ರೈತರಿಂದ ಭತ್ತ, ಬಿಳಿಜೋಳ ಖರೀದಿ: ಜಿಪಂ ಸಿಇಒ ಸುರೇಶ್‌

KannadaprabhaNewsNetwork |  
Published : Apr 16, 2025, 12:44 AM IST
ಕ್ಯಾಪ್ಷನ15ಕೆಡಿವಿಜಿ39 ಸುರೇಶ್.ಬಿ.ಇಟ್ನಾಳ್ | Kannada Prabha

ಸಾರಾಂಶ

ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮೂಲಕ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಬಿಳಿಜೋಳವನ್ನು ರೈತರಿಂದ ಖರೀದಿಸಲು ಅವಕಾಶ ಕಲ್ಪಿಸಿದೆ.

ದಾವಣಗೆರೆ: ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮೂಲಕ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಬಿಳಿಜೋಳವನ್ನು ರೈತರಿಂದ ಖರೀದಿಸಲು ಅವಕಾಶ ಕಲ್ಪಿಸಿದೆ.

ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿನ ಬಿತ್ತನೆ ಪ್ರಮಾಣ ಆಧರಿಸಿ ಭತ್ತ ಕ್ವಿಂಟಲ್‌ಗೆ ₹2300 ಹಾಗೂ ಭತ್ತ ಗ್ರೇಡ್-ಎ ₹2320 ಗಳಂತೆ ಮತ್ತು ಹೈಬ್ರಿಡ್ ಜೋಳವನ್ನು ಪ್ರತಿ ಕ್ವಿಂಟಲ್‌ಗೆ ₹3371 ಹಾಗೂ ಮಾಲ್ದಂಡಿ ಜೋಳವನ್ನು ಕ್ವಿಂ.ಗೆ ₹3421 ನಂತೆ ಯಾವುದೇ ವ್ಯತ್ಯಾಸಗಳಿಗೆ ಅವಕಾಶ ನೀಡದೇ ನೋಂದಣಿ ಮತ್ತು ಖರೀದಿಗೆ ಕ್ರಮ ವಹಿಸಲು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ಬಿಳಿಜೋಳ ಖರೀದಿಸಲು ಮಾರ್ಚ್ 15 ರಿಂದ ನೊಂದಣಿ ಪ್ರಕ್ರಿಯ ಪ್ರಾರಂಭಿಸಲಾಗಿದ್ದು, ಮೇ 31 ರವರೆಗೆ ನೊಂದಣಿ ಮತ್ತು ಖರೀದಿ ಪ್ರಕ್ರಿಯೆ ನಡೆಯಲಿದೆ. ಖರೀದಿ ಕೇಂದ್ರಗಳನ್ನು ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆರಂಭಿಸಲಾಗಿದೆ ಎಂದರು.

ರೈತರಿಂದ ಸಂಪೂರ್ಣ ಒಣಗಿದ ಹಾಗೂ ಎಫ್‌ಎಕ್ಯೂ ಗುಣಮಟ್ಟದ ಭತ್ತ ಮತ್ತು ಬಿಳಿಜೋಳ ಮಾದರಿಗಳ ಪಡೆದು ನಿಗದಿಪಡಿಸಿದ ಮಾನದಂಡಗಳಂತೆ ಗ್ರೇಡರ್ ಅಥವಾ ಆಸೇಯರ್‌ಗಳಿಂದ ದೃಢೀಕರಿಸಿದ ಗುಣಮಟ್ಟದ ಬಿಳಿಜೋಳವನ್ನು ಮಾತ್ರ ಖರೀದಿಸಲಾಗುತ್ತದೆ. ರೈತರ ಫ್ರೂಟ್ಸ್ ಐಡಿ ನೋಂದಣಿ ಕಡ್ಡಾಯ. ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಜೋಳ ಖರೀದಿಸಲಾಗುವುದು. ಪ್ರತಿ ರೈತರಿಂದ ಎಕರೆಗೆ 20 ಕ್ವಿಂ.ನಂತೆ ಗರಿಷ್ಠ 150 ಕ್ವಿಂ. ಜೋಳ ಹಾಗೂ ಭತ್ತವನ್ನು ಎಕರೆಗೆ ಕನಿಷ್ಠ 25ರಿಂದ ಗರಿಷ್ಠ 50 ಕ್ವಿಂ.ವರೆಗೆ ಖರೀದಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಹಾಳ್, ಆಹಾರ ನಿಗಮದ ಅಧಿಕಾರಿ ಶೃತಿ, ಎಪಿಎಂಸಿ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-15ಕೆಡಿವಿಜಿ39: ಸುರೇಶ್ ಬಿ. ಇಟ್ನಾಳ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''