ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇತ್ತೀಚೆಗೆ ಬಿದ್ದ ಬಿರುಗಾಳಿ ಸಮೇತ ಮಳೆ ಗಾಳಿಗೆ ಕೆಲವು ತರಕಾರಿಗಳು ತೋಟಗಳಿಲ್ಲೆ ನಷ್ಟವಾಗುತ್ತಿರುವ ಕಾರಣ, ಕೆಲವು ಹಣ್ಣು ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಹುರುಳಿಕಾಯಿ ,150 ರಿಂದ 250 ಟೊಮೆಟೊ ಎಪ್ಪತ್ತರಿಂದ ಎಂಬತ್ತು, ಶುಂಟಿ, ಬೆಳ್ಳುಳ್ಳಿ ಇನ್ನೂರು ರುಪಾಯಿ, ಕ್ಯಾರೇಟ್ ನವಿಲುಕೋಸು 70 ರಿಂದ 80 ರು.ಗಳಾಗಿವೆ. ಆದರೆ ಸೌತೇಕಾಯಿ ದರ ದಿಢೀರನೆ ಕುಸಿದು ಮೂರು ನಾಲ್ಕು ರುಪಾಯಿಗೆ ಸಿಗುತ್ತಿದೆ. ಮೆಣಸಿನಕಾಯಿ ಮತ್ತು ನುಗ್ಗೆಕಾಯಿ ಮಾತ್ರ 50 ರಿಂದ 90 ರುಪಾಯಿ ಆಸುಪಾಸಿನಲ್ಲಿ ಸಿಗುತಿದ್ದು ಆವರೇಜ್ ದರಕ್ಕೆ ಇಳಿದಿದೆ.ಆಲೂಗಡ್ಡೆ 35ರಿಂದ 50 ರು., ಲೇಡಿ ಫಿಂಗರ್ (ಬೆಂಡೆಕಾಯಿ) ಕೂಡ 60 ರಿಂದ 70 ರುಪಾಯಿಗೆ ಕೇಜಿ ಸಿಗುತ್ತಿದೆ.
ಬೀನ್ಸ್ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ170-180 ರು. ತಲುಪಿದೆ. ಅವುಗಳನ್ನು ಖರೀದಿಸಿ, ಸಾರಿಗೆ ವೆಚ್ಚ, ಕೂಲಿ ಎಲ್ಲವನ್ನೂ ಸೇರಿಸಿ ಕೆ.ಜಿ.ಗೆ 200-250 ರು. ಮೇಲ್ಪಟ್ಟ ಬೆಲೆಗೆ ಮಾರುವುದು ಚಿಲ್ಲರೆ ಮಾರಾಟಗಾರರಿಗೆ ಅನಿವಾರ್ಯವಾಗಿದೆ. ಸಿಕೆಬಿ-1 ಸಂತೆ ಮಾರ್ಕೆಟ್ ತರಕಾರಿ ಅಂಗಡಿ