ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರತಿವರ್ಷದಂತೆ, ಈ ಬಾರಿಯೂ ಸಹ ಇಲ್ಲಿನ ಗುಣಮಟ್ಟದ ಫಲಿತಾಂಶ ಪಾಲಕರು, ಪೋಷಕರು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿಗಳಿಗೆ ಹೆಮ್ಮೆ ಮೂಡಿಸಿದೆ.
18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಸೃಷ್ಟಿ ನಾಟೇಕಾರ್ (608 ಅಂಕಗಳು), ಶಿವಾನಿ ನಾಗರಾಜ (604 ಅಂಕಗಳು), ಬಿ. ರಾಜೇಶ್ವರಿ (580 ಅಂಕಗಳು), ಆಕಾಶ್ (572 ಅಂಕಗಳು) ಮುಂತಾದವರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.ಪ್ರಥಮ ದರ್ಜೆಯಲ್ಲಿ 50 ವಿದ್ಯಾರ್ಥಿಗಳು ಮತ್ತು ದ್ವಿತೀಯ ದರ್ಜೆಯಲ್ಲಿ 25 ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ಒಟ್ಟು ಶಾಲೆಯ ಫಲಿತಾಂಶ ಪ್ರತಿಶತ ಶೇ.90 ರಷ್ಟು ಆಗಿರುತ್ತದೆ.
ಆರ್.ವಿ. ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಕಮಲಾ ಎನ್. ದೇವರಕಲ್ ಅವರು ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಶಾಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಹಾಗೂ ಪಾಲಕರಿಗೆ ವಿಶೇಷವಾಗಿ ಅಭಿನಂದಿಸಿದರು.ಸಂಸ್ಥೆಯ ಖಜಾಂಚಿಗಳಾದ ಸುರೇಶ್ ಎಂ. ನೀಲಂಗಿ ಮತ್ತು ಆಡಳಿತ ಮಂಡಳಿ, ಪ್ರಾಂಶುಪಾಲರಾದ ಶಿವಾನಂದ ಕುಮಾರ ಹಿರೇಮಠ ರವರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.