ಕೋಟಾ ನೋಟು ಜಾಲ : ಆರು ಆರೋಪಿಗಳ ಬಂಧನ

KannadaprabhaNewsNetwork |  
Published : Jul 03, 2024, 12:21 AM IST
ಅಅಅಅ | Kannada Prabha

ಸಾರಾಂಶ

ನಕಲಿ ನೋಟು ತಯಾರಿಸಿ ಚಲಾವಣೆ ಮಾಡುವ ಹಾಗೂ ಡಬ್ಲಿಂಗ್ ಹೆಸರಲ್ಲಿ ಜನರಿಗೆ ಮೋಸ ಮಾಡುವ ಗ್ಯಾಂಗ್‌ನ್ನು ಪತ್ತೆ ಮಾಡಿ ಆರು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಕಲಿ ನೋಟು ತಯಾರಿಸಿ ಚಲಾವಣೆ ಮಾಡುವ ಹಾಗೂ ಡಬ್ಲಿಂಗ್ ಹೆಸರಲ್ಲಿ ಜನರಿಗೆ ಮೋಸ ಮಾಡುವ ಗ್ಯಾಂಗ್‌ನ್ನು ಪತ್ತೆ ಮಾಡಿ ಆರು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.29 ರಂದು ಕಾರನಲ್ಲಿ ಗೋಕಾಕ ತಾಲೂಕಿನ ನಾಕಾದಿಂದ ಕಡಬಗಟ್ಟಿ ರಸ್ತೆಯ ಮೂಲಕ ಬೆಳಗಾವಿ ಕಡೆಗೆ ₹100 ಮುಖ ಬೆಲೆಯ 305 ಹಾಗೂ ₹500 ಮುಖಬೆಲೆಯ 6792 ನಕಲಿ ನೋಟು ತೆಗೆದುಕೊಂಡು‌ ಹೋಗುತ್ತಿದ್ದರು. ಈ ಸಮಯದಲ್ಲಿ ಗೋಕಾಕ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅರಬಾವಿಯ ಅನ್ವರ ಮಹ್ಮದಸಲೀಂ ಯಾದವಾಡ (26), ಮಹಾಲಿಂಗಪೂರದ ಸದ್ದಾಂ ಮೂಸಾ ಯಡಹಳ್ಳಿ (27), ದುಂಡಪ್ಪ ಮಹಾದೇವ ಒಣಶೇವಿ (27), ರವಿ ಚನ್ನಪ್ಪ ಹ್ಯಾಗಾಡಿ (27), ವಿಠ್ಠಲ ಹಣಮಂತ ಹೊಸಕೋಟಿ (29), ಮಲ್ಲಪ್ಪ ಅಲ್ಲಪ್ಪ ಕುಂಬಾಳಿ (29) ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.ಗೋಕಾಕ ತಾಲೂಕಿನ ಸುತ್ತ-ಮುತ್ತಲಿನ ಗ್ರಾಮದಲ್ಲಿ ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆ ಮಾಡುವ ಹಾಗೂ ಮನಿ ಡಬ್ಬಿಂಗ್ ಮಾಡಿ ಗೋಕಾಕ, ಮಹಾಲಿಂಗಪುರ, ಮುಧೋಳ, ಯರಗಟ್ಟಿ, ಹಿಡಕಲ್ ಡ್ಯಾಂ, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 1 ಲಕ್ಷ ಅಸಲಿ ಹಣಕ್ಕೆ ₹4 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ಕೊಟ್ಟು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿರುವುದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.ಪ್ರಮುಖ ಆರೋಪಿ ಅನ್ವರ್ ಯಾದವಾಡ ಇತನು ಅರಬಾವಿ ಗ್ರಾಮದ ಮನೆಯಿಂದ ಖೋಟಾ ನೋಟ್ ಪ್ರಿಂಟ್ ತೆಗೆಯಲು ಉಪಯೋಗಿಸಿದ ಕಂಪ್ಯೂಟರ್, ಸಿಪಿಯು, ಪ್ರಿಂಟರ್, ಸ್ಕ್ರೀನಿಂಗ್ ಬೋಡ್೯, ಪೆಂಟ್, ಶೈನಿಂಗ್, ಸ್ಟೀಕರ್, ಡಿಕೋಟಿಂಗ್ ಪೌಡರ್, ಪ್ರಿಂಟಿಂಗ್ ಪೇಪರ್, ಕಟರ್ ಬ್ಲೇಡ್ಗಳು, 6 ಮೊಬೈಲ್, ಒಂದು ಬಿಳಿ ಬಣ್ಣದ ಕಾರ್ ಸೇರಿದಂತೆ ₹5,23,900 ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ‌ ಎಂದರು.ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರುತಿ, ಬಸರಗಿ ಸೇರಿದಂತೆ ಗೋಕಾಕ ಡಿಎಸ್ಪಿ, ಗೋಕಾಕ ಸಿಪಿಐ ಗೋಪಾಲ.ಆರ್‌.ರಾಠೋಡ, ಗೋಕಾಕ ಗ್ರಾಮೀಣ ಪಿಎಸೈ ಕಿರಣ ಎಸ್‌.ಮೊಹಿತೆ, ಗೋಕಾಕ ಶಹರ ಪಿಎಸೈ ಕೆ.ಬಿ.ವಾಲಿಕಾರ ಮೊದಲಾದವರು ಉಪಸ್ಥಿತರಿದ್ದರು.ಈ ಪ್ರಕರಣದಲ್ಲಿ ಎಎಸೈ ಒಬ್ಬರು ಶಾಮಿಲಾಗಿರುವ ಬಗ್ಗೆ ಮಾಹಿತಿ ಇದೆ. ಅದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ನಕಲಿ ನೋಟ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

- ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ