ರಾಯಚೂರು : ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು - ಇಂದಿನಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ

KannadaprabhaNewsNetwork | Updated : Nov 01 2024, 11:03 AM IST

ಸಾರಾಂಶ

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸುತ್ತಿರುವುದು ಕಂಡು ಬಂದಿರುವುದರಿಂದ, ಜಿಲ್ಲೆಯಾದ್ಯಂತ ಶುಕ್ರವಾರ ಹೆಲ್ಮೆಟ್ ಧರಿಸಿವುದನ್ನು ಕಡ್ಡಾಯ ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.

 ರಾಯಚೂರು : ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹಾಗೂ ವಿಶೇಷವಾಗಿ ನಗರ ಪ್ರದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನದ ಮತ್ತು ಹಿಂಬದಿಯ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾವು-ನೋವು ಸಂಭವಿಸುತ್ತಿರುವುದು ಕಂಡು ಬಂದಿರುತ್ತಿರುವುದರಿಂದ ನ.1ರಿಂದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಈ ಕುರಿತು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯು ಹೆಲ್ಮೆಟ್ ಕಡ್ಡಾಯ ನಿಯಮದ ಕಠಿಣ ಜಾರಿಗೆ ಮುಂದಾಗಲು ತೀರ್ಮಾನಿಸಿದೆ.

ಜಿಲ್ಲೆಯಲ್ಲಿ ದ್ವಿಚಕ್ರ ವಾಹನದ ಸವಾರರು ಮತ್ತು ಹಿಂಬದಿಯ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸುತ್ತಿರುವುದು ಕಂಡು ಬಂದಿರುವುದರಿಂದ, ಸಾರ್ವಜನಿಕರ ಅಮೂಲ್ಯ ಜೀವವನ್ನು ರಕ್ಷಿಸುವ ಹಿತದೃಷ್ಠಿಯಿಂದ ರಾಯಚೂರು ಜಿಲ್ಲೆಯಾದ್ಯಂತ ಶುಕ್ರವಾರ ಹೆಲ್ಮೆಟ್ ಧರಿಸಿವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿಕೆ ನೀಡಿ, ಸಾರ್ವಜನಿಕರ ಅಮೂಲ್ಯವಾದ ಜೀವವನ್ನು ರಕ್ಷಿಸುವ ಹಿತದೃಷ್ಟಿಯಿಂದ ರಾಯಚೂರು ಜಿಲ್ಲೆಯದ್ಯಾಂತ್ಯ ಶುಕ್ರವಾರದಿಂದ ಕಡ್ಡಾಯವಾಗಿ ಹೆಲೈಟ್ ಧರಿಸುವಂತೆ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಒಂದು ವೇಳೆ ಹೆಲ್ಮೆಟನ್ನು ಧರಿಸದೇ ವಾಹನಗಳನ್ನು ಚಲಾಯಿಸಿದ್ದಲ್ಲಿ ಕಟ್ಟುನಿಟ್ಟಾಗಿ ಕಾನೂನು ಕ್ರಮವನ್ನು ಜಗಿಸಲಾಗುವುದು. ಜಿಲ್ಲೆಯ ನಾಗರೀಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಚಾಲಕರಿಗೆ/ ಪ್ರಯಾಣಿ ರಿಗೆ ಜಾಹಿರಾತುಗಳ ಮೂಲಕ ಮತ್ತು ಪೊಲೀಸರು ಸಂಬಂಧಿಸಿದ ಗಸ್ತಿನಲ್ಲಿ ಸಭೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದರು.

ಇನ್ನು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಚಾಲಕರ ಮೇಲೆ ಐ.ಎಂ.ವಿ ಕಾಯಿದೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು, ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅಪಘಾತಗಳು ಹೆಚ್ಚಾಗಿ ಜರುಗುವಂತಹ ಸ್ಥಳಗಳನ್ನು ಗುರುತಿಸಿ ಅಲ್ಲಿ ಚಾಲಕರು ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇಷ್ಟಾದರೂ ಸಹ ಚಾಲಕರು ನಿರ್ಲಕ್ಷ್ಯತೆಯಿಂದ ಚಲಾಯಿಸುತ್ತಿರುವುದರಿಂದ, ಎಲ್ಲಾ ಪೊಲೀಸ್ ಸಭೆ ಸಮಾರಂಭಗಳಲ್ಲಿ, ಸಂಚಾರ ನಿಯಮಗಳ ಕುರಿತು ಹಮ್ಮಿಕೊಂಡ ಸಭೆಗಳಲ್ಲಿ ವಿಶೇಷವಾಗಿ ಹೆಲೈಟ್ ಧರಿಸಲು ತಿಳಿಸಿದರೂ ಸಹ ದ್ವಿಚಕ್ರ ವಾಹನ ಚಲಾಯಿಸುವಂತಹ ಪ್ರಯಾಣಿಕರು ಅದನ್ನು ಪಾಲಿಸದೇ ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸುತ್ತಿರುವುದು ವರದಿಯಾಗುತ್ತಿದೆ ಎಂದು ಪ್ರಕಟಣೆ ಮುಖಾಂತರ ಎಚ್ಚರಿಸಿದ್ದಾರೆ.

ಹೆಲ್ಮೆಟ್ ಧರಿಸದಿದ್ರೆ ಕಾನೂನು ಕ್ರಮ; ಎಸ್ಪಿ

ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿ, ಚಾಲಕರು, ಪ್ರಯಾಣಿಕರು, ಪಾದಚಾರಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಲ್ಲದೇ ಭಾರೀ ಪ್ರಮಾಣದ ಗಾಯಗಳಾಗಿ ದೂರುಗಳು ದಾಖಲಾಗಿದ್ದು, ಸುಗಮ ಸಂಚಾರಕ್ಕಾಗಿ ಇದೇ ಶುಕ್ರವಾರ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಒಂದು ವೇಳೆ ಹೆಲ್ಕೆಟನ್ನು ಧರಿಸದೇ ವಾಹನಗಳನ್ನು ಚಲಾಯಿಸಿದ್ದಲ್ಲಿ ಕಟ್ಟುನಿಟ್ಟಾಗಿ ಕಾನೂನು ಕ್ರಮವನ್ನು ಜಗಿಸಲಾಗುವುದೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ತಿಳಿಸಿದ್ದಾರೆ.

Share this article