ದುಶ್ಚಟಗಳನ್ನು ಜೋಳಿಗೆಗೆ ಹಾಕಿ: ಆನಂದ ದೇವರು

KannadaprabhaNewsNetwork | Published : Apr 19, 2025 12:33 AM

ಸಾರಾಂಶ

ಮತ್ತೊಬ್ಬರ ನಿಂದನೆ, ಮನಸ್ಸು ನೋಯಿಸುವುದು ದುಶ್ಚಟವೇ ಆಗಿದೆ. ಮದ್ಯಪಾನ. ಧೂಮಪಾನ ಮಾಡುವುದು ಅಷ್ಟೇ ಅಲ್ಲ ಇನ್ನೊಬ್ಬರ ಮನಸಿಗೆ ನೋವುಂಟು ಮಾಡುವ ಹಾಗೆ ನಿಂದನೆ ಮಾಡುವುದು ಸಹ ದುಶ್ಚಟವಾಗಿದೆ ಎಂದು ಓಲೇಮಠದ ಶ್ರೀಗಳಾದ ಆನಂದ ದೇವರು ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಮತ್ತೊಬ್ಬರ ನಿಂದನೆ, ಮನಸ್ಸು ನೋಯಿಸುವುದು ದುಶ್ಚಟವೇ ಆಗಿದೆ. ಮದ್ಯಪಾನ. ಧೂಮಪಾನ ಮಾಡುವುದು ಅಷ್ಟೇ ಅಲ್ಲ ಇನ್ನೊಬ್ಬರ ಮನಸಿಗೆ ನೋವುಂಟು ಮಾಡುವ ಹಾಗೆ ನಿಂದನೆ ಮಾಡುವುದು ಸಹ ದುಶ್ಚಟವಾಗಿದೆ ಎಂದು ಓಲೇಮಠದ ಶ್ರೀಗಳಾದ ಆನಂದ ದೇವರು ಹೇಳಿದರು. ಶುಕ್ರವಾರ ನಗರದ ಶ್ರೀ ರುದ್ರಾವಧೂತ ಮಠದಲ್ಲಿ ನಡೆದ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಹಾಗೂ ರುದ್ರಾಕ್ಷಿ ಧಾರಣ ಸದ್ಭಾವನಾ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದರು. ವಿವಿಧ ಚಟಗಳಿಂದ ದೇಹ ಹಾಳಾಗುತ್ತದೆ, ಆರೋಗ್ಯ ಕೆಡುತ್ತದೆ. ಆದರೆ ಪರರ ನಿಂದನೆಯಿಂದ ಮನಸುಗಳು ಹಾಳಾಗುತ್ತವೆ, ಚಟಗಳ ದಾಸರಾದ ಯುವಕರು ಚಿಕ್ಕ ವಯಸ್ಸಿನಲ್ಲಿ ವೃದ್ಧರಂತೆ ಕಾಣುತ್ತಾರೆ. ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ, ಅದು ನಮಗೆ ನೀಡುವ ದೊಡ್ಡ ಕೊಡುಗೆ ಎಂದು ಭಾವಿಸುತ್ತೇವೆ ಎಂದರು.

ಶ್ರೀ ರುದ್ರಾವಧೂತ ಮಠದ ಹಿರಿಯ ಶ್ರೀಗಳಾದ ಸಹಜಾನಂದ ಅವಧೂತರು, ಝಂಜರವಾಡದ ಬಸವರಾಜೇಂದ್ರ ಶರಣರು ಆರ್ಶೀವಚನ ನೀಡಿದರು. ವಿಶ್ವನಾಥ ದೇವರು ಹೂವಿಹಿಪ್ಪರಗಿ, ಕೃಷ್ಣಾನಂದ ಅವಧೂತರು, ಡಾ,ವಿಜಯಲಕ್ಷ್ಮೀ ತುಂಗಳ, ನಗರಸಭೆ ಸದಸ್ಯರು ಸಿದ್ದು ಮೀಶಿ ಮಾತನಾಡಿದರು. ಪ್ರದೀಪ ಮೆಟ್ಟಗುಡ್ಡ ಪ್ರಾಸ್ತಾವಿಕ ಮಾತನಾಡಿದರು.

ರಂಗೋಲಿಯ ಚಿತ್ತಾರದ ಸ್ವಾಗತ

ನಗರದ ರುದ್ರಾಸ್ವಾಮಿ ಪೇಠದ ಓಣಿಗೆ ಓಲೇಮಠದ ಆನಂದ ದೇವರು ಪಾದಯಾತ್ರೆ ನಿಮಿತ್ತ ಗಲ್ಲಿಯ ಮಹಿಳೆಯರು ನಸುಕಿನ ಜಾವದಲ್ಲಿ ಮನೆಯ ಅಂಗಳ ಹಾಗೂ ರಸ್ತೆಯ ಉದ್ದಗಲಕ್ಕೂ ರಂಗೋಲಿ ಚಿತ್ರ ಬಿಡಿಸಿದ್ದರು ಮಹಿಳೆಯರು ಆರತಿ ಮಾಡುವ ಮೂಲಕ ಶ್ರೀಗಳನ್ನು ಬರಮಾಡಿಕೊಂಡರು. ಆನಂದ ದೇವರು ಪುಟ್ಟ ಬಾಲಕರಿಗೆ ಹಾಗೂ ಯುವಕ, ಯುವತಿಯರಿಗೆ ರುದ್ರಾಕ್ಷಿ ಧಾರಣ ಮಾಡುತ್ತ ಪಾದಯಾತ್ರೆ ನಡೆಸಿದರು. ಶಿವಾನಂದ ಕೊಣ್ಣೂರ, ರವಿ ಯಡಳ್ಳಿ, ಮಲ್ಲು ಜೈನಾಪೂರ, ಬಸು ಬಳಗಾರ, ಪ್ರಭು ಹಿರೇಮಠ, ಬಸಯ್ಯ ಶಾಸ್ತ್ರೀ, ಈರಯ್ಯ ಮಠಪತಿ, ಕಸ್ತೂರಿ ಜೈನಾಪೂರ ಸೇರಿದಂತೆ ನೂರಾರು ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.

Share this article