ಮನುಕುಲ ಉದ್ದರಿಸಿದ ಯುಗ ಪುರುಷ ಸಿದ್ಧಾರೂಢರು

KannadaprabhaNewsNetwork | Updated : Dec 26 2023, 01:31 AM IST

ಸಾರಾಂಶ

ಗುಪ್ತವಾಗಿದ್ದ ಶಿವ ಪಂಚಾಕ್ಷರಿ ಮಹಾಮಂತ್ರವನ್ನು ಸಾರ್ವತ್ರಿಕವಾಗಿ ಉಪದೇಶಿಸಿದ ಮನುಕುಲ ಉದ್ದರಿಸಿದ ಯುಗ ಪುರುಷರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಅಧ್ಯಾತ್ಮ ಕ್ಷೇತ್ರದ ಪುಣ್ಯಭೂಮಿ ಭಾರತ. ಸಾಹಿತ್ಯ, ಸಂಸ್ಕೃತಿಗಳ ಸಂಗಮತಾಣ ಈ ಭಾರತ ಎಂದು ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಪ.ಪೂ. ಸಹಜಾನಂದ ಸ್ವಾಮಿಗಳು ಹೇಳಿದರು.

ಅವರು ಸಿದ್ದಾರೂಢ ಆಶ್ರಮದಲ್ಲಿ ನಡೆದ 150ನೇ ಸಿದ್ಧಾರೂಢರ ಸತ್ಸಂಗ ಕಾರ್ಯಕ್ರಮ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಿದ್ದಾರೂಢರು ಲೋಕ ಕಲ್ಯಾಣಾರ್ಥವಾಗಿ ಕಾಲ ನಡಿಗೆಯಲ್ಲಿ ದೇಶವನ್ನು ಸಂಚರಿಸಿದರು. ನೇಪಾಳ, ಟಿಬೆಟ್,ಪಾಕಿಸ್ತಾನದ ಕೆಲ ಭಾಗಗಳನ್ನೊಳಗೊಡಂತೆ ಅಖಂಡ ಭಾರತವನ್ನು ಸುತ್ತಾಡಿ ಎಲ್ಲ ಜನರ ಕಲ್ಯಾಣ ಮಾಡಿದ್ದಾರೆ. ಗುಪ್ತವಾಗಿದ್ದ ಶಿವ ಪಂಚಾಕ್ಷರಿ ಮಹಾಮಂತ್ರವನ್ನು ಸಾರ್ವತ್ರಿಕವಾಗಿ ಉಪದೇಶಿಸಿದ ಮನುಕುಲ ಉದ್ದರಿಸಿದ ಯುಗ ಪುರುಷರು ಎಂದು ಹೇಳಿದರು.

ಸಾಧು ಸಂತರ ದರ್ಶನದಿಂದ ಜನ್ಮ ಪಾವನವಾಗುತ್ತದೆ. ರಾಮಾಯಣ, ಮಹಾಭಾರತ ಮಹಾಗ್ರಂಥಗಳು ಪಾರಾಯಣದಿಂದ ಜಗತ್ತಿಗೆ ಬೆಳಕನ್ನು ಚೆಲ್ಲಿವೆ. ಅದರಂತೆ ಸಿದ್ದಾರೂಢರ ಕಥಾ ಅಮೃತ ಗ್ರಂಥ ಆರೂಢ ಪರಂಪರೆಯ ಸಕಲ ಭಕ್ತರಿಗೆ ಸುಖ, ಶಾಂತಿ, ನೆಮ್ಮದಿ, ಸಕಲ ಭಾಗ್ಯಗಳನ್ನು ಕರುಣಿಸುತ್ತಿದೆ. ಈ ಗ್ರಂಥ ನಿರ್ಮಲ ಭಕ್ತಿಯಿಂದ ಪಾರಾಯಣ ಮಾಡುವವರಿಗೆ ಸಕಲವನ್ನೂ ಸಾಕ್ಷಾತ್ ಸಿದ್ದಾರೂಢರು ಕರುಣಿಸುತ್ತಿದ್ದಾರೆ. ಅವರ ಸತ್ಸಂಗದಲ್ಲಿ ಭಾಗಿಯಾಗುವುದರಿಂದ ಮಾನವ ಜನ್ಮ ಪವನವಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಲ್ಲಪ್ಪಣ್ಣ ಕಟಗಿ, ಸಿದ್ದಾರೂಢರು ಸಕಲ ಮತೋದ್ಧಾರಕಾರಗಿದ್ದರು. ಜಗತ್ತನ್ನು ಉದ್ದರಿಸಿದ ಸಾಕ್ಷಾತ್ ಶಿವನ ಸ್ವರೂಪಿಗಳಾಗಿ ನರನ ರೂಪದಲ್ಲಿ ಕೈಲಾಸದಿಂದ ಧರೆಗಿಳಿದ ಭಗವಂತ ಸಿದ್ಧಾರೂಢ. ಭಕ್ತಿಯಿಂದ ನಾಮಸ್ಮರಣೆ ಮಾಡಿದರೆ ಸಾಕು ಕಷ್ಟಗಳನ್ನು ಕರಗಿಸಿ ಭಕ್ತರ ಬದುಕಿನಲ್ಲಿ ನೆಮ್ಮದಿ ಕರುಣಿಸುತ್ತಾನೆ ಎಂದು ಹೇಳಿದರು.

ಮಹಾಲಿಂಗ ಕರೆಹೊನ್ನ ಸಿದ್ದಾರೂಢರ ಕಥಾ ಅಮೃತದ 37ನೇ ಅಧ್ಯಾಯ ಪಠಣ ಮಾಡಿದರು. ಈ ಸಂಧರ್ಭದಲ್ಲಿ ಮಹೇಶ ಇಟಕನ್ನವರ ಮಾತನಾಡಿದರು .ಮುಖಂಡರಾದ ಶಿವನಗೌಡ ಪಾಟೀಲ್, ಮಲ್ಲಪ್ಪಾ ಭಾವಿಕಟ್ಟಿ, ಮಹಾಲಿಂಗಪ್ಪ ಜಕ್ಕಣ್ಣವರ, ಸಿದ್ದರಾಮ, ಮಹಾಲಿಂಗ ಹೊಸೂರ, ಬಸವರಾಜ ಮೇಟಿ, ಮೆಹಬೂಬ ಸನದಿ, ಶಂಕರ ನಿಲಾರಿ, ಮಹಾದೇವ ಮರೆಗುದ್ದಿ, ಪ್ರಕಾಶ ಮರೆಗುದ್ದಿ, ಹಣಮಂತ ಮೇರಾಪಟ್ಟಿ, ಮಹಾಂತೇಶ ಘಟ್ನಟ್ಟಿ, ಚಂದ್ರಶೇಖರ ಕೊಳಕಿ, ಮನು ಕರಡಿ, ನಿಂಗಪ್ಪ ಮದರಖಂಡಿ, ಸಂಗಮೇಶ ಹಿಡಕಲ್, ಮಹಾದೇವ ಕದ್ದಿಮನಿ, ಎಸ್.ಕೆ. ಗಿಂಡೆ, ಮಲ್ಲಪ್ಪಾ ಸೈದಾಪುರ, ರಾಮನ್ನಾ ಸಂಶಿ, ಪರಸಪ್ಪ ಬಂಡಿ, ಅಶೋಕ ಸುನಧೋಳಿ, ಉದ್ದಪ್ಪ ನಿಲಾರಿ, ಭೀಮಶಿ ನೇಗಿನಾಳ, ಶಂಕರ ನಿಲಾರಿ, ಮಹಾಲಿಂಗ ಜಿಟ್ಟಿ, ಸತ್ಯಪ್ಪ ಹುದ್ದಾರ, ರಾಜು ಗೆದ್ದೇಪ್ಪನವರ ಸೇರಿ ಹಲವರು ಇದ್ದರು. ಹುಮಾಯಿನ್ ಸುತಾರ ನಿರೂಪಿಸಿ, ವಂದಿಸಿದರು. ಪ್ರಸಾದ ವ್ಯವಸ್ಥೆಯನ್ನು ಯಲ್ಲನಗೌಡ ಪಾಟೀಲ್ ಮತ್ತು ಮಹೇಶ ಇಟಕನ್ನವರ ಮಾಡಿಸಿದ್ದರು.

Share this article