ಕನ್ನಡಪ್ರಭ ವಾರ್ತೆ ಕುಶಾಲನಗರ
ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತ ಆಗಬಾರದು ಎಂದು ಕುಶಾಲನಗರ ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕ ಹಾಗೂ ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಮೂಲಕ ಸಂಸ್ಕೃತಿ ಉಳಿಯಲು ಸಾಧ್ಯ ಎಂದ ಅವರು, ನಾಡಿನ ಅಭಿವೃದ್ಧಿಗೆ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದರು.ದೈಹಿಕ ಶಿಕ್ಷಕ ಡಾ ಸದಾಶಿವ ಪಲ್ಯದ್ ಮಾತನಾಡಿ, ಭಾಷೆ ಉಳಿವು ಮತ್ತು ಅಭಿವೃದ್ಧಿಯಲ್ಲಿ ಪೀಳಿಗೆಯ ಪಾತ್ರದ ಬಗ್ಗೆ ಮಾಹಿತಿ ಒದಗಿಸಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ ಪಿ ಚಂದ್ರಕಲಾ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಕರ್ನಾಟಕ ಕಾರ್ಯಕರ್ತ ಪತ್ರಕರ್ತರ ಧ್ವನಿ ಕೊಡಗು ಜಿಲ್ಲಾ ಅಧ್ಯಕ್ಷ ಎಚ್ ಎಂ ರಘು ಕೋಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ನಾಗೇಶ್, ಜಿಲ್ಲಾ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಉದ್ಯಮಿ ಬಿ ಎಸ್ ಸದಾಶಿವ ಶೆಟ್ಟಿ, ಬರಮಣ್ಣ ಟಿ ಬೆಟಗೇರಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪುಷ್ಪ, ನಿವೃತ್ತ ಪ್ರಾಂಶುಪಾಲ ಭೋಜಣ್ಣ ರೆಡ್ಡಿ ಮತ್ತಿತರರು ಇದ್ದರು.
ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಉದ್ಯಮಿ ಬಿ ಎಸ್ ಸದಾಶಿವ ಶೆಟ್ಟಿ, ಉಪನ್ಯಾಸಕಿ ಬಿ ಜಿ ಶಾಂತಿ, ಸಮಾಜ ಸೇವಕರಾದ ಡಿ ಆರ್ ಪ್ರಭಾಕರ್, ಆರ್ ಕಲಾಮಣಿ, ಶಾಂತ ಬಿ ಬೆಟಗೇರಿ, ಎಂ ಎ ಮುಸ್ತಫ, ಶಿಕ್ಷಕಿ ಸಿ ಎಸ್ ಜಾನಕಿ, ನಿವೃತ್ತ ಶಿಕ್ಷಕ ಎ ಎಸ್ ತಮ್ಮಯ್ಯ, ಕರವೇ ಉಪಾಧ್ಯಕ್ಷ ಬಿ ಎ ದಿನೇಶ್, ಎಚ್ ಆರ್ ನಾಗೇಂದ್ರ, ಆಟೋ ಚಾಲಕಿ ಎಸ್ ಸುಜಾತ, ಕ್ರೀಡಾಪಟು ರಿಮೋನ್ ಪೊನ್ನಣ್ಣ ಉದ್ಯಮಿ ಎನ್ ಟಿ ಜೋಸೆಫ್ ಅವರನ್ನು ಗೌರವಿಸಲಾಯಿತು.