ರಾಮ ನವಮಿ, ಪಾನಕ ಕೊಸಂಬರಿ ವಿತರಣೆ

KannadaprabhaNewsNetwork |  
Published : Mar 28, 2026, 02:00 AM IST
ಸವಣೂರ ಪಟ್ಟಣದ ಸಿಂಪಿಗಲ್ಲಿ ವೃತ್ತದಲ್ಲಿ ಅಯೋಧ್ಯೆಯ ಪ್ರಭು ಶ್ರೀ ರಾಮನವಮಿಯನ್ನು ಪಾನಕ ಮತ್ತು ಕೋಸಂಬರಿ ಪ್ರಸಾದ ಹಂಚಿ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. | Kannada Prabha

ಸಾರಾಂಶ

ಸವಣೂರ ಪಟ್ಟಣದ ಸಿಂಪಿಗಲ್ಲಿ ವೃತ್ತದಲ್ಲಿ ಅಯೋಧ್ಯೆಯ ಪ್ರಭು ಶ್ರೀ ರಾಮನವಮಿಯನ್ನು ಪಾನಕ ಮತ್ತು ಕೋಸಂಬರಿ ಪ್ರಸಾದ ಹಂಚಿ ರಾಮ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸವಣೂರು: ಪಟ್ಟಣದ ಸಿಂಪಿಗಲ್ಲಿ ವೃತ್ತದಲ್ಲಿ ಅಯೋಧ್ಯೆಯ ಪ್ರಭು ಶ್ರೀ ರಾಮನವಮಿಯನ್ನು ಪಾನಕ ಮತ್ತು ಕೋಸಂಬರಿ ಪ್ರಸಾದ ಹಂಚಿ ಆಚರಿಸಲಾಯಿತು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಇಲ್ಲಿನ ಯುವಕರು ವಿಭಿನ್ನವಾಗಿ ಶ್ರೀರಾಮ ನವಮಿಯನ್ನು ಆಚರಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಆರಂಭದಲ್ಲಿ ಶ್ರೀರಾಮನ ಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂವಿನ ಅಲಂಕಾರ ಮಾಡಿ ನೈವೇದ್ಯ ಅರ್ಪಿಸಿದರು. ನಂತರ ಸಾರ್ವಜನಿಕರಿಗೆ ತಂಪಾದ ಪಾನಕ ಹಾಗೂ ಪೌಷ್ಟಿಕ ಕೋಸಂಬರಿಯನ್ನು ವಿತರಿಸಿ, ಬೇಸಿಗೆಯ ತಾಪಮಾನದಲ್ಲೂ ಸೇವಾ ಮನೋಭಾವವನ್ನು ಮೆರೆದರು.ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕರು, ಹಿರಿಯರು ಹಾಗೂ ಮಕ್ಕಳೂ ಉತ್ಸಾಹದಿಂದ ಪಾಲ್ಗೊಂಡು, ಜೈ ಶ್ರೀರಾಮ ಘೋಷಣೆಗಳೊಂದಿಗೆ ಹಬ್ಬದ ಸಡಗರವನ್ನು ಹೆಚ್ಚಿಸಿದರು. ಸಮಾಜದಲ್ಲಿ ಒಗ್ಗಟ್ಟು ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮಹೇಶ ಮುದಗಲ, ಪ್ರಶಾಂತ ತಿರುಮಲೆ, ಅಕ್ಷಯ ಕಲಾಲ, ಶೇಖರ ಮಹೇಂದ್ರಕರ, ವಿನಾಯಕ ದೇಶಮಾನೆ, ಚೇತನ ಮಹೇಂದ್ರಕರ, ಸಚಿನ್ ಮಹೇಂದ್ರಕರ, ಸಚಿನ ಕಲಾಲ, ಚೇತನ ಅಚಲಕರ, ಹರೀಶ ಶೆಂಡಗೆ, ಈರಯ್ಯ ಹಿರೇಮಠ, ಸಮರ್ಥ ಜಾಧವ ಸೇರಿದಂತೆ ಹಲವಾರು ಭಕ್ತರು ಭಾಗವಹಿಸಿ, ಪ್ರಸಾದ ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುದ್ಧ ಎಫೆಕ್ಟ್, ರಸಗೊಬ್ಬರ ಬಳಕೆ ಮೇಲೆ ನಿಗಾ
ಆಧ್ಯಾತ್ಮಿಕ ನೆಲೆಯಲ್ಲಿ ಮಕ್ಕಳ ಬದುಕು ರೂಪಗೊಳ್ಳಲಿ-ಪೇಜಾವರ ಶ್ರೀ