ಕನ್ನಡಪ್ರಭ ವಾರ್ತೆ ಕಲಾದಗಿ
ಪಲ್ಲಕ್ಕಿ ಮಹೋತ್ಸವದಲ್ಲಿ ಡೊಳ್ಳಿನ ವಾಲಗ ನೋಡುರನ್ನು ರಂಜಿಸಿತು.ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ವಾಲಗ ವಾದನ ತಂಡದವರು ಲಯಬದ್ಧ ವಾದನ ಕೇಳುಗರ ಗಮನ ಸೆಳೆಯಿತು. ಗೊವಿಂದಕೊಪ್ಪ ಕ್ರಾಸ್‌ನಿಂದ ಪ್ರಾರಂಭಗೊಂಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದು ಬೀರಲಿಂಗೇಶ್ವರ ದೇವಾಲಯದವರೆಗೆ ಸಾಗಿತು. ಎರಡು ಸತ್ತಗಿ, ವಿವಿಧ ಗ್ರಾಮದಿಂದ ಆಗಮಿಸಿದ್ದ 25 ಪಲ್ಲಕ್ಕಿಗಳ ಪಾಲ್ಗೊಂಡಿದ್ದವು. ಭಕ್ತರು ಪರಸ್ಪರ ಭಂಡಾರ ತೂರಿ ಭಕ್ತಿಭಾವ ಮೆರೆದರು. ಇಡೀ ಗ್ರಾಮವೇ ಸಂಪೂರ್ಣ ಭಂಡಾರಮವಾಗಿತ್ತು. ಪಲ್ಲಕ್ಕಿ ಹೋತ್ತ ಪೂಜಾರರು ದೊಡ್ಡ ಕಡಾಣಿಗೆಯಲ್ಲಿನ ಸುಡು ಹುಗ್ಗಿಗೆ ಕೈಹಾಕಿ ಹಿಡಿಯಳತೆಯಷ್ಟು ಹುಗ್ಗಿ ತೆಗೆದು ಬೀರಲಿಂಗೇಶ್ವರ ದೇವರಿಗೆ ನೈವೇದ್ಯ ಎಡಿ ತೆಗೆದರು. ಪಲ್ಲಕ್ಕಿ ಹೊತ್ತ ಐವರು ಪೂಜಾರರು ಬೆಂಕಿ ಬಿಸಿಯ ಸುಡು ಹುಗ್ಗಿಗೆ ಕೈ ಹಾಕಿ ನೈವೇದ್ಯ ತೆಗೆಯುತ್ತಿದ್ದ ನೆರೆದಿದ್ದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಕೈ ಮುಗಿದು ನಮಿಸಿದರು.