ಪೆಂಡಾಲ್‌ ಗಣಪತಿ ಸೇವಾ ಸಮಿತಿಯಿಂದ ರಂಗೋಲಿ ಸ್ಪರ್ಧೆ

KannadaprabhaNewsNetwork |  
Published : Oct 01, 2026, 02:00 AM IST
29ಎಚ್ಎಸ್ಎನ್7 :  | Kannada Prabha

ಸಾರಾಂಶ

ಸ್ಪರ್ಧೆಯಲ್ಲಿ ಸಂಖ್ಯೆ ೩೮ರ ವಿನೂತಾ ವಿರುಪಾಕ್ಷ ಪ್ರಥಮ ಬಹುಮಾನ ಪಡೆದರೆ, ಸಂಖ್ಯೆ ೫೭ರ ವನಜಾಕ್ಷಿ ದ್ವಿತೀಯ ಹಾಗೂ ಸಂಖ್ಯೆ ೪೧ರ ಐ.ಕೆ. ಸರೋಜಮ್ಮ ತೃತೀಯ ಸ್ಥಾನ ಗಳಿಸಿದರು. ಸಂಖ್ಯೆ ೩೯ರ ರಾಣಿ ನಾಲ್ಕನೇ, ಸಂಖ್ಯೆ ೧೨ರ ಲತಾ ರಂಗೇಗೌಡ ಐದನೇ, ಸಂಖ್ಯೆ ೩೩ರ ಪುಷ್ಪಲತಾ ಆರನೇ, ಸಂಖ್ಯೆ ೧೮ರ ಸಿ.ಮಮತಾ ಏಳನೇ, ಸಂಖ್ಯೆ ೪೫ರ ಪುಷ್ಪ ಎಂಟನೇ, ಸಂಖ್ಯೆ ೧೭ರ ಮಮತಾ ಪ್ರಸನ್ನ ಒಂಬತ್ತನೇ ಹಾಗೂ ಸಂಖ್ಯೆ ೨೦ರ ಎಚ್. ಎಸ್. ರೂಪ ಹತ್ತನೇ ಬಹುಮಾನ ಪಡೆದರು.

ಕನ್ನಡಪ್ರಭ ವಾರ್ತೆ ಹಾಸನ

ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ ನಗರದ ಪೆಂಡಾಲ್‌ ಗಣಪತಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ರಂಗೋಲಿ ಹಾಗೂ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.

ಗಣೇಶೋತ್ಸವದ ಅಂಗವಾಗಿ ನಗರದ ಮಹಾರಾಜ ಪಾರ್ಕಿನ ಆವರಣದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು. ಬಣ್ಣಗಳ ಸಂಯೋಜನೆ, ವಿನ್ಯಾಸ ಹಾಗೂ ಅಲಂಕಾರದಲ್ಲಿ ಸ್ಪರ್ಧಿಗಳು ತೋರಿದ ವೈವಿಧ್ಯ ಪ್ರೇಕ್ಷಕರ ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಸಂಖ್ಯೆ ೩೮ರ ವಿನೂತಾ ವಿರುಪಾಕ್ಷ ಪ್ರಥಮ ಬಹುಮಾನ ಪಡೆದರೆ, ಸಂಖ್ಯೆ ೫೭ರ ವನಜಾಕ್ಷಿ ದ್ವಿತೀಯ ಹಾಗೂ ಸಂಖ್ಯೆ ೪೧ರ ಐ.ಕೆ. ಸರೋಜಮ್ಮ ತೃತೀಯ ಸ್ಥಾನ ಗಳಿಸಿದರು. ಸಂಖ್ಯೆ ೩೯ರ ರಾಣಿ ನಾಲ್ಕನೇ, ಸಂಖ್ಯೆ ೧೨ರ ಲತಾ ರಂಗೇಗೌಡ ಐದನೇ, ಸಂಖ್ಯೆ ೩೩ರ ಪುಷ್ಪಲತಾ ಆರನೇ, ಸಂಖ್ಯೆ ೧೮ರ ಸಿ.ಮಮತಾ ಏಳನೇ, ಸಂಖ್ಯೆ ೪೫ರ ಪುಷ್ಪ ಎಂಟನೇ, ಸಂಖ್ಯೆ ೧೭ರ ಮಮತಾ ಪ್ರಸನ್ನ ಒಂಬತ್ತನೇ ಹಾಗೂ ಸಂಖ್ಯೆ ೨೦ರ ಹೆಚ್.ಎಸ್.ರೂಪ ಹತ್ತನೇ ಬಹುಮಾನ ಪಡೆದರು.

ಇದೇ ವೇಳೆ ನಡೆದ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಸವಿತಾ ಮೋಹನ್ ಪ್ರಥಮ, ಸಂಖ್ಯೆ ೧೧೪ರ ಜಗದಾಂಬ ಸೋಮಶೇಖರ್ ದ್ವಿತೀಯ ಹಾಗೂ ಸಂಖ್ಯೆ ೮೦ರ ಎಸ್.ಎನ್.ವನಜಾಕ್ಷಿ ತೃತೀಯ ಬಹುಮಾನ ಪಡೆದರು. ಸಂಖ್ಯೆ ೧೦೩ರ ಸುಮ ನಾಲ್ಕನೇ ಹಾಗೂ ಸಂಖ್ಯೆ ೭೨ರ ಸುರೇಶ್ ಐದನೇ ಬಹುಮಾನ ಗಳಿಸಿದರು.ಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಇಂತಹ ಸಾಂಸ್ಕೃತಿಕ ಹಾಗೂ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರು ಹಾಗೂ ಮಹಿಳೆಯರ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ. ಸ್ಪರ್ಧೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದಿತು.ಬಹುಮಾನ ವಿತರಣೆ: ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮಂಗಳವಾರ ಸಂಜೆ ಶ್ರೀಗಣಪತಿ ಪೆಂಡಲ್‌ನಲ್ಲಿ ಬಹುಮಾನ ವಿತರಿಸಲಾಯಿತು ಎಂದು ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಿಳಿಸಿದ್ದಾರೆ. ಈ ಬಗ್ಗೆ ಭಾರತ್ ಸೇವಾದಳದ ಸಂಘಟಕಿ ವಿ.ಎಸ್. ರಾಣಿ ಮಾಧ್ಯಮದೊಂದಿಗೆ ಮಾತನಾಡಿ ವಿವರ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಬದಿ ಕಸ ಎಸೆದವರಿಗೆ ಪಾಲಿಕೆ ಪಾಠ!
ಸಚಿವ ಜೋಶಿ ಕುಟುಂಬದ ಕುರಿತ ಹೇಳಿಕೆಗೆ ರೈತ ಹೋರಾಟಗಾರ ವಿಷಾದ