ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ನಡೆದಿದ್ದ ಚುನಾವಣೆ । ಚುನಾವಣಾಧಿಕಾರಿ ಲೀಲಾ ನೇತೃತ್ವಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಜೊಗೀಪುರ ಹಾಲು ಉತ್ಪಾದಕರ ಮಹಿಳಾ ಸಂಘದ ನೂತನ ಅಧ್ಯಕ್ಷರಾಗಿ ರಾಧ ಶನಿವಾರ ಅವಿರೋಧವಾಗಿ ಆಯ್ಕೆಯಾದರು.ಮಾಜಿ ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ‘ತಾಲೂಕಿನಲ್ಲಿ ಬದಲಾವಣೆಯ ಗಾಳಿ ಬೀಸಿದೆ ನಮ್ಮ ಸರ್ಕಾರ ಜನರ ನೋವುಗಳಿಗೆ ಸ್ಪಂದಿಸುತ್ತಿದ್ದು ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿ ಸುಮಾರು ೨೫ ವರ್ಷಗಳಿಂದ ಜೊಗೀಪುರ ಡೈರಿಯಲ್ಲಿ ಚುನಾವಣೆ ನಡೆಯದೆ ಜೆಡಿಎಸ್ ಬೆಂಬಲಿತರಿಗೆ ಗುತ್ತಿಗೆ ನೀಡಿರುವ ಹಾಗೆ ನಡೆದುಕೊಳ್ಳುತ್ತಿದ್ದರು. ಆದರೆ ಜೆಡಿಎಸ್‌ನಲ್ಲಿ ನಡೆಯುತ್ತಿದ್ದ ಡೈರಿ ಅವ್ಯವಹಾರ ಪ್ರಶ್ನಿಸಿದಕ್ಕೆ ಈ ಬಾರಿ ಜನರು ಸರಿಯಾದ ಉತ್ತರ ನೀಡಿದ್ದು. ೧೨ ಅಭ್ಯರ್ಥಿ ಕೂಡ ಕಾಂಗ್ರೆಸ್ ಬೆಂಬಲಿತರಾಗಿ ಚುನಾವಣೆಯಲ್ಲಿ ಗೆದ್ದು ಸತ್ಯಕ್ಕೆ ಜಯ ತಂದಿದ್ದಾರೆ. ಡೈರಿ ವಿಚಾರದಲ್ಲಿ ಮುಂದೆ ಯಾವುದೇ ರಾಜಕೀಯ ಮಾಡದೆ ಎಲ್ಲಾ ರೈತರಿಗೂ ಸೂಕ್ತ ನ್ಯಾಯಕೊಟ್ಟು ಡೈರಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕೆಲಸ ಮಾಡಬೇಕು’ ಎಂದು ನೂತನ ಸದಸ್ಯರಿಗೆ ಕಿವಿಮಾತು ಹೇಳಿದರು.
ತಾಲೂಕಿನ ಅನೇಕ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಕಾಂಗ್ರೆಸ್ ಗೆಲುವು ಆಗಿದೆ ಚುನಾವಣೆಗಳು ನಡೆಯುವುದು ಸಹಜ ಸೋಲು ಗೆಲುವು ಕೂಡ ಸಹಜವಾಗಿದೆ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ದ್ವೇಷ ಸಾಧಿಸುವುದು ಒಳ್ಳೆಯದಲ್ಲ ಇದನ್ನು ತಿಳಿದುಕೊಂಡು ಎಲ್ಲರೂ ಕೆಲಸ ಮಾಡಿ ಎಂದರು.ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಗಳು ನಡೆಯುವುದೇ ದೊಡ್ಡ ಇತಿಹಾಸವಾಗಿದೆ, ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಚುನಾವಣೆ ನಡೆಯುವುದೇ ದೊಡ್ಡ ಇತಿಹಾಸವಾಗಿದೆ. ಈ ಇತಿಹಾಸವನ್ನು ಸೃಷ್ಟಿಸಿ ಚುನಾವಣೆಯನ್ನು ನಡೆಸುವುದು ದೊಡ್ಡ ಸಂಗತಿಯಾಗಿದೆ. ಏಕೆಂದರೆ ಕಳೆದ ೨೦ ವರ್ಷಗಳಿಂದ ಸರಿಯಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಯೇ ನಡೆದಿಲ್ಲ. ನಡೆದರೂ ಕೂಡ ಜೆಡಿಎಸ್ ಪಕ್ಷದ ಪರವಾಗಿ ಚುನಾವಣೆಗಳು ನಡೆಯುತ್ತಿತ್ತು. ಇಂದು ತಾಲೂಕಿನ ಅನೇಕ ಭಾಗಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಗಳು ನಡೆದು ಚುನಾವಣೆಗಳು ಕಾಂಗ್ರೆಸ್ ಪರದ ಅಭ್ಯರ್ಥಿಗಳು ಜಯಶೀಲರಾಗಿ ಅಧಿಕಾರವನ್ನು ಸ್ವೀಕರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಆದ್ದರಿಂದ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘಗಳಲ್ಲೂ ಚುನಾವಣೆ ನಡೆಯುವಂತೆ ರೈತರು ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕರಾಗಿ ನಾಗಮಣಿಪ್ರಕಾಶ್, ವಿಜಯಲಕ್ಷ್ಮಿಅಮೃತ್‌ಸ್ವಾಮಿ, ಆಶಾದಿನೇಶ್, ಪವಿತ್ರಶಂಕರ್, ನಂಜಮ್ಮಕೃಷ್ಣೇಗೌಡ, ಶಾಂತಮ್ಮಮೂರ್ತಿ, ಶೋಭಾಬಸವರಾಜ್, ಮಣಿರಾಮಕೃಷ್ಣ, ಸುಲೋಚನಾಕೃಷ್ಣೇಗೌಡ, ಲಕ್ಷ್ಮಮ್ಮಮರಿಲಿಂಗೇಗೌಡ, ಧನಲಕ್ಷ್ಮಿಶಂಕರ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಲೀಲಾ ತಿಳಿಸಿದರು.ಜೋಗಿಪುರದ ಗ್ರಾಮಸ್ಥರಾದ ನಟೇಶ, ಮಂಜುನಾಥ್, ನಂದನ್‌ಕುಮಾರ್, ದಿನೇಶ್, ಮಂಜೇಗೌಡ, ಪ್ರಶಾಂತ್, ಶೇಖರ್, ಮೋಹನ್‌ಕುಮಾರ್, ಸಂಜು, ಸಚಿನ್, ಅಭಿಷೇಕ್ ಹಾಜರಿದ್ದರು.ಚನ್ನರಾಯಪಟ್ಟಣ ತಾಲೂಕಿನ ಜೊಗೀಪುರ ಹಾಲು ಉತ್ಪಾದಕರ ಮಹಿಳಾ ಸಂಘದ ನೂತನ ಅಧ್ಯಕ್ಷರಾಗಿ ರಾಧ ಶಂಕರೇಗೌಡ ಶನಿವಾರ ಅವಿರೋಧವಾಗಿ ಆಯ್ಕೆಯಾದರು.