ಯಶೋದಾ ಆಸ್ಪತ್ರೆಯಲ್ಲಿ ಅಪರೂಪದ ಲ್ಯಾಪರೊಸ್ಕೋಪಿಕ್ ಕಿಡ್ನಿ ಕಸಿ

KannadaprabhaNewsNetwork |  
Published : Oct 02, 2026, 03:00 AM IST
ಯಶೋದಾ ಆಸ್ಪತ್ರೆಯಲ್ಲಿ ಅಪರೂಪದ ಲ್ಯಾಪರೊಸ್ಕೋಪಿಕ್ ಕಿಡ್ನಿ ಕಸಿ ಯಶಸ್ವಿ | Kannada Prabha

ಸಾರಾಂಶ

ಅಪರೂಪದ ಲ್ಯಾಪರೊಸ್ಕೋಪಿಕ್ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ವಿಜಯಪುರ ನಗರದ ಯಶೋದಾ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಬರೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಅಪರೂಪದ ಲ್ಯಾಪರೊಸ್ಕೋಪಿಕ್ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ನಗರದ ಯಶೋದಾ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಬರೆದಿದೆ.

ನಗರದ ಭೂತನಾಳ ಬೈಪಾಸ್‌ ಬಳಿಯಿರುವ ಯಶೋದಾ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಸಹ ಅಧ್ಯಕ್ಷೆ ಡಾ.ಕಮಲಾ ಮದ್ರಕಿ ಅವರು, ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಲ್ಯಾಪರೊಸ್ಕೋಪಿಕ್ ಕಿಡ್ನಿ ಕಸಿ ಮಾಡಿದ ಹೆಗ್ಗಳಿಕೆ ಯಶೋದಾ ಆಸ್ಪತ್ರೆಯದ್ದಾಗಿದ್ದು, ಮೆಟ್ರೋ ಸಿಟಿಗಳಲ್ಲಿ ಮಾತ್ರ ಆಗುತ್ತಿದ್ದ ಅಪರೂಪದ ಲ್ಯಾಪರೊಸ್ಕೋಪಿಕ್ ಲೈವ್ ಕಿಡ್ನಿ ಕೀ ಹೋಲ್ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಖ್ಯಾತ ಮೂತ್ರಪಿಂಡ ತಜ್ಞ ಹಾಗೂ ಕಿಡ್ನಿ ಕಸಿ ತಜ್ಞರಾದ ಡಾ.ರವೀಂದ್ರ ಮದ್ರಕಿ ಹಾಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸಕ ಡಾ.ಸುನಿಲಕುಮಾರ ಸಜ್ಜನರ ನೇತೃತ್ವದ ವೈದ್ಯರ ತಂಡ ಹುಟ್ಟಿನಿಂದಲೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸಿಂದಗಿ ಮೂಲದ 16 ವರ್ಷದ ಕಡಿಮೆ ಎತ್ತರ ಹಾಗೂ ಕಡಿಮೆ ತೂಕ ಹೊಂದಿದ್ದ ಪುಟ್ಟ ಗಾತ್ರದ ಬಾಲಕನಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು. ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಸುಮಾರು 15-20 ಸೆಂ.ಮೀ. ಉದ್ದದ ದೊಡ್ಡ ಛೇದನ ಮಾಡಬೇಕಿದ್ದು, ಈ ಪ್ರಕರಣದಲ್ಲಿ ಲ್ಯಾಪರೊಸ್ಕೋಪಿಕ್ ತಂತ್ರಜ್ಞಾನ ಬಳಸಿಕೊಂಡು, ಕೇವಲ 3 ಸಣ್ಣ ಕೀ ಹೋಲ್ ರಂಧ್ರಗಳ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇಲ್ಲಿನ ಡಾ.ರಾಕೇಶ ಪಾಟೀಲ, ಡಾ.ರಾಘವೇಂದ್ರ ಸರ್ವಂದಿ, ಡಾ.ಸುನಿಲ ಸಾತಿಹಾಳ, ಡಾ.ನಂದೀಶ ರೊಟ್ಟಿ ರವರ ತಂಡ ಲ್ಯಾಪರೊಸ್ಕೋಪಿಕ್ ಕಿಡ್ನಿ ಕಸಿಗೆ ಸಿದ್ಧವಾಗಿದ್ದು, ಈ ಭಾಗದ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಯಶೋದಾ ಆಸ್ಪತ್ರೆ ಅಧ್ಯಕ್ಷ ಡಾ.ರವೀಂದ್ರ ಮದ್ರಕಿ ಮಾತನಾಡಿ, ತಂದೆಯ ದೊಡ್ಡದಾದ ಕಿಡ್ನಿಯನ್ನು ಕಡಿಮೆ ಎತ್ತರ, ಕಡಿಮೆ ತೂಕ ಇರುವ ಬಾಲಕನಿಗೆ ಅಳವಡಿಸಿದ್ದು ಅಪರೂಪವಾಗಿದೆ. ಮೆಟ್ರೋಗಳಲ್ಲಿ ಮಾತ್ರ ಮಾಡುತ್ತಿದ್ದ ಈ ಚಾಲೆಂಜಿಂಗ್ ಪ್ರಕರಣವನ್ನು ನಮ್ಮ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಯಶಸ್ವಿ ಕಿಡ್ನಿ ಕಸಿ ಮಾಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಯೋಜನೆಗಳಲ್ಲಿ ಹಾಗೂ ಖಾಸಗಿ ವಿಮೆಗಳಿದ್ದಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನಂತಹ ಮಹಾನಗರದಲ್ಲೂ ಆಗದಂತಹ ಕ್ಲಿಷ್ಟಕರವಾದ ಕಿಡ್ನಿ ಕಸಿಯನ್ನು ರೋಗಿಯೊಬ್ಬರು ನಮ್ಮ ಆಸ್ಪತ್ರೆಗೆ ಬಂದು ಮಾಡಿಸಿಕೊಂಡಿದ್ದಾರೆ. ಮಣಿಪಾಲ‌ ನಂತಹ ದೊಡ್ಡ ಸಂಸ್ಥೆಯಿಂದ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬಂದು ಕಿಡ್ನಿ ಕಸಿಯ ಕುರಿತು ಕಲಿಯುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಸುನೀಲಕುಮಾರ ಸಜ್ಜನ, ಡಾ.ರಾಘವೇಂದ್ರ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಫಲತೆಯಿಂದ ಕುಗ್ಗದೆ ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು
ಮಕ್ಕಳಿಗೆ ಗೂಗಲ್‌ ಗುರುವಿನ ಜ್ಞಾನ ಅಗತ್ಯ