ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಕೆಳಗಡೆ ನಾಯಕರ ಬೀದಿ ಯಲ್ಲಿ ನೂತನವಾಗಿ ನಿರ್ಮಿಸಿರುವ ಮಹದೇಶ್ವರ, ಮಂಟೇಸ್ವಾಮಿ ಸಮೇತ ಶ್ರೀರಾಮಮಂದಿರ ಉದ್ಟಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಆವರಣದಿಂದ ಹುಲಿವಾಹನ, ಸತ್ತಿಗೆ ಸೂರಿಪಾನಿ, ಕಂಡಾಯಗಳನ್ನು ದೊಡ್ಡರಸನಕೊಳದ ಹತ್ತಿರ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಿ, ವಿವಿಧ ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿ, ಹಾಲರವೆ ಉತ್ಸವದೊಂದಿಗೆ ವೀರಭದ್ರಸ್ವಾಮಿ, ಮಾರಮ್ಮ ದೇವಸ್ಥಾನ, ಸಂಪಿಗೆ ರಸ್ತೆ, ನಂಜನಗೂಡು ರಸ್ತೆ, ಸಂತೇಮರಹಳ್ಳಿ ವೃತ್ತದ ಮೂಲಕ ರಾಮಮಂದಿರಕ್ಕೆ ತೆರಳಿತು.
ನಂತರ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯ ನಡೆಯಿತು. ಕಾರ್ಯಕ್ರಮ ಅಂಗವಾಗಿ ದೇವಸ್ಥಾನ, ಬೀದಿಯನ್ನು ವಿದ್ಯುತ್ ದೀಪಗಳಿಂದ, ಹಸಿರುತೋರಣಗಳಿಂದ ಶೃಂಗರಿಸಲಾಯಿತು. ಊಟದ ವ್ಯವಸ್ಥೆ ಮಾಡಲಾಯಿತು.ರಾಯಚೂರು ಲಿಂಗಸೂರು ವಾಲ್ಮೀಕಿ ವಾಲ್ಮೀಕಿ ಆಶ್ರಮದ ಶ್ರೀವರದಾನೇಶ್ವರ ಸ್ವಾಮೀಜಿ, ತಿ.ನರಸೀಪುರ ಮುಡುಕುನಪುರ ಶ್ರೀಹಲವಾರು ಮಠದ ಶ್ರೀಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಿ ಶುಭ ಕೋರಿದರು.
ವಾಲ್ಮೀಕಿ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮಹದೇವನಾಯಕ, ನಗರಸಭಾ ಸದಸ್ಯ ಸಿ.ಎಂ.ಶಿವರಾಜ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಜಿ.ಪಂ.ಮಾಜಿ ಸದಸ್ಯ ಎಸ್.ಸೋಮನಾಯಕ, ಪು.ಶ್ರೀನಿವಾಸನಾಯಕ, ಚುಡಾ ಮಾಜಿ ಅಧ್ತಕ್ಷ ಸುಂದರ್,ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಮಾಜಿ ಸದಸ್ಯರಾದ ಚೆಂಗುಮಣಿ, ಮಲ್ಲೇಶ್, ರಾಜೇಶ್,ಯಜಮಾನರಾದ.ರಾಜುನಾಯಕ, ವರದನಾಯಕ, ಚಾ.ಸಿ.ಸೋಮನಾಯಕ,ಮಹದೇವನಾಯಕ, ಮುಖಂಡರಾದ ಕೃಷ್ಣನಾಯಕ, ಚಂದ್ರಶೇಖರ್, ಬುಲೆಟ್ ಚಂದ್ರ, ಶಿವುವಿರಾಟ್, ವೆಂಕಟೇಶ್, ಚಂಗಚಹಳ್ಳಿ ಮಹಾದೇವಸ್ವಾಮಿ, ಮಹೇಶ್, ಮಣಿಕಂಠ, ಶಂಕರ್, ರಂಗಸ್ವಾಮಿ, ದೇವರಗುಡ್ಡರಾದ ರಾಜಣ್ಣ ,ಬಸವಣ್ಣ ನಾಯಕ ಬಸವರಾಜು ಹಾಗೂ ಕುಲಸ್ಥರು, ಮುಖಂಡರು, ಶ್ರೀರಾಮನ ಭಕ್ತರು ಹಾಗೂ ಜಿಲ್ಲೆಯ ಎಲ್ಲಾ ಗ್ರಾಮದ ನಾಯಕ ಜನಾಂಗದ ಯಜಮಾನರು, ಭಕ್ತ ಮಹಾಶಯರು ಭಾಗವಹಿಸಿದ್ದರು.