ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಜ್ಞಾನದ ಹಸಿವು ನೀಗಿಸಲು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಪರಿಣಾಮ ಈ ಭಾಗದಲ್ಲಿ ಶಿಕ್ಷಣ ಕಾಂತ್ರಿಯಾಯಿತು ಎಂದು ಮೈಸೂರು ವಿಶ್ವವಿದ್ಯಾನಿಲಯ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಿ.ಎಸ್.ಗುರು ಹೇಳಿದರು.ನಗರದ ಜೆಎಸ್‌ಎಸ್ ಬಾಲಕಿಯರ ಪ್ರೌಡಶಾಲಾವರಣದಲ್ಲಿ ಜೆಎಸ್‌ಎಸ್ ಶಿಕ್ಷಣಸಂಸ್ಥೆಗಳು, ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಸುತ್ತೂರು ಮಹಾಸಂಸ್ಥಾನದ ೨೩ನೇ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ೧೦೯ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.ಹಳ್ಳಿ ಹಳ್ಳಿಗೆ ತೆರಳಿ ದವಸ ಧಾನ್ಯ ಸಂಗ್ರಹ ಮಾಡಿ, ವಿದ್ಯಾರ್ಥಿ ನಿಲಯ ಸ್ಥಾಪಿಸಿ, ವಿದ್ಯಾರ್ಥಿಗಳ ಹಸಿವನ್ನು ನೀಗಿಸಿದರು ಎಂದರು. ರಾಜೇಂದ್ರಶ್ರೀ ಹುಟ್ಟಿನಿಂದಲೇ ಬಾಲರಾಜೇಂದ್ರ ಸ್ವಾಮಿಯಾಗಿ ಪ್ರಸಿದ್ದರಾದವರು, ಈಗಿನಂತೆ ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದ ಕಾಲದಲ್ಲಿ ವಿವಿಧ ಭಾಷಾಪ್ರೌಡಿಮೆಗಳಿಸಿದ್ದರು, ಕಷ್ಟದ ಅವಧಿಯಲ್ಲಿ ಮಠವನ್ನು ಮುನ್ನಡೆಸಿದರು. ಜ್ಞಾನದ ಹಸಿವು ನೀಗಿಸಲು ಶಿಕ್ಷಣಸಂಸ್ಥೆಗಳನ್ನು ಆರಂಭಿಸಿದರು. ಕೇವಲ ೫೦ವರ್ಷಗಳಲ್ಲಿ ಜೆಎಸ್‌ಎಸ್ ಸಂಸ್ಥೆ ಹೆಮ್ಮರವಾಗಿ ಬೆಳೆದು, ಇಂದು ಸಂಸ್ಥೆ ಕೇವಲ ಭಾರತದಲ್ಲಿ ಅಷ್ಟೆ ಅಲ್ಲದೇ ವಿದೇಶದಲ್ಲೂ ಶಿಕ್ಷಣಸಂಸ್ಥೆ ತೆರೆದು ಛಾಪು ಮೂಡಿಸಿದೆ. ಇಂತಹ ಅದ್ವಿತೀಯ ಸಾಧನೆಗೆ ಕಾರಣರಾದವರು ವಚನಕಾರ ಬಸವಣ್ಣನವರು. ಕಾಯಕ ಮತ್ತು ದಾಸೋಹ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಪ್ರೇರಣೆ ನೀಡಿತು ಎಂದರು.
ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಆಶೀರ್ವಚನ ನೀಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠ ಸಾಮಾನ್ಯ ಅಭಿವೃದ್ದಿ ವಿಭಾಗದ ಪ್ರಭಾರ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ, ಚಾಮರಾಜನಗರ ವಿವಿ ಕುಲಪತಿ ಡಾ.ಎಂ.ಆರ್.ಗಂಗಾಧರ್ ಮಾತನಾಡಿದರು.ನಗರಸಭೆ ಅಧ್ಯಕ್ಷ ಸುರೇಶ್. ಸದಸ್ಯೆಯರಾದ ಕುಮುದಾ, ಚಿನ್ನಮ್ಮ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಪಂಚ ಗ್ಯಾರಂಟಿ ಯೋಜನೆ ಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಮಹದೇವಸ್ವಾಮಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೇವರಾಜಮೂರ್ತಿ, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ವಿನಯ್ ಕುಮಾರ್, ಪಬ್ಲಿಕ್ ಶಾಲಾ ಪ್ರಾಂಶುಪಾಲ ಎಚ್.ಎಂ.ಉಮೇಶ್, ಜೆಎಸ್‌ಎಸ್ ಬಿಇಡಿ ಕಾಲೇಜಿನ ಪ್ರಾಂಶುಪಾಲ ಬಸವಣ್ಣ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಪಿಆರ್‌ಒ ಆರ್.ಎಂ.ಸ್ವಾಮಿ, ಕುಮಾರಿ ತಾನ್ಯ, ಜೆಎಸ್‌ಎಸ್ ಬಾಲಕ, ಬಾಲಕಿಯರ ಪ್ರೌಡಶಾಲೆಯ ಮುಖ್ಯಶಿಕ್ಷಕರು, ಸಹಶಿಕ್ಷಕರು, ಶಾಲಾಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.