ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದಲ್ಲಿ ಕುರುಹಿನಶೆಟ್ಟಿ ಸಮಾಜದ ಹಳೆಭಜನೆ ಮನೆ ವತಿಯಿಂದ ವಿಜೃಂಭಣೆಯಿಂದ ರಾಮೋತ್ಸವ ನಡೆಯಿತು.ಒಂದು ವಾರಗಳ ಕಾಲ ಸೀತಾದೇವಿ, ಲಕ್ಷ್ಮಣ, ಹನುಮಂತದೇವರ ಸಮೇತ ರಾಮದೇವರನ್ನು ಪಟ್ಟಾಭಿಷೇಕ ಮಾಡಿ ನಿತ್ಯವೂ ಆರಾಧಿಸಲಾಯಿತು. ರಾಮನಾಮ ಸಂಕೀರ್ತನೆ, ಭಜನೆ, ಕೀರ್ತನೆ, ದಿನಕ್ಕೊಂದು ರಾಮಾಯಣ ಪಾರಾಯಣದಂತಹ ಹತ್ತು ಹಲವು ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ರಾಮದೇವರ ಭಕ್ತರು ಆಗಮಿಸಿ ಭಜನೆ ಮಾಡಿ ಭಕ್ತಿಯಲ್ಲಿ ಮಿಂದರು. ಪಟ್ಟಾಭಿರಾಮದೇವರ ಭಾವಚಿತ್ರಕ್ಕೆ ವಿವಿಧ ಪರಿಮಳ ಪುಷ್ಪಗಳ ಅಲಂಕಾರ ಮಾಡಿಬೆಳ್ಳಿ ಸಾರೋಟಿನಲ್ಲಿ ಪ್ರತಿಷ್ಟಾಪಿಸಲಾಯಿತು.ಕೋಟೆ ಆಂಜನೇಯ, ಗಣಪತಿದೇವಾಲಯ ಬೀದಿ, ರಥಬೀದಿ, ಹೊಸಬೀದಿಯಲ್ಲಿ ವಿವಿಧ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಭಕ್ತರುದೇವರಿಗೆ ಹಣ್ಣು ಕಾಯಿ ಅರ್ಪಿಸಿ ಅರತಿಎತ್ತಿ ನಮಿಸಿದರು.
ರಾಮದೇವರ ಉತ್ಸವಮೂರ್ತಿ ಮೆರವಣಿಗೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು. ಬಾಣಬಿರುಸುಗಳಿಂದ ನಡೆದ ಮೆರವಣಿಗೆ ಮಕ್ಕಳಿಗೆ ಖುಷಿಕೊಟ್ಟಿತು. ಯುವಕರು ರಾಮನಾಮ ಪಠಿಸುತ್ತ ಸಂತಸದಿಂದ ಸಾಗಿದರು. ನಂತರ ಪಟ್ಟಾಭಿರಾಮ ದೇವರನ್ನು ಮೂಲಸ್ಥಾನದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ದೇವರಿಗೆ ಮಹಾಮಂಗಳಾರತಿ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು.ಈ ವೇಳೆ ಮುಖಂಡರಾದ ಕೆ.ವಿ.ಅರುಣಕುಮಾರ್, ಅಣ್ಣಯ್ಯ, ಕೆ.ವಿ. ಕುಮಾರ್, ಹನುಮಂತಶೆಟ್ಟಿ, ಹರ್ಷ, ವೆಂಕಟೇಶ್, ಶ್ರೀನಿವಾಸ್, ಶಂಕರಶೆಟ್ಟಿ, ನಾಗೇಶ್, ಗೋವಿಂದ, ಮಾರುತಿ ವೆಂಕಟೇಶ್ ಉಪಸ್ಥಿತರಿದ್ದರು.
ಅಧ್ಯಕ್ಷ-ಉಪಾಧ್ಯಕ್ಷರಾಗಿ ಡಿ.ಬಿ.ಚೌಡೇಶ್, ಇಂದಿರಮ್ಮ ಆಯ್ಕೆಮಂಡ್ಯ:ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಡಿ.ಬಿ.ಚೌಡೇಶ್ ಅಧ್ಯಕ್ಷರಾಗಿ, ಇಂದ್ರಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಒಟ್ಟು ೧೧ ಮಂದಿ ಸದಸ್ಯಬಲವುಳ್ಳ ಸಂಘದಲ್ಲಿ ಚೌಡೇಶ್ ಮತ್ತು ಇಂದ್ರಮ್ಮ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ರವಿ ಇಬ್ಬರ ಆಯ್ಕೆಯನ್ನು ಅವಿರೋಧವಾಗಿ ಘೋಷಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಇದೇ ವೇಳೆ ಪಾಂಡವಪುರ ತಾಲೂಕು ಅಧ್ಯಕ್ಷ ಮಲ್ಲೇಶ್, ಗ್ರಾಪಂ ಅಧ್ಯಕ್ಷ ಶ್ರೇಯಸ್‌ಗೌಡ, ಡಿ.ಮಹೇಶ್, ಕುಮಾರ, ಮಹದೇವಪ್ಪ, ಗುರುಪ್ರಸಾದ್, ಎಂ.ಬಿ.ರವಿ, ಡಿ.ಜಿ.ರಮೇಶ್, ಶಿವಮಾದಪ್ಪ, ಶಶಿಕಲಾ ಇದ್ದರು.