ಸಂವಿಧಾನದ ಆಶಯಗಳನ್ನು ಆಚರಣೆಗೆ ತನ್ನಿ: ಚಿಕ್ಕರಂಗಪ್ಪ

KannadaprabhaNewsNetwork |  
Published : Sep 19, 2025, 01:00 AM IST
ಮಧುಗಿರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್‌ ವಿದ್ಯಾರ್ಥಿ ನಿಲಯಗಳಲ್ಲಿ ಏರ್ಪಡಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ನಿಲಯ ಪಾಲಕ ಚಿಕ್ಕರಂಗಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಪ್ರಜಾಪ್ರಭುತ್ವದ ಉದ್ದೇಶಗಳು ಅಕ್ಷರಗಳಲ್ಲಿರುವಂತಯೇ ಆಚರಣೆಗೆ ತಂದಾಗ ಪ್ರತಿಯೊಬ್ಬರು ಸಾಧನ ಸಂಪತ್ತುಗಳನ್ನು ನ್ಯಾಯ ಬದ್ಧವಾಗಿ ಪಡೆಯಲು ಅವಕಾಶವಿದೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಸಂವಿಧಾನದಲ್ಲಿ ಉಲ್ಲೇಖಿತವಾಗಿರುವ ಎಲ್ಲ ವಿಧಿ ವಿಧಾನಗಳನ್ನು ಪಾಲಿಸುವ ಮೂಲಕ ತಾವು ಪಡೆದುಕೊಳ್ಳ ಬಹುದಾದ ಸವಲತ್ತುಗಳನ್ನು ಶಾಸನಬದ್ಧವಾಗಿ ಪಡೆದುಕೊಳ್ಳುವುದರಿಂದ ಎಲ್ಲರ ಹಿತ, ಅಭ್ಯುದಯ, ದೇಶದ ಪ್ರಗತಿ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕ ಚಿಕ್ಕರಂಗಪ್ಪ ತಿಳಿಸಿದರು.

ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಂಬರ್ 1 ಈ ಎರಡು ವಿದ್ಯಾರ್ಥಿ ನಿಲಯಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವದ ಉದ್ದೇಶಗಳು ಅಕ್ಷರಗಳಲ್ಲಿರುವಂತಯೇ ಆಚರಣೆಗೆ ತಂದಾಗ ಪ್ರತಿಯೊಬ್ಬರು ಸಾಧನ ಸಂಪತ್ತುಗಳನ್ನು ನ್ಯಾಯ ಬದ್ಧವಾಗಿ ಪಡೆಯಲು ಅವಕಾಶವಿದೆ. ಪಠ್ಯ ಕ್ರಮದಲ್ಲಿ ಪ್ರಜಾಪ್ರಭುತ್ವದ ಮಹತ್ವವನ್ನು ಅಳವಡಿಸಿ ನಾಳಿನ ಪ್ರಜೆಗಳನ್ನು ರೂಪಿಸುವ ಕಾರ್ಯ ಶಿಕ್ಷಕರು, ಶಿಕ್ಷಣ ತಜ್ಞರು, ಆಡಳಿತ ನೀತಿ, ಆಚರಣೆಯಲ್ಲಿ ಕಡ್ಡಾಯವಾಗಿ ತರಬೇಕು. ಮುಕ್ತ ಮತದಾನದಿಂದ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕೊಂಡರೆ ಸಮಾಜದ ಪ್ರಗತಿ ಸುಲಭಸಾಧ್ಯ ನಮ್ಮ ಮತ ನಮ್ಮ ಹಕ್ಕು ಘೋಷ ವಾಕ್ಯ ವಾಕ್ಯದ ಮೂಲಕ ಮಕ್ಕಳಿಗೆ ಅರಿವು ಮೂಡಿಸಿ ಸಂವಿಧಾನ ಮಹತ್ವದ ಬಗ್ಗೆ ಹೆಚ್ಚು ಗ್ರಹಿಕೆ ಶಿಕ್ಷಣದಲ್ಲಾಗಬೇಕು. ಆಸೆ ಅಮಿಷಗಳಿಗೆ ಬಲಿಯಾಗಿ ಮತ ಮಾರಿಕೊಳ್ಳಬೇಡಿ ಎಂದು ಎಚ್ಚರಿಸಿದರು.

ಮಕ್ಕಳು ಬಾಲ್ಯದಲ್ಲಿಯೇ ಚನ್ನಾಗಿ ಓದಿ ಮುಂದೆ ಬರಬೇಕು.ಸಂವಿಧಾನದ ಆಶೆಯಗಳನ್ನು ಎಲ್ಲರೂ ಪಾಲಿಸಬೇಕು. ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವ ದಿನ ಗಟ್ಟಿಗೊಳಿಸಿ ಎಲ್ಲರೂ ಸಹಬಾಳ್ವೆಯಿಂದ ನೆಮ್ಮದಿಯ ಜೀವನ ನಡೆಸಬೇಕು ಎಂದರು.

ಕಿರಿಯ ನಿಲಯಪಾಲಕ ಕೃಷ್ಣ ಮೂರ್ತಿ, ಅಡುಗೆ ಸಿಬ್ಬಂದಿ ದೀಪರಾಣಿ, ಮಂಜಮ್ಮ, ಶ್ವೇತ, ಮನೋಜ್, ಸಿದ್ದಗಂಗಯ್ಯ, ರವಿ, ಶ್ರೀನಿವಾಸ್‌, ರಮೇಶ್‌, ಲತಾ, ಕದುರಮ್ಮ ಹಾಗೂ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ