ರಾಮನಗರ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬರೋಬ್ಬರಿ 132 ಕೋಟಿ ರುಪಾಯಿ ಮೌಲ್ಯದ 2.71 ಲಕ್ಷ ಕ್ವಿಂಟಲ್ ರಾಗಿ ಖರೀದಿಸಲಾಗಿದೆ.
ಆಹಾರ ಇಲಾಖೆ ಹಾಗೂ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತಕ್ಕೆ ಸರ್ಕಾರ ಇಂತಿಷ್ಟು ಕ್ವಿಂಟಲ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡಲು ಗುರಿ ನೀಡಿತ್ತು. ಅದರಂತೆ
ಪ್ರಸಕ್ತ ಸಾಲಿನಲ್ಲಿ 12,265 ರೈತರು 2,88,284 ಕ್ವಿಂಟಲ್ ರಾಗಿ ಪೂರೈಸಲು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 11,693 ರೈತರು 132 ಕೋಟಿ 89 ಲಕ್ಷ ರುಪಾಯಿ ಮೌಲ್ಯದ 2,71,982 ಕ್ವಿಂಟಲ್ ರಾಗಿಯನ್ನು ಸರಬರಾಜು ಮಾಡಿದ್ದಾರೆ. ಇದರಲ್ಲಿ ಶೇಕಡ 90ರಷ್ಟು ರಾಗಿ ಹಣವನ್ನು ರೈತರ ಖಾತೆಗೆ ಪಾವತಿ ಮಾಡಲಾಗಿದೆ.ಜಿಲ್ಲೆಯಲ್ಲಿ ಸುಮಾರು 72,000 ಹೆಕ್ಟೇರ್ ಗುರಿಯಲ್ಲಿ 65,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಇತ್ತು. ಈ ಬಾರಿ ನಿರೀಕ್ಷಿತ ಪ್ರಮಾಣದಷ್ಟು ರಾಗಿ ಉತ್ಪಾದನೆಯೂ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕನೇ ಮೂರು ಭಾಗದಷ್ಟು ರಾಗಿಯೂ ಖರೀದಿಯಾಗುವ ಸಾಧ್ಯತೆಗಳಿವೆ.
ಸರ್ಕಾರ ಕಳೆದ ವರ್ಷ ರಾಗಿಯ ದರವನ್ನು ಪ್ರತಿ ಕ್ವಿಂಟಲ್‌ಗೆ 4290 ರುಪಾಯಿ ನಿಗದಿ ಮಾಡಿತ್ತು. ಆದರೆ, ಈ ವರ್ಷ 596 ರುಪಾಯಿ ಹೆಚ್ಚುವರಿಯಾಗಿ ಅಂದರೆ 4,886 ರುಪಾಯಿ ದರ ನಿಗದಿ ಪಡಿಸಿತು. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಲ್ ನಂತೆ ಎಲ್ಲ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ ರಾಗಿ ಖರೀದಿಸಲು ಉದ್ದೇಶಿಸಿತ್ತು. ರಾಗಿ ಖರೀದಿ ದರ ಹೆಚ್ಚಾಗಿರುವ ಜೊತೆಗೆ ಬೆಳೆ ಇಳುವರಿಯೂ ಚೆನ್ನಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬ್ರೋಕರ್‌ಗಳಿಗೆ ಕಡಿವಾಣ:
ಬಾಕ್ಸ್ ...
ಖರೀದಿ ಕೇಂದ್ರನೋಂದಣಿ ರೈತರುರಾಗಿ ಪ್ರಮಾಣ (ಕ್ವಿ)
ಮಾಗಡಿ5,1021,09,338.50
ಮಾಗಡಿ1 2,05640,879.50
ಚನ್ನಪಟ್ಟಣ37310,248.50ಹಾರೋಹಳ್ಳಿ93722,435.00
ಒಟ್ಟು12,2652,88,284.00ಬಾಕ್ಸ್ ...............
ಮೇ 5ರವರೆಗೆ ರಾಗಿ ಸರಬರಾಜಿನ ವಿವರಖರೀದಿ ಕೇಂದ್ರರಾಗಿ ಪೂರೈಸಿದ ರೈತರುರಾಗಿ ಪ್ರಮಾಣ (ಕ್ವಿ)ರಾಗಿ ಒಟ್ಟು ಮೌಲ್ಯ (ರು.)
ಕನಕಪುರ3,10486,779.0042,40,02,194ಮಾಗಡಿ4,9071,04,616.5051,11,56,219
ರಾಮನಗರ45210,478.505,11,97,951ಮಾಗಡಿ1 1,96638,881.5018,99,75,009
ಚನ್ನಪಟ್ಟಣ3579,727.004,75,26,122ಹಾರೋಹಳ್ಳಿ907 21,500.0010,50,49,000 ಒಟ್ಟು11,6932,71,982.50132,89,06,495
6ಕೆಆರ್ ಎಂಎನ್ 5.ಜೆಪಿಜಿಸಾಂದರ್ಭಿಕ ಚಿತ್ರ)