ಪುತ್ತೂರು: ಸಂಪ್ಯದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಿರಂತರವಾಗಿ ಪ್ರತಿ ತಿಂಗಳು ನಡೆಸಿಕೊಂಡು ಬಂದಿರುವ ಉಚಿತ ವೈದ್ಯಕೀಯ ಶಿಬಿರದ ೫೦ನೇ ವೈದ್ಯಕೀಯ ಶಿಬಿರವು ಭಾನುವಾರ ನಡೆಯಿತು.
ವೈದ್ಯಕಿಯ ಶಿಬಿರ ಉದ್ಘಾಟಿಸಿದ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಮಾತನಾಡಿ, ನಮ್ಮ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇಲ್ಲದೇ ಇದ್ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿರಂತರವಾಗಿ ೫೦ ಶಿಬಿರ ನಡೆಸಿಕೊಂಡು ಬರುವುದು ಸುಲಭದ ಕೆಲಸವಲ್ಲ. ಡಾ. ಸುರೇಶ್ ಪುತ್ತೂರಾಯ ಅವರ ನೇತೃತ್ವದಲ್ಲಿ ಉತ್ತಮ ಸೇವಾ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.ವೈದ್ಯಕೀಯ ಶಿಬಿರದ ಕೌಂಟರ್ ಉದ್ಘಾಟಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಸಕಾಲದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಸೂಕ್ತ ಔಷಧೋಪಚಾರ ನಡೆಸಿದರೆ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಎಂದರು. ಸಂಪ್ಯ ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ರಾಮನಗರ ನವಚೇತನಾ ಯುವಕ ಮಂಡಲ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪುತ್ತೂರು ಐಕ್ಯ ಕಲಾ ಸೇವಾ ಟ್ರಸ್ಟ್ ಸಹಕಾರದೊಂದಿಗೆ ನಡೆದ ಈ ಶಿಬಿರವನ್ನು ಧನ್ವಂತರಿ ಹವನದೊಂದಿಗೆ ಆರಂಭಿಸಲಾಯಿತು. ಶಿಬಿರಾರ್ಥಿಗಳ ರಕ್ತ ಪರೀಕ್ಷೆ , ಮಧುಮೇಹ, ಬಿ.ಪಿ. ಪರೀಕ್ಷೆ, ಸ್ಕ್ರೀನಿಂಗ್ ನಡೆಸಿದ ಬಳಿಕ ಅವರಿಗೆ ಅವಶ್ಯಕ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯರಗಳ ಬಳಿಗೆ ಕಳುಹಿಸಿ ಅಲ್ಲಿ ಚಿಕಿತ್ಸೆ ನೀಡಲಾಯಿತು. ಜೊತೆಗೆ ರಕ್ತ ಪರೀಕ್ಷೆ, ಥೈರಾಯಿಡ್ ಟೆಸ್ಟ್, ಇಸಿಜಿ, ಮಧುಮೇಹ ರಕ್ತ ಪರೀಕ್ಷೆಗಳನ್ನು ನಡೆಸಿ ಉಚಿತ ಔಷಧ ವಿತರಿಸಲಾಯಿತು. ಶಿಬಿರಕ್ಕಾಗಿ ದೇವಸ್ಥಾನದ ಆವರಣದಲ್ಲಿ ಪ್ರತ್ಯೇಕವಾಗಿ ೧೫ ಚಿಕಿತ್ಸಾ ವಿಭಾಗಗಳನ್ನು ತೆರೆದು ಅದರಲ್ಲಿ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಚಿತ ಚಿಕಿತ್ಸೆ, ತಪಾಸಣೆ ಹಾಗೂ ರೋಗಿಗಳ ಅವಶ್ಯಕತೆಗನುಗುಣವಾಗಿ ಔಷಧಗಳನ್ನು ಉಚಿತವಾಗಿ ವಿತರಿಸಲಾಗಿತ್ತು.ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಕೊರೋನಾ ಬಳಿಕದ ಆರ್ಥಿಕ ಸಂಕಷ್ಟದ ಅವಧಿಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗಿತ್ತು. ಭಕ್ತರನ್ನು ದೇವಸ್ಥಾನಕ್ಕೆ ಬರುವಂತೆ ಕಾರ್ಯಕ್ರಮ ನಡೆಸುವ ಕುರಿತು ವ್ಯವಸ್ಥಾನಾ ಸಮಿತಿ ಸಭೆಯಲ್ಲಿ ಚರ್ಚೆ ನಡೆದಾಗ, ವೈದ್ಯನಾಗಿ ನಾನು ಚಿಕಿತ್ಸೆ ನೀಡುವ ಕೆಲಸವನ್ನಷ್ಟೇ ಮಾಡಬಲ್ಲೆ ಎಂದಿದ್ದೆ. ಹೀಗೆ ಎಲ್ಲರ ಒಮ್ಮತದಿಂದ ಆರಂಭಗೊಂಡ ಶಿಬಿರವು ಇಂದು ಸಮಾಜದ ಹಲವು ಮಂದಿ ದಾನಿಗಳು, ಸಂಘ ಸಂಸ್ಥೆಗಳ ನೆರವಿನಿಂದ ವೈದ್ಯಕೀಯ ಶಿಬಿರವಾಗಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದರು.ವೈದ್ಯಕೀಯ ವಿಭಾಗದಲ್ಲಿ ಡಾ. ಜೆ.ಸಿ. ಅಡಿಗ, ಡಾ. ಎಂ.ಎಲ್. ಭಟ್, ಡಾ. ಚೇತನ್ ಸುಬ್ರಹ್ಮಣ್ಯ, ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಡಾ. ಯಶವಂತ್, ಡಾ. ರವಿಪ್ರಕಾಶ್, ಇಎನ್‌ಟಿ ವಿಭಾಗದಲ್ಲಿ ಡಾ. ಅರ್ಚನಾ, ಡಾ. ಈಶ್ವರ ಪ್ರಕಾಶ್, ಡಾ. ಹರೀಶ್ ಮಡಿವಾಳ್, ಕಣ್ಣಿನ ವಿಭಾಗದಲ್ಲಿ ರೋಟರಿ ಆಸ್ಪತ್ರೆಯ ವೈದ್ಯ ಡಾ. ವಿಷ್ಣು ಪೂಜಾ, ಡಾ. ಆಶಾ ಪುತ್ತೂರಾಯ, ಹೃದ್ರೋಗ ವಿಭಾಗದಲ್ಲಿ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ನರರೋಗ ವಿಭಾಗದಲ್ಲಿ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಡಾ. ಎಂ.ಎಸ್. ಶೆಣೈ, ಡಾ. ಅರ್ಚನಾ ಕರಿಕ್ಕಳ, ಸ್ತ್ರೀರೋಗ ವಿಭಾಗದಲ್ಲಿ ಡಾ. ರಾಜೇಶ್ವರಿ ಪಡಿವಾಳ್, ಡಾ. ಅರ್ಚನಾ ಕಾವೇರಿ, ಎಲುಬು ಮತ್ತು ಕೀಲು ವಿಭಾಗದಲ್ಲಿ ಡಾ. ಸಚಿನ್‌ಶಂಕರ್ ಹಾರಕೆರೆ, ಡಾ. ಅಜಿತ್, ಡಾ. ನಾಗಶ್ರೀ ಹಾರಕೆರೆ, ಚರ್ಮರೋಗ ವಿಭಾಗದಲ್ಲಿ ಡಾ. ಬದರಿನಾಥ್, ದಂತ ಚಿಕಿತ್ಸಾ ವಿಭಾಗದಲ್ಲಿ ಡಾ. ಕೃಷ್ಣಪ್ರಸಾದ್, ಡಾ. ಕೃತಿಕಾ, ಹೋಮಿಯೋಪತಿ ವಿಭಾಗದಲ್ಲಿ ಡಾ. ರಮೇಶ್ ಭಟ್, ಶ್ವಾಸಕೋಶ ಚಿಕಿತ್ಸಾ ವಿಭಾಗದಲ್ಲಿ ಡಾ. ಪ್ರೀತಿ ರಾಜ್ ಬಲ್ಲಾಳ್, ಮನೋರೋಗ ವಿಭಾಗದಲ್ಲಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಆಯುರ್ವೇದ ವಿಭಾಗದಲ್ಲಿ ಡಾ. ರವಿಶಂಕರ ಪೆರುವಾಜೆ, ಡಾ. ಸಾಯಿ ಪ್ರಕಾಶ್, ಡಾ. ಶಶಿಧರ್ ಕಜೆ, ಡಾ. ರವಿನಾರಾಯಣ ಹಾಗೂ ಡಾ. ಕುಲಕರ್ಣಿ ತಪಾಸಣೆ ನಡೆಸಿದರು. ವೈದ್ಯಕೀಯ ಉಪನ್ಯಾಸ:
ಕಾರ್ಯಕ್ರಮದಲ್ಲಿ ಬೆಳಗ್ಗೆ ಡಾ. ಗಣೇಶ್‌ಪ್ರಸಾದ್ ಮುದ್ರಾಜೆ ಅವರಿಂದ ಮಾದಕ ವ್ಯಸನ-ದುಷ್ಪರಿಣಾಮ ಹಾಗೂ ಡಾ. ಪ್ರೀತಿ ರಾಜ್ ಬಲ್ಲಾಳ್ ಅವರಿಂದ ಪ್ರಥಮ ಚಿಕಿತ್ಸೆ ಪ್ರಾತ್ಯಕ್ಷಿಕೆ ನಡೆಯಿತು.೩೩೦ ಮಂದಿಗೆ ಚಿಕಿತ್ಸೆ:ಶಿಬಿರದಲ್ಲಿ ೧೫ ಪ್ರತ್ಯೇಕ ವಿಭಾಗಳಲ್ಲಿ ಒಟ್ಟು ೩೩೦ ಮಂದಿ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.ಆರೋಗ್ಯ ರಕ್ಷಾ ಸಮಿತಿ ಗೌರವ ಸಲಹೆಗಾರ ಅರುಣ್ ಕುಮಾರ್ ಪುತ್ತಿಲ, ಸಂಪ್ಯ ನವಚೇತನ ಯುವಕ ಮಂಡಲದ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ಕೆ. ಮುಕ್ರಂಪಾಡಿ ಹಾಗೂ ಐಕ್ಯಕಲಾ ಸೇವಾ ಟ್ರಸ್ಟ್ನ ಮಾಜಿ ಅಧ್ಯಕ್ಷ ಚೇತನ್ ಮೊಟ್ಟೆತ್ತಡ್ಕ ಉಪಸ್ಥಿತರಿದ್ದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ರೈ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಉಮೇಶ್ ಎಸ್.ಕೆ. ಸಂಪ್ಯ ವಂದಿಸಿದರು. ಗೌರವ ಸದಸ್ಯೆ ಹರಿಣಿ ಪುತ್ತೂರಾಯ ನಿರೂಪಿಸಿದರು.ಸ