ಪುಷ್ಪಗಿರಿ ಜಗದ್ಗುರುಗಳ ಗುರುವಂದನೆ, ಮಹಿಳಾ ಸಂಘಗಳಿಗೆ ಪ್ರಗತಿ ಮೊತ್ತ ವಿತರಣಾ ಸಮಾರಂಭ ನಾಳೆ

KannadaprabhaNewsNetwork |  
Published : Aug 23, 2024, 01:03 AM IST
ಫೋಟೋ : ೨೨ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ಶ್ರೀಮದ್‌ಶ್ರೀಶೈಲ ಶ್ರೀಕ್ಷೇತ್ರ ಪುಷ್ಪಗಿರಿ ಜಗದ್ಗುರು ಸೋಮೇಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಗುರುವಂದನಾ ಹಾಗೂ ಹಾನಗಲ್ಲ ತಾಲೂಕಿನ ೨೫ ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಗತಿ ಮೊತ್ತ ವಿತರಣಾ ಸಮಾರಂಭ ಆ.೨೪ ರಂದು ಹಾನಗಲ್ಲಿನಲ್ಲಿ ನಡೆಯಲಿದೆ ಎಂದು ಶ್ರೀಮಠ ಸಮಾಜದ ಮುಖಂಡ ಬಸವರಾಜ ಹಾದಿಮನಿ ತಿಳಿಸಿದರು.

ಹಾನಗಲ್ಲ: ಶ್ರೀಮದ್‌ಶ್ರೀಶೈಲ ಶ್ರೀಕ್ಷೇತ್ರ ಪುಷ್ಪಗಿರಿ ಜಗದ್ಗುರು ಸೋಮೇಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಗುರುವಂದನಾ ಹಾಗೂ ಹಾನಗಲ್ಲ ತಾಲೂಕಿನ ೨೫ ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರಗತಿ ಮೊತ್ತ ವಿತರಣಾ ಸಮಾರಂಭ ಆ.೨೪ ರಂದು ಹಾನಗಲ್ಲಿನಲ್ಲಿ ನಡೆಯಲಿದೆ ಎಂದು ಶ್ರೀಮಠ ಸಮಾಜದ ಮುಖಂಡ ಬಸವರಾಜ ಹಾದಿಮನಿ ತಿಳಿಸಿದರು.ಗುರುವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ. ೨೪ರ ಬೆಳಗ್ಗೆ ೧೦ ಗಂಟೆಗೆ ಶ್ರೀ ಕುಮಾರೇಶ್ವರ ನಗರದ ಬಾಬು ಜಗಜೀವನರಾವ್ ಸಮುದಾಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಜಗದ್ಗುರು ಸೋಮೇಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಗುರುವಂದನಾ ಸಲ್ಲಿಸಲಾಗುತ್ತಿದೆ. ಇದು ಶ್ರೀಮಠದ ಸಂಪ್ರದಾಯವಾಗಿದ್ದು ಈ ಬಾರಿ ಹಾನಗಲ್ಲ ತಾಲೂಕಿನಲ್ಲಿ ಗುರುವಂದನೆ ನಡೆಯಲಿದೆ. ಇದರೊಂದಿಗೆ ಹಾನಗಲ್ಲ ತಾಲೂಕಿನ ೨೫ ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳಿಗೆ ಒಟ್ಟು ೩೨ ಲಕ್ಷ ರು. ಪ್ರಗತಿ ಮೊತ್ತ ವಿತರಿಸಲಾಗುತ್ತದೆ. ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಮಹಾಸ್ವಾಮಿಗಳು, ಹರಿಹರ ತಾಲೂಕು ಯಳವಟ್ಟಿ ಸಿದ್ಧಾಶ್ರಮದ ಯೋಗಾನಂದ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮನೋಹರ ತಹಶೀಲ್ದಾರ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕ ಶಿವರಾಜ ಸಜ್ಜನವರ, ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.ಕಾರ್ಯಕ್ರಮಕ್ಕೂ ಮೊದಲು ಜಗದ್ಗುರು ಸೋಮಶೇಖರ ಶಿವಾಚಾರ್ಯರು ಹಾನಗಲ್ಲ ಪಟ್ಟಣದ ಬಳಿಯ ಮಲ್ಲಿಗಾರ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಕ್ಕೆ ತೆರಳುವರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಹಿರಿಯ ನ್ಯಾಯವಾದಿ ಬಿ.ಎಸ್.ದಳವಾಯಿ, ಶ್ರೀಮಠದ ಕಾರ್ಯನಿರ್ವಾಹಕ ಅಧಿಕಾರಿ ನಾಗಯ್ಯ, ಪುರಸಭಾ ಸದಸ್ಯ ವಿರುಪಾಕ್ಷಪ್ಪ ಕಡಬಗೇರ, ನ್ಯಾಯವಾದಿ ಎಸ್.ಎಂ.ಕೋತಂಬರಿ, ಬಸವರಾಜ ಹಾದಿಮನಿ, ಸಂಕರಗೌಡ ಪಾಟೀಲ, ಚನ್ನಬಸನಗೌಡ ಬನ್ನಿಹಳ್ಳಿ, ಅಜ್ಜಪ್ಪ ಬಾಗಿಲದವರ, ಶಂಕರಗೌಡ್ರ ಕಡ್ಲಿ, ಮಹಾಮತೇಶ ಗೌಡ, ಗಂಗಯ್ಯ, ಅಶೋಕಯ್ಯ ಹುಲ್ಲತ್ತಿ, ಮೂಕಪ್ಪ ಹಂಚಿನಮನಿ, ಮಹಲಿಂಗಪ್ಪ ಅಕ್ಕಿವಳ್ಳಿ, ಗದೆಗೆಪ್ಪ ಹುಲ್ಲತ್ತಿ, ಪರಮೇಶ ಅತ್ತಿಕಟ್ಟಿ, ಚಾಮರಾಜ ಹಕ್ಲಣ್ಣನವರ, ಮೂಕಪ್ಪ ಸಣ್ಣಮನಿ ಮೊದಲಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ