನಡ ಭಾಷೆಯ ಬಗ್ಗೆ ಸದಾ ನಾವು ಜಾಗೃತರಾಗಿ ಸ್ವಾಭಿಮಾನಿಗಳಾಗಿರಬೇಕು ಎಂದು ಕರೆ ನೀಡಿದರು.ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎಂ.ಜಿ ಸಂತೋಷ್ ಕುಮಾರ್ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ, ಸುಲಲಿತವಾದ ಈ ಕನ್ನಡ ಭಾಷೆಯನ್ನು ನಾವು ಕಲಿಯುವುದರ ಜೊತೆಗೆ ಮಕ್ಕಳಿಗೂ ಕಲಿಸಬೇಕು. ಇದಕ್ಕಾಗಿ ನಮ್ಮ ಮನೆಮನೆಗಳಲ್ಲಿ ಕನ್ನಡವನ್ನೇ ಮಾತನಾಡಬೇಕು. ನಮ್ಮ ಸುತ್ತಮುತ್ತ ಕನ್ನಡದ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದ ಅವರು ಈ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.ತಾ. ಕಸಾಪ ಅಧ್ಯಕ್ಷ ಜಿ.ಎಸ್ ಚಂದ್ರಶೇಖರ್ ಪರಿಷತ್ತಿನ ಧ್ವಜಾ ರೋಹಣ ನೆರವೇರಿಸಿ ಕನ್ನಡವನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವು ಮಾಡಬೇಕು. ಬರೀ ನ.೧ ರಂದು ಕನ್ನಡ ರಾಜ್ಯೋತ್ಸವ ಬದಲು ಅದನ್ನು ಪ್ರತಿ ನಿತ್ಯವು ಆಚರಿಸುವಂತಾಗಬೇಕು ಇಂತಹ ಸಾಹಿತ್ಯ ಸಮ್ಮೇಳನಗಳು ಗ್ರಾಮ ಗ್ರಾಮಗಳಲ್ಲೂ ನಡೆಯುವಂತಾಗಬೇಕು ಕನ್ನಡದ ಜ್ಯೋತಿ ಮನೆ ಮನೆಗಳಲ್ಲೂ ಬೆಳಗಬೇಕು ಎಂದು ಹಾರೈಸಿದರುಈ ವೇಳೆ ಕನ್ನಡ ಗೌರವ ಕಾರ್ಯದರ್ಶಿ ಸ್ವಭಾವ ಕೊಳಗುಂದ ಹಾಗೂ ವಕೀಲಾ ಎನ್‌.ಡಿ ಪ್ರಸಾದ್ ಮಾಜಿ ಅಧ್ಯಕ್ಷ ಶಿವಮೂರ್ತಿ, ದಿವಾಕರ್ ಶಿಕ್ಷಕ ವಿಷ್ಣುವರ್ಧನ್‌ ಮತ್ತಿತರರಿದ್ದರು.

Share this article