ಸಿಡಿ, ಸ್ಟಿಂಗ್ ರಾಜಕೀಯಕ್ಕೆ ಅಂತ್ಯ ಹಾಡಿ: ತೇಜಸ್ವಿ ಸೂರ್ಯ

KannadaprabhaNewsNetwork |  
Published : Nov 04, 2026, 01:00 AM IST
ಹರಿಹರ | Kannada Prabha

ಸಾರಾಂಶ

ರಾಜ್ಯದ ರಾಜಕೀಯದಲ್ಲಿ ಸಿಡಿ, ವಿಡಿಯೋ ಹಾಗೂ ಸ್ಟಿಂಗ್ ಆಪರೇಷನ್‌ಗಳ ಹಾವಳಿ ಮಿತಿ ಮೀರಿದ್ದು, ಕರ್ನಾಟಕದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಬ್ಲ್ಯಾಕ್‌ಮೇಲ್ ರಾಜಕಾರಣಕ್ಕೆ ಅಂತ್ಯ ಹಾಡಿ, ಇಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು.

ಹುಬ್ಬಳ್ಳಿ:

ರಾಜ್ಯದ ರಾಜಕೀಯದಲ್ಲಿ ಸಿಡಿ, ವಿಡಿಯೋ ಹಾಗೂ ಸ್ಟಿಂಗ್ ಆಪರೇಷನ್‌ಗಳ ಹಾವಳಿ ಮಿತಿ ಮೀರಿದ್ದು, ಕರ್ನಾಟಕದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಬ್ಲ್ಯಾಕ್‌ಮೇಲ್ ರಾಜಕಾರಣಕ್ಕೆ ಅಂತ್ಯ ಹಾಡಿ, ಇಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಿಕೆ, ಟಿವಿ ತೆರೆದರೆ ಸಿಡಿ, ವಿಡಿಯೋ, ಸ್ಟಿಂಗ್ ಆಪರೇಷನ್‌ಗಳದ್ದೇ ಸುದ್ದಿ. ಕುಟುಂಬದವರು ಒಟ್ಟಿಗೆ ಕುಳಿತು ಟಿವಿ ನೋಡುವುದು, ಪತ್ರಿಕೆ ಓದಲೂ ಮುಜುಗರ ಪಡುವ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕದ ರಾಜಕೀಯವನ್ನು ದೇಶದ ಇತರ ಭಾಗಗಳಲ್ಲಿ ಅಪಹಾಸ್ಯ ಮಾಡುವಂತಾಗಿದೆ. ಯಾವ ಪಕ್ಷದವರೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಕಠಿಣ ಕ್ರಮವಾಗಬೇಕು. ರಾಜಕೀಯದಲ್ಲಿ ಸಭ್ಯತೆ ಉಳಿಯಬೇಕು ಎಂದು ಹೇಳಿದರು.

ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಕುರಿತು ಮಾತನಾಡುತ್ತಿದ್ದೇವೆ. ಆದರೆ, ಸಿಡಿ, ವಿಡಿಯೋ ರಾಜಕೀಯ ಮುಂದುವರಿದರೆ ಗೌರವಯುತ ಕುಟುಂಬಗಳ ಹೆಣ್ಣುಮಕ್ಕಳು ರಾಜಕೀಯಕ್ಕೆ ಬರಲು ಹೇಗೆ ಮುಂದೆ ಬರುತ್ತಾರೆ? ಇಂತಹ ಕೆಟ್ಟ ಪರಂಪರೆಗೆ ಅಂತ್ಯ ಹಾಡುವುದು ಎಲ್ಲ ಪಕ್ಷಗಳ ಜವಾಬ್ದಾರಿ ಎಂದರು.

ಎಲ್ಲ ಪಕ್ಷಗಳಲ್ಲೂ ರಾಜಕೀಯ ಹಿನ್ನೆಲೆಯಿಲ್ಲದ ಸಾಮಾನ್ಯ ಯುವಕರಿಗೆ ಹೆಚ್ಚಿನ ಅವಕಾಶ ಸಿಗಬೇಕು. ತಾವು 28ನೇ ವಯಸ್ಸಿನಲ್ಲಿ ಸಂಸದರಾಗಿದ್ದು, ಯುವಕರು ರಾಜಕೀಯ ಪ್ರವೇಶಿಸಲು ಪಕ್ಷಗಳು ಪ್ರೋತ್ಸಾಹಿಸಬೇಕು ಎಂಬುದು ತಮ್ಮ ನಿಲುವು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌