ರಾಣಿ ಅಬ್ಬಕ್ಕಳ ಸಾಧನೆ ಮುಂದಿನ ಪೀಳಿಗೆಗೆ ಅಡಿಗಲ್ಲು: ಶಾಸಕ ವೇದವ್ಯಾಸ ಕಾಮತ್

KannadaprabhaNewsNetwork |  
Published : Apr 28, 2026, 02:45 AM IST
ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು | Kannada Prabha

ಸಾರಾಂಶ

ಮಂಗಳೂರಿನ ಕೊಡಿಯಾಲ್‌ಬೈಲ್ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಅಬ್ಬಕ್ಕಳ ಸರಣಿ ಉಪನ್ಯಾಸ ನೆರವೇರಿತು.

ಮಂಗಳೂರು: ರಾಣಿ ಅಬ್ಬಕ್ಕಳ ಸಾಧನೆ, ಸಮಾನತೆ, ದೇಶಾಭಿಮಾನ, ಆಡಳಿತ ಮತ್ತು ದೈರ್ಯ ಮುಂದಿನ ಪೀಳಿಗೆಗೆ ಅಡಿಗಲ್ಲು ಆಗಬೇಕು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆಶಿಸಿದ್ದಾರೆ.ಮಂಗಳೂರಿನ ಕೊಡಿಯಾಲ್‌ಬೈಲ್ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನಡೆಸಿದ ಅಬ್ಬಕ್ಕಳ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮಹಿಳಾ ನ್ಯಾಷನಲ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷೆ ಮತ್ತು ಬೆಸೆಂಟ್ ಮಹಿಳಾ ಕಾಲೇಜು ಸಂಚಾಲಕಿ ಡಾ.ಮಂಜುಳಾ ಕೆ.ಟಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಸಾಹತುಗಾರರಾದ ಪೋರ್ಚುಗೀಸರನ್ನು ಪ್ರತಿಭಟಿಸಿದ ಮಹಿಳೆಅಬ್ಬಕ್ಕಳನ್ನು ಗುರುತಿಸುವಂಥ ಕಾರ್ಯಕ್ರಮವನ್ನು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮಾಡಿರುವುದು ಶ್ಲಾಘನೀಯ. ಅಬ್ಬಕ್ಕಳ ಸಂದೇಶವನ್ನು ದೇಶವ್ಯಾಪ್ತಿ ಪಸರಿಸಬೇಕೆಂದು ಹೇಳಿದರು.

ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್‌ ಉಪನ್ಯಾಸ ನೀಡಿ, ಅಬ್ಬಕ್ಕ ಉಳ್ಳಾಲದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯೆಂದು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರ ಘೋಷಿಸುವಂತೆ ಮಾಡಬೇಕೆಂದು ಆಗ್ರಹಿಸಿದರು.ಬೆಸೆಂಟ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್ ಕುಮಾರ್ ಕೆ.ಸಿ, ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ , ಸಮಿತಿಯ ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ, ದೇವಕಿ ಆರ್.ಉಳ್ಳಾಲ್, ಸದಸ್ಯರಾದ ರಾಘವ ಡಿ.ಎನ್, ಸತೀಶ್ ಭಂಡಾರಿ, ಮಾಧವ ಉಳ್ಳಾಲ್, ಚಿದಾನಂದ ಎ, ರಾಧಕೃಷ್ಣ ರೈ, ರತ್ನಾವತಿ ಜೆ ಬೈಕಾಡಿ, ಮಲ್ಲಿಕಾ ಭಂಡಾರಿ, ಹೇಮಾ ಯು, ಸರೋಜಾ ಕುಮಾರಿ, ಕ್ಲೇರಾ ಕುವೆಲ್ಲೋ, ಸತ್ಯವತಿ ಜೆ.ಕೆ, ಜಯಲಕ್ಷ್ಮಿ, ಬಾಲಕೃಷ್ಣ, ಸುಜಾತ ಶೆಟ್ಟಿ ಇದ್ದರು.

ಮಾಜಿ ಶಾಸಕ ಹಾಗೂ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಜ್ಞಾನೇಶ್ವರಿ,

ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯದರ್ಶಿ ರತ್ನಾವತಿ ಜೆ.ಬೈಕಾಡಿ ಸ್ವಾಗತಿಸಿದರು. ಆನಂದ ಕೆ.ಅಸೈಗೋಳಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ: ಡಾ.ವಿ.ಡಿ.ಐಹೊಳ್ಳಿ
ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತ್ನಾಳ ಭೂಮಿಪೂಜೆ