ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ರಾಣಿ ಚೆನ್ನಮ್ಮ ಜಯಂತಿ

KannadaprabhaNewsNetwork |  
Published : Oct 24, 2026, 01:45 AM IST
ಕ್ಯಾಪ್ಷನ23ಕೆಡಿವಿಜಿ31 ನವದೆಹಲಿಯ ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ರಾಣಿ ಚೆನ್ನಮ್ಮನವರ ಜನ್ಮ ಜಯಂತಿ ಮತ್ತು 202ನೇ ವಿಜಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ನವದೆಹಲಿಯ ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಶುಕ್ರವಾರ ರಾಣಿ ಚೆನ್ನಮ್ಮ ಜನ್ಮ ಜಯಂತಿ ಮತ್ತು 202ನೇ ವಿಜಯೋತ್ಸವವನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ ನೇತೃತ್ವದಲ್ಲಿ ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ವಿವಿಧ ಮಠಾಧೀಶರು, ಗಣ್ಯರು ಪುಷ್ಪನಮನ ಸಲ್ಲಿಸಿದ್ದಾರೆ.

- 202ನೇ ವಿಜಯೋತ್ಸವ ಆಚರಣೆ । ಚೆನ್ನಮ್ಮ ಪ್ರತಿಮೆಗೆ ಮಠಾಧೀಶರು, ಗಣ್ಯರಿಂದ ಪುಷ್ಪನಮನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನವದೆಹಲಿಯ ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ಶುಕ್ರವಾರ ರಾಣಿ ಚೆನ್ನಮ್ಮ ಜನ್ಮ ಜಯಂತಿ ಮತ್ತು 202ನೇ ವಿಜಯೋತ್ಸವವನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರು ಸಂಸದ ವಿ.ಸೋಮಣ್ಣ ನೇತೃತ್ವದಲ್ಲಿ ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ವಿವಿಧ ಮಠಾಧೀಶರು, ಗಣ್ಯರು ಪುಷ್ಪನಮನ ಸಲ್ಲಿಸಿದರು.

ಕೇಂದ್ರ ಸಚಿವ ವಿ.ಸೋಮಣ್ಣ ಈ ಸಂದರ್ಭ ಮಾತನಾಡಿ, ರಾಷ್ಟ್ರ ಕಂಡ ಅಪ್ರತಿಮ ಮಹಿಳಾ ಸೇನಾನಿ, ಕಿತ್ತೂರು ಮಹಾಸಂಸ್ಥಾನದ ವೀರವನಿತೆ ರಾಣಿ ಚೆನ್ನಮ್ಮ ಅವರ ಜನ್ಮದಿನೋತ್ಸವ ಹಾಗೂ ಬ್ರಿಟಿಷರ ವಿರುದ್ಧದ ಅವರ 202ನೇ ವರ್ಷದ ವಿಜಯೋತ್ಸವ ಸಂಭ್ರಮದಲ್ಲಿ ದೇಶದ ಜನತೆಗೆ ಹೃತ್ಫೂರ್ವಕ ಶುಭಾಶಯಗಳು ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಕೇವಲ ಯುದ್ಧ ಮಾಡಿದ ರಾಣಿಯಲ್ಲ, ಅವರು ಒಂದು ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸೆದು, ಪ್ರತಿರೋಧದ ಅಮರ ಸಂಕೇತವಾಗಿ ಇತಿಹಾಸದಲ್ಲಿ ಉಳಿದ ವೀರಮಹಿಳೆ. ಇಂತಹ ವೀರಮಹಿಳೆ ಸಾಧನೆಯನ್ನು ಸಂಭ್ರಮಿಸುವ ಅವಕಾಶ ನಮಗೆ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ತಿಳಿಸಿದರು.

ಭಾರತೀಯ ಸಂಸತ್ತಿನ ಈ ಪವಿತ್ರ ಸ್ಥಳದಲ್ಲಿ ವೀರವನಿತೆ ರಾಣಿ ಚೆನ್ನಮ್ಮನವರ ಶೌರ್ಯ, ಧೈರ್ಯ, ಕಿಚ್ಚು ಇಂದು ದೇಶ ಕಾಯುವ ವೀರರಿಗೆ ಸ್ಫೂರ್ತಿ. ನಾಡು-ನುಡಿ ಅಭಿಮಾನವುಳ್ಳ ನಮ್ಮ ನಿಮ್ಮೆಲ್ಲರಿಗೂ ಇದು ಕೀರ್ತಿ. ಪ್ರತಿ ವರ್ಷವೂ ಕನ್ನಡಿಗರಾದ ನಾವು, ನೀವೆಲ್ಲರೂ ಇಲ್ಲಿ ಸೇರೋಣ, ಇಂತಹ ಮಹನೀಯರನ್ನು ನೆನೆಯೋಣ. ಪ್ರತಿ ವರ್ಷ ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟು, ನಮಗೆಲ್ಲರಿಗೂ ಪ್ರೇರಣಾದಾಯಕ ಶಕ್ತಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಸಮಸ್ತ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು.

ರಾಣಿ ಚೆನ್ನಮ್ಮನ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಗೌರವ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ನಾಡಿನ ಸಮಸ್ತ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸಂಸತ್ತಿನ ಪ್ರೇರಣಾ ಸ್ಥಳದಲ್ಲಿ ಪ್ರತಿವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಾರ್ಯವೈಖರಿಯ ಬಗ್ಗೆ ಕಾರ್ಯಕ್ರಮದಲ್ಲಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್, ಸಂಸದ ಪಿ.ಸಿ.ಮೋಹನ್, ಡಾ.ಸುಧಾಕರ್, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕ ರಾಜ್ಯದ ಮಾಜಿ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಸಿದ್ದಾರೂಢರ ಮಠ, ಆಳೂರು, ಬೀದರ್, ಶ್ರೀ ಆತ್ಮಾರಾಮ ಸ್ವಾಮೀಜಿ, ಶ್ರೀ ಗುರುದೇವ ಆಶ್ರಮ, ಕಕ್ಕಮರಿ, ಶ್ರೀ ವಿನಾಯಕ ಸ್ವಾಮೀಜಿ, ಶ್ರೀ ಸಿದ್ದಾರೂಢ ಮಠ, ಚಳಕಾಪುರ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಾಜಿ ಅಧ್ಯಕ್ಷ ಮತ್ತು ಪಂಚಮಸಾಲಿ ಜಗದ್ಗುರು ಪೀಠದ ಧರ್ಮದರ್ಶಿಗಳಾದ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು ಹಾಗೂ ರಾಜ್ಯಾಧ್ಯಕ್ಷ ಶಂಕರ ಆರ್.ಬಿಸರಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕನ್ನಡಿಗರು ಮತ್ತು ದೆಹಲಿಯ ಅಪಾರ ಸಂಖ್ಯೆಯ ಕನ್ನಡಿಗರು ಉಪಸ್ಥಿತರಿದ್ದರು.

- - -

-23ಕೆಡಿವಿಜಿ31:

ನವದೆಹಲಿಯ ಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿ ರಾಣಿ ಚೆನ್ನಮ್ಮ ಜನ್ಮ ಜಯಂತಿ ಮತ್ತು 202ನೇ ವಿಜಯೋತ್ಸವ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪೋಷಕರು ಪಣ ತೊಡಬೇಕು: ನಯನಾ ಮೋಟಮ್ಮ
ಮತದಾನ ಕೇಂದ್ರಗಳಿಗೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ