ಕನ್ನಡಪ್ರಭ ವಾರ್ತೆ ವಿಜಯಪುರ
ಹಿಂದು ಬಗ್ಗೆ ರಾಹುಲ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ:
ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಸಹಿಷ್ಣು ಆಗಿರುವವರನ್ನು ಕೆದಕುವುದು, ಕೆಡುವುದು ಕೆಲವರ ಚಾಳಿ ಆಗಿ ಹೋಗಿದೆ. ಸಹಿಷ್ಣುದಾರರನ್ನು ಕೆಣಕಬೇಕು. ಹಾಗೆ ಕೆಣಕಿ ಒಂದಿಷ್ಟು ಗೊಂದಲ ಸೃಷ್ಟಿ ಮಾಡಬೇಕು. ತಮ್ಮ ಬೇಳೆ ಬೇಯಿಸಿಕೊಳ್ಳಬೇಕು. ಪಂಗಡ ಪಂಗಡಗಳನ್ನು, ಸಮಾಜದ ಎರಡು ಪ್ರಮುಖ ಎರಡು ಪಂಗಡಗಳನ್ನು ಒಡೆಯುವುದು, ಅಲ್ಲಿ ಬೆಂಕಿ ಹಚ್ಚುವುದು ಏನು ಕಷ್ಟದ ಕೆಲಸ ಅಲ್ಲ. ಈಗ ಮಣಿಪುರದಲ್ಲಿ ಬೆಂಕಿ ಹಚ್ಚಿದ್ದಾಗಿದೆ. ಇವತ್ತಿಗೂ ಅದನ್ನ ತಣಿಸಲು ಸಾಧ್ಯ ಆಯ್ತಾ ಎಂದು ಪ್ರಶ್ನಿಸಿದ್ದಾರೆ.ರಾಜಕೀಯ ನಾಯಕರು, ಮುಖಂಡರು ಅನ್ನುವಂತಹವರು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಾರೆ ಅಂತಾ ಅಂದ್ರೆ ಸಮಾಜ ಅಂತಹವರನ್ನು ಮೊದಲು ದೂರ ಇಡಬೇಕು ಎಂದು ತಿರುಗೇಟು ನೀಡಿದರು.
ಸ್ವಪಕ್ಷೀಯರೇ ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿಗಳು, ಇರಬಹುದು, ಅದರ ಬಗ್ಗೆ, ಅದರೊಳಗೆ ಹೆಚ್ಚು ನಾವು ತಲೆ ಹಾಕಲ್ಲ. ಅದರೊಳಗೆ ನಾವು ಕೆಲಸ ಮಾಡುವುದಿಲ್ಲ, ನಾವು ಸಮಾಜದ ಒಳ್ಳೆಯ ಕೆಲಸ ಮಾಡುವವರು ಎಂದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಗೋಪಾಲ ನಾಯಕ, ಪ್ರಕಾಶ ಅಕ್ಕಲಕೋಟ, ಶ್ರೀಪಾದ ಸಿಂಗಮಲ್ಲೆ, ಅಶೋಕರಾವ್, ವಿಜಯ ಜೋಶಿ, ವಿಕಾಸ ಪದಕಿ, ರಾಕೇಶ ಕುಲಕರ್ಣಿ ಉಪಸ್ಥಿತರಿದ್ದರು.
---ಬಾಕ್ಸ್
ಸಂವಿಧಾನ ಬದ್ಧವಾಗಿ ಕಾರ್ಯ ಮಾಡಬೇಕುರಾಜಕೀಯ ಪಕ್ಷಗಳಿಂದ ಜಾತಿ ವ್ಯವಸ್ಥೆ ಸಮಸ್ಯೆಯಾಗಿದೆ. ಆಯಾ ಪಂಗಡಗಳಿಗೆ ಅನ್ಯಾಯವಾದಾಗ ಆ ಪಂಗಡಗಳ ಮಠಾಧಿಪತಿಗಳು ವಿರೋಧಿಸುತ್ತಾರೆ. ಜಾತಿ ಆಧಾರದ ಮೇಲೆ ಸೀಟು, ಟಿಕೆಟ್, ನಿಗಮ ಮಂಡಳಿ ನೀಡುವುದಾದರೆ ಮಠಾಧೀಶರು ಮಾಡುವುದೂ ಸರಿ. ಮೊದಲು ಅಲ್ಲಿ(ರಾಜಕೀಯದಲ್ಲಿ) ಸರಿಯಾಗಲಿ ಆಗ ಇಲ್ಲಿ ಸರಿಯಾಗುತ್ತದೆ. ಯಾರೇ ಆಧಿಕಾರದಲ್ಲಿರಲಿ ಸಂವಿಧಾನ ಬದ್ಧವಾಗಿ ಕಾನೂನು ಬದ್ಧವಾಗಿ ಆಡಳಿತ ಮಾಡಬೇಕೆಂದು ಪೇಜಾವರ ಶ್ರೀಗಳು ಸಲಹೆ ನೀಡಿದರು.
ಚುನಾಯಿತರಾಗಿ ಬಂದ ಬಳಿಕ ಯಾವುದೇ ಪಕ್ಷದ ಸರ್ಕಾರ ಆಗಲ್ಲ, ಅದು ಎಲ್ಲರ ಸರ್ಕಾರವಾಗುತ್ತದೆ. ನಮ್ಮ ಪಕ್ಷ, ಪ್ರತಿಪಕ್ಷ ಎಂದು ತಾರತಮ್ಯ ಮಾಡುವುದು ಸರಿಯಲ್ಲ ಎಂದರು.