ರಾಷ್ಟ್ರಕವಿ ಕುವೆಂಪು ಕನ್ನಡದ ಕಂಪು

KannadaprabhaNewsNetwork | Published : Jun 29, 2024 12:43 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ಪ್ರೀತಿ, ಸ್ನೇಹ, ಸಾಮರಸ್ಯದ ತತ್ವಗಳನ್ನು ಸಾಹಿತ್ಯದ ಜೀವಾಳವನ್ನಾಗಿಸಿ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಕನ್ನಡ ಕಂಪು ಎಂದು ಚಿಕ್ಕಬಾಗೇವಾಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಡಾ.ಷಣ್ಮುಖ ಗಣಾಚಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪ್ರೀತಿ, ಸ್ನೇಹ, ಸಾಮರಸ್ಯದ ತತ್ವಗಳನ್ನು ಸಾಹಿತ್ಯದ ಜೀವಾಳವನ್ನಾಗಿಸಿ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಕನ್ನಡ ಕಂಪು ಎಂದು ಚಿಕ್ಕಬಾಗೇವಾಡಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಡಾ.ಷಣ್ಮುಖ ಗಣಾಚಾರಿ ಹೇಳಿದರು.

ಕರ್ನಾಟಕ ಸಂಭ್ರಮ-50 ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ನೇಸರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ಕಾಲೇಜಿನ ಗಂಗೂಬಾಯಿ ಹಾನಗಲ್ ಸಭಾಭವನದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜೀವನ-ಸಾಹಿತ್ಯ ಎಂಬ ವಿಷಯದ ಕುರಿತು ಕಾವ್ಯೋತ್ಸವದಲ್ಲಿ ಅವರು ಮಾತನಾಡಿದರು. ಸಹ್ಯಾದ್ರಿಯ ಮಡಿಲಿನಲ್ಲಿ ಹುಟ್ಟಿ ಬೆಳೆದ ಅದ್ಭುತ ಪ್ರತಿಭೆ ವಿಶ್ವಕವಿಯಾಗಿ ಹೊರಹೊಮ್ಮಿದ್ದು ಕನ್ನಡದ ಹೆಮ್ಮೆ ಎಂದರು.

ಹಿರಿಯ ಸಾಹಿತಿ ಸಿ.ವಿ.ಕಟ್ಟಿಮನಿ ಮಾತನಾಡಿ, ಕುವೆಂಪು ಅವರ ಸಾಹಿತ್ಯದಲ್ಲಿ ಬದುಕಿನ ಉನ್ನತ ಮೌಲ್ಯಗಳ ಹೂರಣ ಅಡಗಿದ್ದು, ಅವರ ಕಾವ್ಯ, ನಾಟಕ, ಕಾದಂಬರಿಗಳನ್ನು ಓದುವುದರಿಂದ ಶ್ರೇಷ್ಠ ಚಿಂತನೆಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದರು.ಪ್ರಾಚಾರ್ಯ ಡಾ.ಫಕೀರನಾಯ್ಕ ಗಡ್ಡಿಗೌಡರ ಮಾತನಾಡಿ, ಕುವೆಂಪು ಅವರ ಸಮಗ್ರ ಸಾಹಿತ್ಯ ಸೃಜನಶೀಲತೆ ಮತ್ತು ವೈಚಾರಿಕತೆಯ ಅಂಶಗಳನ್ನು ಹೊಂದಿದೆ ಎಂದು ವಿವರಿಸಿದರು.

ಸಾಹಿತಿ ಚ.ಯ.ಮೆಣಸಿನಕಾಯಿ ಹಾಗೂ ಯರಗಟ್ಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಮರಿಗೌಡ ಚೋಬಾರಿ ಭಾಗವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾವ್ಯೋತ್ಸವದಲ್ಲಿ ಪ್ರೊ.ಮಹಾದೇವಪ್ಪ ಕೊಪ್ಪದ, ಶ್ವೇತಾ ಪಾಟೀಲ, ಸುರೇಶ ಇಂಚಲ, ಅಡಿವೆಪ್ಪ ಗಡದವರ, ಆನಂದ ವಡರಟ್ಟಿ ನಾಗರಾಜ ಗೋವಿ, ಈಶ್ವರ ಹಸಬಿ, ಮಲ್ಲಿಕಾರ್ಜುನ ಕುಂಬಾರ ಕವನ ವಾಚಿಸಿದರು. ಬೈಲಹೊಂಗಲ ಕಸಾಪ ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಕಾಲೇಜಿನ ಸಿಬ್ಬಂದಿಗಳಾದ ಡಾ.ಪದ್ಮಾ ಹೊಸಕೋಟಿ, ಸುರೇಖಾ ಶೆಟ್ಟಿ, ನಿರ್ಮಲಾ ಸತ್ತಿಗೇರಿ, ಗಿರಿಗೌಡ ಚೋಬಾರಿ, ಪೃಥ್ವಿರಾಜ.ಎನ್, ಅಶೋಕ ಬಾಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ನಾಡೋಜ ಡಾ.ಕಮಲಾ ಹಂಪನಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಸಂತೋಷ ಪಾಟೀಲ ನಿರೂಪಿಸಿದರು. ಡಾ.ಎನ್.ಟಿ ರೇಣಕೆಗೌಡರ ಸ್ವಾಗತಿಸಿದರು. ಆರ್.ವೈ.ಗೌಡರ ವಂದಿಸಿದರು. ಎಸ್.ಎಸ್.ಭಟ್ ಪ್ರಾರ್ಥಿಸಿದರು. ರಾಜು ಹಕ್ಕಿ ನಿರ್ವಹಿಸಿದರು.

Share this article