ಇಂದಿರಾ ಕ್ಯಾಂಟಿನ್‍ನಲ್ಲಿ ಗುಣಮಟ್ಟದ ಆಹಾರ, ಸ್ವಚ್ಛತೆಗೆ ಆದ್ಯತೆ ಅಗತ್ಯ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Nov 29, 2024, 01:02 AM IST
ಕಡೂರು ಪಟ್ಟಣದ ಕೆಎಲ್‍ವಿ ವೃತ್ತದಲ್ಲಿ ನೀರಿನಕಾರಂಜಿ ಅಳವಡಿಸುವ ಪ್ರಗತಿಯ ಕಾಮಗಾರಿಯನ್ನು ಪುರಸಭಾಧ್ಯಕ್ಷ ಭಂಡಾರಿಶ್ರೀನಿವಾಸ್ ಪರಿಶೀಲಿಸಿದರು. ಉಪಾಧ್ಯಕ್ಷೆ ಮಂಜುಳಾಚಂದ್ರು, ಕೆ.ಎಸ್.ಮಂಜುನಾಥ್, ಮೂರ್ತಿರಾವ್, ಕೆ.ಆರ್.ಚಂದ್ರು, ಚಿನ್ನರಾಜು, ಶ್ರೇಯಸ್‍ಕುಮಾರ್, ಶ್ರೀನಿವಾಸ್ ಮೂರ್ತಿ ಮತ್ತಿತರಿದ್ದರು. | Kannada Prabha

ಸಾರಾಂಶ

ಕಡೂರು, ಬಡವರ ಜೇಬಿಗೆ ಹೊರೆಯಾಗದಂತೆ ಹಸಿವು ತಣಿಸುವ ಇಂದಿರಾ ಕ್ಯಾಂಟಿನ್‍ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆಹಾರದ ಗುಣಮಟ್ಟ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ

ಕನ್ನಡಪ್ರಭ ವಾರ್ತೆ, ಕಡೂರು

ಬಡವರ ಜೇಬಿಗೆ ಹೊರೆಯಾಗದಂತೆ ಹಸಿವು ತಣಿಸುವ ಇಂದಿರಾ ಕ್ಯಾಂಟಿನ್‍ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆಹಾರದ ಗುಣಮಟ್ಟ ಕಾಪಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.ಪಟ್ಟಣದಲ್ಲಿನ ಕೆಎಲ್‍ವಿ ವೃತ್ತದ ಬಳಿ ಇರುವ ಇಂದಿರಾ ಕ್ಯಾಂಟಿನ್‍ಗೆ ಗುರುವಾರ ಪುರಸಭೆ ಉಪಾಧ್ಯಕ್ಷ ಮಹಾಗೂ ಮುಖ್ಯಾಧಿಕಾರಿಗಳ ಜೊತೆಗೂಡಿ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿದರು. ರಾಜ್ಯದ ಬಡ ಜನತೆಗೆ ಕಡಿಮೆ ದರದಲ್ಲಿ ಆಹಾರ ದೊರಕ ಬೇಕೆಂಬ ನಿಟ್ಟಿನಲ್ಲಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ಈಗಾಗಲೇ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಪಟ್ಟಣದಲ್ಲಿಯೂ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ಯಾಂಟಿನ್‍ಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳ ಬಗ್ಗೆಯೂ ಆಲಿಸಲಾಗಿದೆ ಎಂದರು.

ಹಲವು ಸಮಸ್ಯೆಯಿಂದ ಕೂಡಿದ್ದ ಇಂದಿರಾ ಕ್ಯಾಂಟಿನ್‍ಗೆ ಪುರಸಭೆಯಿಂದ ಸೋರುತ್ತಿದ್ದ ಮೇಲ್ಚಾವಣಿ ದುರಸ್ತಿ ನಡೆಸಿ, ಕುಡಿಯುವ ನೀರಿನ ಅಳವಡಿಕೆ. ಫಿಲ್ಟರ್ ಮತ್ತು ಆಹಾರದ ತ್ಯಾಜ್ಯಗಳ ಶುಚಿತ್ವಕ್ಕಾಗಿ ಸ್ವಚ್ಛತೆ ಕಾರ್ಯ, ಸಿಂಟೆಕ್ಸ್, ಫ್ಯಾನ್‍ಗಳು, ಸಿಸಿ ಕ್ಯಾಮೆರಾ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿಕೊಡಲಾಗಿದ್ದು, ಬಹುಮುಖ್ಯವಾಗಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಕ್ಯಾಂಟಿನ್ ವ್ಯವಸ್ಥಾಪಕರಿಗೆ ಸೂಚಿಸಿದರು ಎಂದರು.ಇಂದಿರಾ ಕ್ಯಾಂಟಿನ್ ವ್ಯವಸ್ಥಾಪಕ ನೂತನ್ ಮಾತನಾಡಿ, ಜವಬ್ದಾರಿಯುತವಾಗಿ ಸರಕಾರದ ನಿಯಮದಂತೆ ಆಹಾರ ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಆದರೆ ಸಿಬ್ಬಂದಿಗೆ ಸಮರ್ಪಕ ವೇತನ ನೀಡಲು ಬಿಲ್‍ಗಳು ಬಾಕಿ ಉಳಿದು ಕೊಂಡಿದೆ. ಈ ಹಿಂದೆ ಸಣ್ಣಪುಟ್ಟ ದುರಸ್ತಿ ಕಾರ್ಯಗಳು ನಡೆಯದೆ ಕ್ಯಾಂಟಿನ್‍ನಲ್ಲಿ ಮಳೆ ನೀರು ಸೊರುತ್ತಿದ್ದು, ಇದೀಗ ಪುರಸಭೆ ಯಿಂದ ಸರಿಪಡಿಸಿದ್ದಾರೆ ಎಂದರು.ಕಳೆದ ಐದು ತಿಂಗಳಿನಿಂದ ಇಂದಿರಾ ಕ್ಯಾಂಟಿನ್ ಏಜೆನ್ಸಿ ಕಡೆಯಿಂದ ವೇತನ ಪಾವತಿಸದೆ ಇರುವುದು ಸಾಕಷ್ಟು ಸಮಸ್ಯೆ ಯಾಗುತ್ತಿದೆ. ಈ ಬಗ್ಗೆ ವೇತನ ಮಂಜೂರು ಮಾಡಿಸಿಕೊಡುವಂತೆ ಕ್ಯಾಂಟಿನ್‍ನಲ್ಲಿ ಅಡುಗೆ ಸಿಬ್ಬಂದಿ ಸರೋಜಮ್ಮ ಅಧ್ಯಕ್ಷರ ಬಳಿ ನಿವೇದಿಸಿಕೊಂಡರು. ಬಳಿಕ ಕ್ಯಾಂಟಿನ್‍ನಲ್ಲಿ ಬೆಳಿಗ್ಗೆ ತಯಾರಿಸಿದ ಇಡ್ಲಿ ಮತ್ತು ರೈಸ್ ಬಾತ್ ಉಪಹಾರ ಸವಿದರು. ನಂತರ ಕೆಎಲ್‍ವಿ ವೃತ್ತದಲ್ಲಿ ನೀರಿನ ಕಾರಂಜಿ ಅಳವಡಿಕೆ ಪ್ರಗತಿ ಕಾಮಗಾರಿ ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‍ಮೂರ್ತಿ, ಪರಿಸರ ಅಭಿಯಂತರ ಶ್ರೇಯಸ್‍ ಕುಮಾರ್, ಮುಖಂಡರಾದ ಕೆ.ಆರ್.ಚಂದ್ರು, ಚಿನ್ನರಾಜು ಮತ್ತಿತರಿದ್ದರು.-- ಬಾಕ್ಸ್ ಸುದ್ದಿ --- ಪಟ್ಟಣದ ಅಭಿವೃದ್ಧಿ ದೃಷ್ಟಿಕೋನದಲ್ಲಿ ಪುರಸಭೆಯಿಂದ ಹಲವು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯವಾಗಿ ಪಟ್ಟಣದ ಹೃದಯಭಾಗದ ಕೆಎಲ್‍ವಿ ವೃತ್ತದಲ್ಲಿ ಈ ಹಿಂದಿನ ದಿನಮಾನಗಳಲ್ಲಿ ಪಟ್ಟಣದ ಸೌಂದರ್ಯದ ಸೊಬಗು ನೀಡುತ್ತಿದ್ದ ನೀರಿನ ಕಾರಂಜಿಯನ್ನು ಮತ್ತೆ ಕೆಎಲ್‍ವಿ ವೃತ್ತದಲ್ಲಿ ಮರುಕಳಿಸಲು ಸುಮಾರು 10 ಲಕ್ಷ ವೆಚ್ಚದಡಿ ಕಾಮಗಾರಿ ನಡೆಸ ಲಾಗುತ್ತಿದೆ. ಶೀಘ್ರವಾಗಿ ಹೊಸವರ್ಷದ ಕೊಡುಗೆಯಾಗಿ ವೃತ್ತದಲ್ಲಿ ನೀರಿನ ಕಾರಂಜಿ ಉದ್ಘಾಟನೆಗೊಳ್ಳಲಿದೆ. ಈಗಾಗಲೇ ಪೈಪ್‍ಲೈನ್ ಅಳವಡಿಕೆ ಮುಗಿದ್ದಿದ್ದು, ಹಂತಹಂತವಾಗಿ ಕಾಮಗಾರಿ ಪೂರ್ಣಗೊಳಿಸುವ ಪ್ರಕ್ರಿಯೆ ನಡೆಯಲಿದೆ

-ಭಂಡಾರಿ ಶ್ರೀನಿವಾಸ್,

ಪುರಸಭೆ ಅಧ್ಯಕ್ಷ ಕಡೂರು.--ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕು ಪಡೆದುಕೊಳ್ಳುತ್ತಿದೆ. ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದ ದಾನಿ ಈ ಹಿಂದೆ ಪಟ್ಟಣದ ಖ್ಯಾತ ವಾಣಿಜ್ಯೋದ್ಯಮಿಯಾಗಿದ್ದ ಸ್ಮರಣೀಯ ಕೆ.ಎಲ್. ವಿಶ್ವನಾಥಶೆಟ್ಟಿ ಅವರ ಸ್ಮರಣಾರ್ಥ ಕೆಎಲ್‍ವಿ ವೃತ್ತ ಸ್ಥಾಪಿಸಿ ನೀರಿನ ಕಾರಂಜಿ ಅಳವಡಿಸಲಾಗಿತ್ತು. ಕಾಲಕ್ರಮೇಣ ಸ್ಥಗಿತಗೊಂಡು ವೃತ್ತ ಶಿಥಿಲಗೊಂಡಿದ್ದು, ಇದೀಗ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹೊಸ ರೂಪ ನೀಡಿರುವುದು ಪಟ್ಟಣದ ಸೊಬಗು ಹೆಚ್ಚಿಸಿ ಕೊಳ್ಳಲು ಸಹಕಾರಿ.- ಮೂರ್ತಿರಾವ್, ಮಾಜಿ ಅಧ್ಯಕ್ಷ ಪುರಸಭೆ

ಕಡೂರು.28ಕೆಕೆಡಿಯು2ಕಡೂರು ಪಟ್ಟಣದ ಕೆಎಲ್‍ವಿ ವೃತ್ತದಲ್ಲಿ ನೀರಿನಕಾರಂಜಿ ಅಳವಡಿಸುವ ಕಾಮಗಾರಿಯನ್ನು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಪರಿಶೀಲಿಸಿದರು. ಉಪಾಧ್ಯಕ್ಷೆ ಮಂಜುಳಾ ಚಂದ್ರು, ಕೆ.ಎಸ್.ಮಂಜುನಾಥ್, ಮೂರ್ತಿರಾವ್, ಕೆ.ಆರ್.ಚಂದ್ರು, ಚಿನ್ನರಾಜು, ಶ್ರೇಯಸ್‍ಕುಮಾರ್, ಶ್ರೀನಿವಾಸ್ ಮೂರ್ತಿ ಮತ್ತಿತರಿದ್ದರು.

PREV

Recommended Stories

ಛಾಯಾಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ
ಹಿಂದೂ ಸಮಾಜ ಸಂಘಟನೆಗೆ ಆರ್‌ಎಸ್ಎಸ್‌ ಪಾತ್ರ ಅಗಾಧ