ಎಲ್ಲೆಲ್ಲೂ ರಾಮ ಭಕ್ತರ ಸಂಭ್ರಮ

KannadaprabhaNewsNetwork | Published : Jan 23, 2024 1:51 AM

ಸಾರಾಂಶ

ಅಯೋದ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ರಾಮ ಭಕ್ತರಿಂದ ವಿಶೇಷ ಪೂಜೆ, ರಾಮ ತಾರಕ ಹೋಮ, ಭಜನೆಗಳು ನಡೆಯಿತು.

: ವಿವಿಧ ದೇವಸ್ಥಾನಗಳಲ್ಲಿ ರಾಮ ತಾರಕ ಹೋಮ, ಭಜನೆ। ಮಕ್ಕಳಿಗೆ ರಾಮನ ವೇಷ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅಯೋದ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ರಾಮ ಭಕ್ತರಿಂದ ವಿಶೇಷ ಪೂಜೆ, ರಾಮ ತಾರಕ ಹೋಮ, ಭಜನೆಗಳು ನಡೆಯಿತು.

ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ರಾಮ ತಾರಕ ಹೋಮ, ಸಂಜೆ ಲಲಿತ ಭಜನಾ ಮಂಡಳಿಯಿಂದ ಭಜನೆ, ಪ್ರಾಕಾರೋತ್ಸವ,ಅಷ್ಟಾವಧಾನ ಸೇವೆ, ದೀಪೋತ್ಸವ, ಪ್ರಸಾದ ವಿನಿಯೋಗ ನಡೆಯಿತು. ಪಟ್ಟಣದ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಮತಾರಕ ಹೋಮ, ವಿವಿಧ ಮಹಿಳಾ ಸಂಘ ಹಾಗೂ ಮಕ್ಕಳಿಂದ ಭಜನೆ ನಡೆಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ ರಾಮತಾರಕ ಹೋಮ, ಭಜನೆ ನಡೆಯಿತು. ಶೆಟ್ಟಿಕೊಪ್ಪ ಸಮೀಪದ ಕಡಹಿನಬೈಲು ಗ್ರಾಮದ ಆಲಂದೂರು ಕುಮಾರರಾಮ ದೇವಸ್ಥಾನದಲ್ಲಿ ರಾಮನಿಗೆ ಅಭಿಷೇಕ , ವಿಶೇಷ ಪೂಜೆ, ಪ್ರಸಾದ ವಿನಿಯೋಗ, ದೀಪೋತ್ಸವ ನಡೆಯಿತು.ಕಾನೂರು ರಾಮದೇವಸ್ಥಾನದಲ್ಲಿ ಬೆಳಿಗ್ಗೆ ರಾಮತಾರಕ ಹೋಮ, ರಾಮ ಬಾಲಕಾಂಡ ಪಾರಾಯಣ ನಡೆಯಿತು. ಯಡಗೆರೆ ರಾಮನಾಥೇಶ್ವರ ದೇವಸ್ಥಾನದಲ್ಲಿ ರಾಮ ತಾರಕ ಹೋಮ, ವಿಶೇಷ ಪೂಜೆ, ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದವರಿಂದ ಭಜನೆ ನಡೆಯಿತು. ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಸಂಜೆ ಭಜನೆ ನಡೆಯಿತು. ನಂತರ ಯಕ್ಷಗಾನ ನಡೆಯಿತು. ಮಕ್ಕಳಿಗೆ ರಾಮ ವೇಷ: ಹಲವು ಕಡೆ ರಾಮ ಭಕ್ತರು ಮಕ್ಕಳಿಗೆ ರಾಮ ವೇಷ ಹಾಕಿ ಸಂಭ್ರಮ ಪಟ್ಟರು. ಹಳೇ ಪೇಟೆ ಆಶಾ ಕಾರ್ಯಕರ್ತೆ ವಿಜಯಕುಮಾರಿ ತನ್ನ ಮಗುವಿಗೆ ರಾಮನ ವೇಷ ಹಾಕಿರುವುದು ಗಮನ ಸೆಳೆಯಿತು. ವಿವಿಧ ಕಡೆ ರಾಮನ ಪಟ್ಟಾಭಿಷೇಕದ ಫ್ಲೆಕ್ಸ್‌ ಹಾಕಲಾಗಿತ್ತು. ಕೆಲವು ಮನೆಗಳಲ್ಲಿ ಶ್ರೀ ರಾಮನ ಬಣ್ಣದ ಚಿತ್ತಾರದ ರಂಗೋಲಿ ಹಾಕಲಾಗಿತ್ತು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕುಗಳು ಅರ್ಧ ದಿನ ಮುಚ್ಚಿದ್ದರು. ಗುಜರಾತ್‌ ಅಂಗಡಿ ಮಾಲೀಕರು ಅಂಗಡಿ ಬಂದ್ ಮಾಡಿದ್ದರು.

Share this article