ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶೋಷಿತ ಸಮುದಾಯ ವೇದಿಕೆಯಿಂದ ನಡೆದ ರಮಾಬಾಯಿ ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆಯಲ್ಲಿ ದಲಿತ ಮುಖಂಡರೊಂದಿಗೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಾಧನೆ ಗಳ ಬೆಳವಣಿಗೆಗೆ ಪತ್ನಿ ರಮಾಬಾಯಿ ಅಂಬೇಡ್ಕರ್ ಸಹಕಾರ ಮಹತ್ವದಾಗಿದೆ. ಅಂಬೇಡ್ಕರ್ ಸಂವಿಧಾನ ರಚನೆ ವೇಳೆ ಜೀವನದಕ್ಕೂ ನಿಂತು ಸಹಕರಿಸಿದ ರೀತಿ ಅವರು ನಡೆದು ಬಂದ ದಾರಿ ಇಂದಿನ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ ಎಂದರು.ಶೋಷಿತ ಸಮುದಾಯ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಅಂಬೇಡ್ಕರ್ ಅವರ ಸಾಧನೆಗೆ ಬೆಂಬಲವಾಗಿ ನಿಂತ ಪತ್ನಿ ರಮಾಬಾಯಿ ತ್ಯಾಗಮಯಿಯಾಗಿದ್ದಾರೆ. ತಮ್ಮ ಮಗ ಯಶವಂತ್ ನಿಧನದ ವೇಳೆ ಸಹ ಪತಿ ಅಂಬೇಡ್ಕರ್ ಅವರಿಗೆ ಮಗನ ಸಾವಿನ ಸುದ್ದಿ ತಿಳಿಸದೆ ಅವರ ಸಾಧನೆಗೆ ಸಹಕಾರ ನೀಡಿದ ಕೀರ್ತಿ ರಮಾಬಾಯಿಯವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಈ ವೇಳೆ ಸಿ.ಎ.ಕೆರೆ ಹೋಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡಿನಹಳ್ಳಿ ತಿಮ್ಮಯ್ಯ, ಮದ್ದೂರು ಬ್ಲಾಕ್ ಅಧ್ಯಕ್ಷ ನಿಡಘಟ್ಟ ದೊರೆಸ್ವಾಮಿ, ಪರಿಶಿಷ್ಟ ಜಾತಿ ಪಂಗಡಗಳ ವೇದಿಕೆಯ ತಾಲೂಕು ಘಟಕದ ನಿರ್ದೇಶಕ ಚಿದಂಬರ್, ಸಮುದಾಯದ ಮುಖಂಡರಾದ ಕಾಡುಕೊತ್ತನಹಳ್ಳಿ ಮರಿಸ್ವಾಮಿ, ಹುಲಿಗೆರೆಪುರ ಮಹಾದೇವ , ಹೊಂಬಯ್ಯ, ರುದ್ರಯ್ಯ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.