ಸಮಸ್ಯೆ ಮುಕ್ತ ಅಗಳಕುಪ್ಪೆ ಗ್ರಾಮ ಎಂದ ಮಹಿಳೆಯರಿಗೆ ಧನ್ಯವಾದ ತಿಳಿಸಿದ ಶಾಸಕರು
ಸೋಂಪುರ ಹೋಬಳಿಯ ಅಗಳಕುಪ್ಪೆ ಗ್ರಾಮದಲ್ಲಿ ನೆಲಮಂಗಲ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಕಷ್ಟ- ಸುಖ ಆಲಿಸುವುದು ನನ್ನ ಕರ್ತವ್ಯ:ರಂಗೋಲಿಗೆ ನಮ್ಮ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ನೀಡಿದ್ದೇವೆ. ಇಂದಿಗೂ ಮಹಿಳೆಯರು ಪ್ರತಿ ಮನೆಯ ಮುಂದೆ ಬೆಳಗ್ಗೆ ರಂಗೋಲಿ ಬಿಡಿಸಿ ಮನೆಯ ಕಾರ್ಯಗಳನ್ನು ಆರಂಭಿಸುವುದು ರೂಢಿಯಲ್ಲಿದೆ. ಮಹಿಳೆಯರು ಕಳೆದ ಚುನಾವಣೆಯಲ್ಲಿ ನನಗೆ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಅವರ ಕಷ್ಟ- ಸುಖಗಳನ್ನು ಆಲಿಸುವುದು ನನ್ನ ಕರ್ತವ್ಯ, ಹಾಗಾಗಿ ರಂಗೋಲಿ ಸ್ಪರ್ಧೆ ಮೂಲಕ ಮಹಿಳೆಯರನ್ನು ನೇರವಾಗಿ ಭೇಟಿ ಮಾಡಿ ಮುಖಾಮುಖಿ ಮಾತನಾಡಿ, ಅವರ ಕಷ್ಟ- ಸುಖಗಳನ್ನು ತಿಳಿದು ಸಾಧ್ಯವಾದಷ್ಟು ಪರಿಹರಿಸುತ್ತಿದ್ದೇನೆ ಎಂದರು.
ನೆಲಮಂಗಲ ಉತ್ಸವ ಅಂಗವಾಗಿ ತಾಲೂಕಿನಲ್ಲಿ ಸುಮಾರು 4500 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದ್ದೇನೆ. ಅದರ ಮುಂದಿನ ಭಾಗವಾಗಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದೇನೆ. ಮುಂದಿನ ದಿನಗಳಲ್ಲಿ ಯುವಕರಿಗೆ, ರೈತರಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದರು.
ಸುಮಾರು ದಶಕಗಳಿಂದ ದಾಬಸ್‍ಪೇಟೆ- ಅಗಳಕುಪ್ಪೆ ರಸ್ತೆ ಕಿರಿದಾಗಿದ್ದು ವಾಹನಗಳು ಸುಗಮವಾಗಿ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಗೋವಿಂದರಾಜು ಅವರು ಗಮನಕ್ಕೆ ತಂದ ಮೊದಲ ವರ್ಷದಲ್ಲೇ ರಸ್ತೆಯನ್ನು ಅಗಲೀಕರಣ ಮಾಡಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದೇನೆ. ಅಗಳಕುಪ್ಪೆ ಗೋವಿಂದರಾಜುರವರು ಗ್ರಾಮದ ಎಲ್ಲಾ ಕೆಲಸಗಳನ್ನು ಮಾಡಿಸಿದ್ದಾರೆ. ಅಗಳಕುಪ್ಪೆ ಸಮಸ್ಯೆ ಮುಕ್ತ ಗ್ರಾಮವಾಗಿದೆ ಎಂದು ಮಹಿಳೆಯರೇ ಹೇಳಿರುವುದು ಸಂತಸ ತಂದಿದೆ ಎಂದರು.
ರಂಗೋಲಿ ಬಿಡಿಸಿದ ಯುವಕರು:
ವಿವಿಧ ಗ್ರಾಮಗಳಲ್ಲಿ ಆಯೋಜನೆ: ಅಗಳಕುಪ್ಪೆ ಗ್ರಾಪಂ ವ್ಯಾಪ್ತಿಯ ಅಗಳಕುಪ್ಪೆ, ಕೃಷ್ಣಾಪುರ, ಕಲ್ಲನಾಯ್ಕನಹಳ್ಳಿ, ಬೀರಗೊಂಡನಹಳ್ಳಿ, ಕಾಮಾಲಾಪುರ, ಅರಳಿಮರದಪಾಳ್ಯ, ದೇವರಹೊಸಹಳ್ಳಿ, ಲಕ್ಷ್ಮೀನಗರ, ಹಳೆನಿಜಗಲ್, ಕಸಬಾನಿಜಗಲ್, ಮುದ್ದರಾಮನಾಯಕನಪಾಳ್ಯ ಲಕ್ಕೂರು ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಬಹುಮಾನ ವಿತರಿಸಿದರು.