ದೇವಿಯ ಕೃಪೆಯಿಂದ ಈ ವಾರದಲ್ಲಿ ಮಳೆ: ಡಾ. ಶರಣ ಬಸವೇಶ್ವರ ಸ್ವಾಮೀಜಿ ಭವಿಷ್ಯ

KannadaprabhaNewsNetwork |  
Published : Oct 13, 2026, 02:30 AM IST
ಕುಕನೂರು ತಾಲೂಕಿನ ದ್ಯಾಂಪೂರು ಗ್ರಾಮದ ಶ್ರೀ ದ್ಯಾಮಾಂಬಿಕಾದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಡಾ. ಶರಣ ಬಸವೇಶ್ವರ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಕುಕನೂರು ತಾಲೂಕಿನ ದ್ಯಾಂಪೂರು ಗ್ರಾಮದ ಶ್ರೀ ದ್ಯಾಮಾಂಬಿಕಾದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಗಜೇಂದ್ರಗಡ ಕಾಲಜ್ಞಾನ ಕೋಡಿಮಠದ ಡಾ. ಶರಣಬಸವೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

ಕುಕನೂರು: ಮಳೆಯಿಲ್ಲದೆ ಕಂಗಲಾದ ರೈತರ ಬದುಕಿಗೆ ಈ ವಾರದಲ್ಲಿ ಮಳೆ ಸುರಿಯುತ್ತದೆ ಎಂದು ಗಜೇಂದ್ರಗಡ ಕಾಲಜ್ಞಾನ ಕೋಡಿಮಠದ ಡಾ. ಶರಣಬಸವೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ತಾಲೂಕಿನ ದ್ಯಾಂಪೂರು ಗ್ರಾಮದ ಶ್ರೀ ದ್ಯಾಮಾಂಬಿಕಾದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಕಳೆದ ನಾಲ್ಕೈದು ವರುಷಗಳ ಹಿಂದೆ ಇದೇ ರೀತಿ ಬರ ಆವರಿಸಿತ್ತು. ಕಲಾವಿದರಾದ ಶರಣಪ್ಪ ಜೂಟ್ಟಲ್ ಹಾಗೂ ಫಕೀರಸಾಬ ಕಲಬಂಡಿ ಅವರ ಮೂಲಕ ಮೇಘ ಮಾಲಾ ರಾಗ ಹಾಡಿಸಿದಾಗ ಹೆಚ್ಚಿನ ಮಳೆ ಸುರಿದ ಉದಾಹರಣೆ ಇವೆ. ಪುರಾಣದಲ್ಲಿ ಸಂಗೀತಕ್ಕೆ ಹೆಚ್ಚಿನ ಮಹತ್ವ ಇದೆ. ಬರುವ ದಿನಗಳಲ್ಲಿ ಕೃಷಿ, ಶೈಕ್ಷಣಿಕ, ಸಮಾಜ ಸೇವಾ ವಲಯದಲ್ಲಿ ಈ ಭಾಗದಿಂದ ಹೆಚ್ಚಿನ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ. ಹಿಂಗಾರು ಬೆಳೆ ಉತ್ತಮ ಫಸಲು ಬರುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಕೆಲವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಾ ಸಾಗಿದ್ದಾರೆ. ನಾನು ಎಂದಿಗೂ ಜನಸೇವೆ ಮಾಡುವುದನ್ನು ಬಿಡುವುದಿಲ್ಲ. ಅಲ್ಲದೆ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಆಗುವುದಿಲ್ಲ. ದೇವಿ ಆಣೆಗೂ ಮುಂದಿನ ದಿನದಲ್ಲಿ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಜನಸೇವೆಗೆ ಹೆಚ್ಚಿನ ರೀತಿಯಲ್ಲಿ ಅಣಿಯಾಗುತ್ತೇನೆ ಎಂದರು.

ದೇವಿ ಪುರಾಣ ಸಮಿತಿ ಅಧ್ಯಕ್ಷ ಶಿವಾನಂದಯ್ಯ ಕಾಡಗಿಮಠ, ಪ್ರಮುಖರಾದ ಜಗದೀಶ ಹಿರೇಮಠ, ವೀರಣ್ಣ ಬಡಿಗೇರ, ಈಶಯ್ಯ ಶಿರೂರುಮಠ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರುದ್ರಪ್ಪ ಭಂಡಾರಿ, ಮುರಾರಿ ಆರೇರ, ಜಗದೀಶ ಮಂಡಲಗೇರಿ, ಬಸವರಾಜ ಬಿಡಿನಾಳ, ಶರಣಪ್ಪ ಬಿಡಿನಾಳ, ಗುಂಡಯ್ಯ ಶಿರೂರಮಠ, ವೀರಯ್ಯ ಸಸಿಮಠ, ರಾಜಶೇಖರಯ್ಯ, ಸಂಗಪ್ಪ ನೋಟಗಾರ, ರವಿ ಸಿಂಧೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜಗೋಳಿ ಪಿಯು ಕಾಲೇಜಲ್ಲಿ ಆಳ್ವಾಸ್ ಎನ್‌ಎಸ್‌ಎಸ್‌ ಶಿಬಿರ ಆರಂಭ
ಸ್ಟಾರ್ಟಪ್ ಯೋಜನೆಗಳತ್ತ ಗಮನ ಹರಿಸಿ: ಡಾ. ರಂಗಸ್ವಾಮಿ