ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯೋತ್ಸವ

KannadaprabhaNewsNetwork | Published : Nov 2, 2024 1:20 AM

ಸಾರಾಂಶ

ಕನ್ನಡ ನಾಡು, ನುಡಿ ಭಾಷೆಯ ಇತಿಹಾಸದ ಬಗ್ಗೆ ತಿಳಿಸಿ ಈ ನಾಡನ್ನು ಕಟ್ಟಲು ಅನೇಕ ಭುವನೇಶ್ವರಿ ದೇವಿಯವರ ಪುತ್ರರು ಜನ್ಮ ತಾಳಿ ಕರ್ನಾಟಕವನ್ನು ದೇಶದ ಭೂಪಟದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದ ಕೀರ್ತಿ ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಕನ್ನಡಪ್ರಭ ವಾರ್ತೆ ಹಲಗೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವದಲ್ಲಿ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಬಸವಣ್ಣ ಹುಟ್ಟಿದ ಭೂಮಿ, ಸರ್ವಜ್ಞ ಜನ್ಮ ತಾಳಿದ ಭೂಮಿ, ಈ ಕನ್ನಡ ನಾಡು ನಾವು ಯಾವಾಗಲೂ ಕನ್ನಡ ಭಾಷೆಗೆ ಮೊದಲು ಆದ್ಯತೆ ನೀಡಬೇಕು ಎಂದರು.

ಕನ್ನಡ ವಿಭಾಗದ ಪ್ರೊ.ಮೂರ್ತಿ ಮಾತನಾಡಿ, ಕನ್ನಡ ನಾಡು, ನುಡಿ ಭಾಷೆಯ ಇತಿಹಾಸದ ಬಗ್ಗೆ ತಿಳಿಸಿ ಈ ನಾಡನ್ನು ಕಟ್ಟಲು ಅನೇಕ ಭುವನೇಶ್ವರಿ ದೇವಿಯವರ ಪುತ್ರರು ಜನ್ಮ ತಾಳಿ ಕರ್ನಾಟಕವನ್ನು ದೇಶದ ಭೂಪಟದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದ ಕೀರ್ತಿ ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು.

ಕನ್ನಡ ಭಾಷೆಯೇ ಕಸ್ತೂರಿ ಆಗಿದೆ. ಕನ್ನಡ ತಿಲಕವೇ ಬಂಡಾರವಾಗಿದೆ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಇದು ಎಂದೆಂದೂ ಮರೆಯಲಾಗದ ಘೋಷಣೆ ಎಂದರು. ಆಂಗ್ಲ ವಿಭಾಗದ ಶಿಕ್ಷಕ ಮಹೇಶ್ ಬಾಬು, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ.ಚಂದ್ರು, ಕಚೇರಿ ಅಧಿಕ್ಷಕರಾದ ಕುಮಾರಸ್ವಾಮಿ, ವಾಣಿಜ್ಯ ವಿಭಾಗದ ಪ್ರೊಫೆಸರ್ ಉಮೇಶ್, ಸಮಾಜ ವಿಭಾಗದ ಶಿವರಾಂ, ಶ್ರೀಧರ್, ಗೌರಮ್ಮ ಸೇರಿದಂತೆ ಇತರರು ಇದ್ದರು.ದೇವಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಣೆ

ಶ್ರೀರಂಗಪಟ್ಟಣ:

ಪಟ್ಟಣದ ಪೇಟೆ ನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆ ರಾಜ್ಯ ಕಾರ್ಯದರ್ಶಿ ಕಿರಂಗೂರು ವಿಜಯಕುಮಾರ್, ಲಯನ್ ಎನ್.ಸರಸ್ವತಿ, ಪುರಸಭೆ ಮಾಜಿ ಸದಸ್ಯೆ ನಳಿನಾ, ಡಾ. ನಾಗರಾಜು, ವಕೀಲ ಪರಮೇಶ್, ನಿವೃತ್ತ ಡಿಡಿಪಿಐ ಸುವರ್ಣದೇವಿ, ಇಂದಿರಾ, ಪುರಸಭೆ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಪಾಲಹಳ್ಳಿ ಗಾಯಿತ್ರ, ಗೋಪಾಲ್‌ಗೌಡ, ಪುರಸಭೆ ಸದಸ್ಯ ಎಸ್. ಪ್ರಕಾಶ್, ಬಾಲು, ಕೇಬಲ್ ಶಿವು, ಲೋಕೇಶ್, ಮಂಜುನಾಥ್, ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.

Share this article