ಶಶಿಕಾಂತ ಮೆಂಡೆಗಾರ
ಜೋಶಿ ವೈಯಕ್ತಿಕ ವಿವರ: ಮೂಲತಃ ಬಬಲೇಶ್ವರ ತಾಲೂಕಿನ ನಿಡೋಣಿಯವರಾದ ಸುರೇಶ ಜೋಶಿ ಅವರು 1947 ಜುಲೈ 22ರಂದು ತಂದೆ ರಾಮಚಂದ್ರ ಜೋಶಿ ಹಾಗೂ ತಾಯಿ ಜಾನಕಿಬಾಯಿ ಜೋಶಿ ಉದರದಲ್ಲಿ ನಿಡೋಣಿಯಲ್ಲಿ ಜನಿಸಿದರು. ಬಬಲೇಶ್ವರದಲ್ಲಿ 10ನೇ ತರಗತಿವರೆಗೆ ಓದಿರುವ ಅವರು ಜಾನಪದ ಕಲೆಯತ್ತ ಆಕರ್ಷಿತರಾಗಿ 26ನೇ ವಯಸ್ಸಿನಲ್ಲಿಯೇ ಅಂದರೆ 1973ರಲ್ಲಿಯೇ ಜಾನಪದ ಡೊಳ್ಳಿನ ಹಾಡಿನ ಕಲೆಯ ಸೇವೆ ಆರಂಭಿಸಿದರು. ಇದುವರೆಗೂ ಒಟ್ಟು 54 ವರ್ಷಗಳಿಂದ ಡೊಳ್ಳಿನ ಹಾಡಿನ ಕಲೆಯ ಸೇವೆ ನೀಡುತ್ತಿದ್ದಾರೆ.
ಬೇರೆ ರಾಜ್ಯದಲ್ಲೂ ಕಲಾಸೇವೆ:ಜಾನಪದ ಕಲಾವಿದರಾದ ಸುರೇಶ ಜೋಶಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಸೋಲಾಪುರ ಜಿಲ್ಲೆಗಳಲ್ಲೂ ತಮ್ಮ ಕಲಾ ಸೇವೆಯನ್ನು ನೀಡಿದ್ದಾರೆ.ಸುರೇಶ ಜೋಶಿ ರೇವಣಸಿದ್ದರ, ಬೀರದೇವರು, ಮಾಳಿಂಗರಾಯ, ಬಸವಣ್ಣದೇವರು, ಶರಣರ, ದೇವರ, ಭಕ್ತಿಯ ಹಾಡುಗಳು, ಸಂತ ಶರಣರ ಹಾಡುಗಳು, ಗುರುಗಳ ಹಾಡುಗಳು, ಪುರಂದರ ದಾಸರ ಹಾಡುಗಳು ಸೇರಿದಂತೆ 100ಕ್ಕೂ ಅಧಿಕ ಜಾನಪದ ಹಾಡುಗಳನ್ನು ಹಾಡುತ್ತಾರೆ. ಹಗಲು-ರಾತ್ರಿ ಎನ್ನದೆ ಕಲಾಸೇವೆಯನ್ನು ನೀಡಿದ್ದಾರೆ.
------------
ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಹಾಗೂ ಕಾಲಜ್ಞಾನಿಗಳಾದ ಬಬಲಾದಿ ಸದಾಶಿವಪ್ಪನವರ ಆಶೀರ್ವಾದ ಹಾಗೂ ಗುರು-ಹಿರಿಯರ ಆಶೀರ್ವಾದದಿಂದ ಇಂದು ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿಯು ಹಗಲು-ರಾತ್ರಿ ನಾನು ಸಲ್ಲಿಸಿದ ಕಲಾಸೇವೆಯ ಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ. ಪ್ರಶಸ್ತಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.