ಕುಷ್ಟಗಿ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಶ್ಲೋಕಗಳು ವಿಶ್ವಮಟ್ಟದಲ್ಲಿ ಭಾರತದ ಘನತೆ ಗೌರವ ಹೆಚ್ಚಿಸಿವೆ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಬಸವರಾಜ ಜಲಕಮಲದಿನ್ನಿ ಹೇಳಿದರು.
ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ನಮಗೆಲ್ಲ ಆದರ್ಶಪ್ರಾಯರು, ವಾಲ್ಮೀಕಿ ಅವರಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವ ಮೂಲಕ ಆರ್ಥಿಕ,ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು ನಾವೆಲ್ಲರೂ ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕೇಸೂರು ಗ್ರಾಪಂ ಸದಸ್ಯ ಉಮೇಶ ಮಡಿವಾಳರ, ಶುಖಮುನಿ ಈಳಗೇರ, ಶ್ಯಾಮೀದಸಾಬ್ ಮುಜಾವರ, ವೀರಯ್ಯ ಮಳಿಮಠ, ಬಸವರಾಜ ಜಲಕಮಲದಿನ್ನಿ, ಗ್ಯಾನಪ್ಪ ಮನ್ನಾಪೂರು, ಮುತ್ತಣ್ಣ ಗೋತಗಿ, ಮುತ್ತಣ್ಣ ಗೊರ್ಜನಾಳ, ನಾಗರಾಜ ಅಡವಿಭಾವಿ, ಶರಣಪ್ಪ ಗೊರ್ಜನಾಳ, ಅಮರೇಶ ಬಳೀಗೇರ, ನಾಗರಾಜ ಪಟ್ಟಣಶೆಟ್ಟರ್, ವಿನಾಯಕ ಕೋಡಳ್ಳಿ, ಈರನಗೌಡ ಟೆಂಗುಂಟಿ, ಪ್ರಭು ದೋಟಿಹಾಳ, ಆನಂದ ಹಾಗರಗಿ, ಮಲ್ಲಪ್ಪ ಗುರಿಕಾರ, ವಿಷ್ಣು ಅಂಗಡಿ, ಬಸವರಾಜ ಕಡಿವಾಲ, ಈರಪ್ಪ ಗೋತಗಿ, ಹನಮಂತಪ್ಪ ಬಿಜಕಲ್ ಸೇರಿದಂತೆ ಅನೇಕರು ಇದ್ದರು.ಇದೆ ವೇಳೆ ಕೇಸೂರು ಗ್ರಾಮದ ವಾಲ್ಮೀಕಿ ವೃತ್ತದಲ್ಲಿನ ನಾಮಫಲಕ ಹಾಗೂ ಆದಿಕವಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಪಟ್ಟರು.