ಗದಗ: ಶಿರಹಟ್ಟಿ ತಾಲೂಕಿನ ಮಾಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯೊಬ್ಬರು ವಿಭಿನ್ನ ವಿಧಾನಗಳಲ್ಲಿ ಕಲಿಸುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರೊನಾ ಸಮಯದಲ್ಲಿ ಸ್ಮಾರ್ಟ್ ಪೋನ್ ಮೂಲಕ ತಮ್ಮ ವಿಜಯಲಕ್ಷ್ಮೀ ಚೈಲ್ಡ್ ಎಜ್ಯುಕೇಶನ್ ಎಂಬ ಯು-ಟ್ಯೂಬ್ ಚಾನೆಲ್ ಮೂಲಕ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯು-ಟ್ಯೂಬ್ ಚಾನೆಲ್‌ಗೆ 12 ಸಾವಿರಕ್ಕೂ ಹೆಚ್ಚು ಸಬ್‌ಸ್ಕೈಬರ್ ಇದ್ದು 727 ವಿಡಿಯೋಗಳನ್ನು ಒಳಗೊಂಡಿದೆ. ಈ ಚಾನೆಲ್ ಅನೇಕ ಮಕ್ಕಳಿಗೆ, ಪಾಲಕರಿಗೆ, ಶಿಕ್ಷಕರಿಗೆ ಸಹಾಯಕವಾಗಿದೆ.
ಇವರ ಕವನ, ಲೇಖನಗಳು ರಾಜ್ಯದ ಹೆಸರಾಂತ ಪತ್ರಿಕೆಗಳಲ್ಲಿ ಹಾಗೂ ಶೈಕ್ಷಣಿಕ ಪತ್ರಿಕಗಳಲ್ಲಿ ಪ್ರಕಟವಾಗಿವೆ. ಇಂಗ್ಲಿಷ್‌ನಲ್ಲಿ ಮಾತನಾಡುವ ಮೂಲಕ ಮಕ್ಕಳಿಗ ಇಂಗ್ಲಿಷ್ ಕಲಿಯಲು ಪ್ರೋತ್ಸಾಹಿಸುತ್ತಾರೆ. ಮಕ್ಕಳು ನಲಿಯುತ್ತಾ ಕಲಿಯಲು ಮಾಡಿ ಕಲಿ ಅಂತಹ ವಿಶೇಷ ಚಟುವಟಿಕೆಗಳನ್ನು ಅನ್ವಯಿಸಿಕೊಂಡು, ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಸರಕಾರಿ ಶಾಲೆ ಹಾಗೂ ಮಕ್ಕಳ ಸಬಲೀಕರಣಕ್ಕಾಗಿ ತುಂಬಾ ಆಸಕ್ತಿ ವಹಿಸಿ ಮಕ್ಕಳಿಗೆ ಪಾಠ-ಶಾಲೆ ಎಂದರೆ ಅತಿ ಹೆಚ್ಚು ಇಷ್ಟ ಪಡುವಂತೆ ಶ್ರಮಿಸುತ್ತಿದ್ದಾರೆ. ಸಹ ಶಿಕ್ಷಕಿ ಅಕ್ಕಿ ಅವರಿಂದ ತಾಲೂಕು ಹಂತದಿಂದ ಹಿಡಿದು ಜಿಲ್ಲಾ ಹಂತದ ಅಧಿಕಾರಿಗಳಿಂದ ತುಂಬಾ ಮೆಚ್ಚುಗೆಯೇ ಶಾಲೆಯಾಗಿ ಮನ್ನಣೆ ಗಳಿಸಿದೆ.ಇವರು 2018ರಲ್ಲಿ ಮೈಸೂರು ಅಸೋಸಿಯೇಶನ್ ಮುಂಬೈ ವತಿಯಿಂದ ನಡೆದ ಜಾಗತಿಕ ಕವನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
2019ರ ಸೆ.5ರ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಉತ್ತಮ ನಲಿ-ಕಲಿ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ.