ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಾಗೃತಿ ಮೂಡಿಸಿ: ಶಿವನಗೌಡರ

KannadaprabhaNewsNetwork |  
Published : Dec 12, 2025, 02:15 AM IST
ಪಥ ಸಂಚಲನಕ್ಕೆ ಸಿ.ಎಸ್.ಶಿವನಗೌಡರ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗಾಗಿ ಕಾನೂನು ಸದಾ ಸಿದ್ಧವಾಗಿರುತ್ತದೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯತತ್ಪರವಾಗಿರುತ್ತದೆ.

ಗದಗ: ಮಹಿಳೆಯರು ಮತ್ತು ಮಕ್ಕಳ ಮೇಲೆ ಅನೇಕ ರೀತಿಯಲ್ಲಿ ಮಾನಸಿಕ, ದೈಹಿಕವಾಗಿ ದೌರ್ಜನ್ಯಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ ತಿಳಿಸಿದರು.

ನಗರದಲ್ಲಿ ಇನ್ನರ್‌ವೀಲ್ ಕ್ಲಬ್ ವತಿಯಿಂದ ಆರೆಂಜ್ ದ ವರ್ಡ್ ಎಂಬ ಅಭಿಯಾನದ ಅಡಿಯಲ್ಲಿ ಕೈಗೊಂಡ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಎಂಬ ಘೋಷದ ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಗಾಗಿ ಕಾನೂನು ಸದಾ ಸಿದ್ಧವಾಗಿರುತ್ತದೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯತತ್ಪರವಾಗಿರುತ್ತದೆ. ಇನ್ನರ್‌ವೀಲ್ ಕ್ಲಬ್ ಅವರು ಹಮ್ಮಿಕೊಂಡ ಈ ಪಥಸಂಚಲನವು ಅತ್ಯಂತ ಶ್ಲಾಘನೀಯ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸಂಘ- ಸಂಸ್ಥೆಗಳಿಗೆ ತಾವು ಹಾಗೂ ಕಾನೂನು ಎಲ್ಲ ಮಹಿಳೆಯರ ರಕ್ಷಣೆಗೆ ಮತ್ತು ಅದರ ಅಂಗವಾಗಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಬೆಂಬಲವನ್ನು ನೀಡುತ್ತೇವೆ ಎಂದರು.

ರಾಜೇಶ್ವರಿ ಮಾತನಾಡಿ, ಸರ್ಕಾರದಿಂದ ಮಹಿಳೆಯರ ಪರವಾಗಿ ಇರುವ ಕಾನೂನುಗಳ ಮತ್ತು ಯೋಜನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಎಚ್.ಡಿ. ಓದುಗೌಡರ್ ಮಾತನಾಡಿ, ಸಮಾಜದಲ್ಲಿ ಯಾವುದೇ ದುಷ್ಟ ಕೃತ್ಯಗಳು ಜರುಗಿದಲ್ಲಿ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳುವರು. ಅಪರಾಧಿಗಳ ವಿರುದ್ಧ ಕಾನೂನಾತ್ಮಕ ಕಾರ್ಯಾಚರಣೆಯನ್ನು ನಡೆಸುತ್ತೇವೆ ಎಂದರು.ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಜಗತಾಪ ಮಾತನಾಡಿದರು. ಪಥಸಂಚಲನದಲ್ಲಿ ಇನ್ನರ್ ವೀಲ್ ಕ್ಲಬ್, ಇನ್ನರ್‌ವೀಲ್ ಕ್ಲಬ್ ಮಿಡ್ ಟೌನ್, ಕದಳಿ ವೇದಿಕೆ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಪತಂಜಲಿ ಯೋಗ ವಿಜ್ಞಾನ ಕೇಂದ್ರ, ಅಕ್ಕನ ಬಳಗ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸಂಘ, ಚೇಂಬರ್ ಆಫ್ ಕಾಮರ್ಸ್, ಸಿಟಿ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ