ಕನ್ನಡಪ್ರಭ ವಾರ್ತೆ ಮೈಸೂರುಪ್ರತಿಯೊಬ್ಬರೂ ಕನ್ನಡ ಸೇವೆ ಮಾಡಬೇಕು ಹಾಗೂ ಏಕೀಕರಣಕ್ಕೆ ಶ್ರಮಿಸಿದ ಸಾಹಿತಿಗಳು, ಹೋರಾಟಗಾರರನ್ನು ಸ್ಮರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಹಿರಿಯ ಸುಗಮ ಸಂಗೀತ ಗಾಯಕ ಪ್ರೊ. ಎಸ್. ಮಲ್ಲಣ್ಣ, ಕವಿ ಜಯಪ್ಪ ಹೊನ್ನಾಳಿ, ಕೀಬೋರ್ಡ್ ವಾದಕ ಗಣೇಶ ಭಟ್, ಗಾಯಕ ಜಯರಾಮ್ ರಾಜು ಅವರಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ವತಿಯಿಂದ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಪ್ರದಾನ ಮಾಡಿದರು.
ಸಾಹಿತಿ ನಾ. ದಾಮೋದರ್ ಶೆಟ್ಟಿ ಪ್ರಧಾನ ಭಾಷಣ ಮಾಡಿದರು. ಗಾಯಕರನ್ನು ಖ್ಯಾತ ಸುಗಮ ಸಂಗೀತ ಗಾಯಕ ನಗರ ಶ್ರೀನಿವಾಸ ಉಡುಪ ಸನ್ಮಾನಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಡಿ. ಸುದರ್ಶನ ರವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.ಬಾಕ್ಸ್....ಕನ್ನಡವೇ ಸತ್ಯ....ಡಾ. ರಾಜಕುಮಾರ್ ಹಾಡಿರುವ ಪ್ರಸಿದ್ಧ ಭಾವಗೀತೆಗಳನ್ನು ನೈಜ ಸಂಗೀತದೊಂದಿಗೆ "ಕನ್ನಡವೇ ಸತ್ಯ " ಗಾಯನ ಶೀರ್ಷಿಕೆಯಡಿ ಪ್ರಸ್ತುತಪಡಿಸಲಾಯಿತು.
ಮೈಸೂರು ಜಯರಾಮ್, ಎ.ಡಿ ಶ್ರೀನಿವಾಸ್, ಎನ್. ಬೆಟ್ಟೆಗೌಡ, ರಾಜೇಶ್ ಪಡಿಯಾರ್, ಡೇವಿಡ್, ಇಂದ್ರಾಣಿ ಅನಂತರಾಮು, ರಶ್ಮಿ ಚಿಕ್ಕಮಗಳೂರು, ಡಾ. ವೈ.ಡಿ. ರಾಜಣ್ಣ, ಸಿಂಚನಾ, ಶ್ರೀಧರ್, ಜೈರಾಜ್, ರವಿರಾಜ್ ಹಾಸು, ಅವರು ಗಾಯನ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ದೀಪಕ್- ಕೀಬೋರ್ಡ್, ಇಂದುಶೇಖರ್- ತಬಲ, ಪ್ರದೀಪ್ ಕಿಗ್ಗಲ್- ಗಿಟಾರ್, ರೋಷನ್ ಸೂರ್ಯ- ತಬಲ, ವಿನ್ಸೆಂಟ್- ರಿದಂ ಪ್ಯಾಡ್ ಸಾಥ್ ನೀಡಿದರು. ಗೌರವ್ ಸುಧಾ ಮುರಳಿ ಕಾರ್ಯಕ್ರಮ ನಿರೂಪಿಸಿದರು.