ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ ವೆಬ್‌ಸೈಟ್ ಅನಾವರಣ

KannadaprabhaNewsNetwork |  
Published : Oct 15, 2026, 02:45 AM IST
ಮಹಾಸ್ವಾಮಿ | Kannada Prabha

ಸಾರಾಂಶ

ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶತಮಾನದ ಹೊಸ್ತಿಲಲ್ಲಿರುವ ಪ್ರತಿಷ್ಠಿತ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ನೂತನ ವೆಬ್‌ಸೈಟ್ ಅನ್ನು ನವರಾತ್ರಿಯ ಮೊದಲ ದಿನದ ಶುಭ ಸಂದರ್ಭದಲ್ಲಿ, ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅನಾವರಣಗೊಳಿಸಿದರು.

ಬೆಂಗಳೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶತಮಾನದ ಹೊಸ್ತಿಲಲ್ಲಿರುವ ಪ್ರತಿಷ್ಠಿತ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ನೂತನ ವೆಬ್‌ಸೈಟ್ ಅನ್ನು ನವರಾತ್ರಿಯ ಮೊದಲ ದಿನದ ಶುಭ ಸಂದರ್ಭದಲ್ಲಿ, ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಶಾಖೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅನಾವರಣಗೊಳಿಸಿದರು.ಆಶೀರ್ವಚನ ನೀಡಿದ ಸ್ವಾಮೀಜಿ, ಪುತ್ತೂರು ಸೇರಿದಂತೆ ಕರಾವಳಿ ಭಾಗದ ಕರಕುಶಲ ಕರ್ಮಿಗಳು ತಲೆಮಾರುಗಳಿಂದ ಬೆಳೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಚಿನ್ನದ ವಿನ್ಯಾಸಗಳು ಹಾಗೂ ವಿಶಿಷ್ಟ ಕಲಾಪ್ರಕಾರಗಳನ್ನು ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ವೆಬ್‌ಸೈಟ್ ರೂಪಿಸಿರುವುದು ಶ್ಲಾಘನೀಯ ಎಂದರು.ಸ್ಥಳೀಯ ಕರಕುಶಲ ಕರ್ಮಿಗಳ ಕಲಾನೈಪುಣ್ಯ, ಪರಂಪರೆ ಹಾಗೂ ಚಿನ್ನದ ಆಭರಣಗಳ ವಿಶಿಷ್ಟ ವಿನ್ಯಾಸಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ಈಶ್ವರ ಮುರಳಿ ಅವರು ಕೈಗೊಂಡಿರುವ ಪ್ರಯತ್ನ ಪ್ರಶಂಸನೀಯವಾಗಿದೆ ಎಂದರು.ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ನೂತನ ವೆಬ್‌ಸೈಟ್‌ನ ಕಾರ್ಯ ಪ್ರಸ್ತುತ ಪ್ರಗತಿಯಲ್ಲಿದ್ದು, ಆಭರಣಗಳ ವೈವಿಧ್ಯಮಯ ವಿನ್ಯಾಸಗಳು, ಸಾಂಪ್ರದಾಯಿಕ ಚಿನ್ನದ ಕಲಾಕೃತಿಗಳು ಹಾಗೂ ಸಂಸ್ಥೆಯ ಪರಂಪರೆ ಒಳಗೊಂಡ ಸಮಗ್ರ ವೆಬ್‌ಸೈಟ್ ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ತಿಂಗಳೊಳಗೆ ವೆಬ್‌ಸೈಟ್ ಮೂಲಕ ಆನ್‌ಲೈನ್ ಮಾರಾಟ ಆರಂಭಿಸಲು ಸಂಸ್ಥೆ ಯೋಜಿಸಿದೆ. ಇದರಿಂದ ಗ್ರಾಹಕರು ಮನೆಯಲ್ಲಿಯೇ ಕುಳಿತು ಆಭರಣಗಳ ವಿನ್ಯಾಸ ವೀಕ್ಷಿಸಿ, ಆನ್‌ಲೈನ್ ಮೂಲಕ ಖರೀದಿಸುವ ಅವಕಾಶ ಪಡೆಯಲಿದ್ದಾರೆ. ಈ ಉಪಕ್ರಮವು ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನ ಸಾಂಪ್ರದಾಯಿಕ ಆಭರಣಗಳ ವೈಭವವನ್ನು ದೇಶ-ವಿದೇಶಗಳ ಗ್ರಾಹಕರಿಗೆ ತಲುಪಿಸುವುದರ ಜೊತೆಗೆ ಸಂಸ್ಥೆಯ ಡಿಜಿಟಲ್ ವಾಣಿಜ್ಯ ಬೆಳವಣಿಗೆಗೆ ಹೊಸ ದಾರಿ ತೆರೆಯಲಿದೆ.ವೆಬ್‌ಸೈಟ್: www.shivabhatjewellers.com

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನರೂರು ಕ್ಷೇತ್ರ ಬ್ರಹ್ಮಕಲಶ ಲಾಂಛನ ಬಿಡುಗಡೆ
ಕುಂಟಿಕಾನಮಠ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ