ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಯಾವುದೇ ನ್ಯಾಯಾಬೆಲೆ ಅಂಗಡಿಯಲ್ಲಿ ಕಡಿಮೆ ಪ್ರಮಾಣದ ಪಡಿತರ ವಿತರಣೆ ಮಾಡಿದ್ದಲ್ಲಿ ಹಾಗೂ ತೂಕ ಮತ್ತು ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿದ್ದಲ್ಲಿ ತಾಲೂಕು ಗ್ಯಾರಂಟಿ ಸಮಿತಿಗೆ ದೂರು ನೀಡಬಹುದಾಗಿದ್ದು ಎಂದು ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‌ಗೌಡ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತೀ ಪಂಚಾಯಿತಿಯ ಹಾಗೂ ನ್ಯಾಯಬೆಲೆ ಅಂಗಡಿಗೆ ಸಮಿತಿಯ ಸದಸ್ಯರೊಂದಿಗೆ ಖುದ್ದಾಗಿ ಭೇಟಿ ನೀಡಿ ಸರಿಯಾಗಿ ಪಡಿತರ ವಿತರಣೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುವುದು. ತಾಪಂ ಗ್ಯಾರಂಟಿ ಕಚೇರಿಯಲ್ಲಿ ದೂರು ಪೆಟ್ಟಿಗೆ ತೆರೆಯಲಾಗಿದ್ದು ದೂರು ಕಂಡುಬಂದಲ್ಲಿ ಸಂಬಂಧಪಟ್ಟ ನ್ಯಾಯಾಬೆಲೆ ಅಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗಳ್ಳಲಾಗುವುದು ಎಂದು ತಿಳಿಸಿದರು.ಆಹಾರ ನಾಗರೀಕ ಮತ್ತು ಸರಬರಾಜು ಇಲಾಖೆಯಿಂದ ರಾಷ್ಟ್ರೀಯ ಆಹಾರ ಭದ್ರತೆ ಆಯ್ದೆ ಅಡಿ ಮಾರ್ಚ್ ೨೦೨೫ರ ಮಾಹೆಯಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಆಹಾರ ಪಡಿತರ ಧಾನ್ಯ ಅಂಚಿಕೆ ಪ್ರಮಾಣವನ್ನು ನಿಗಧಿ ಪಡಿಸಿ ಬಿಡುಗಡೆಯಾದ ಪಡಿತರ ಧಾನ್ಯಗಳನ್ನು ಫಲಾನುಭವಿಗಳಿಗೆ ಪಡಿತರ ವಿತರಿಸುವ ಪ್ರಮಾಣವನ್ನು ಬಿಡುಗಡೆ ಮಾಡಲಾಗಿದ್ದು ಅದರಂತೆ ಅಂತ್ಯೋದಯ ಪಡಿತರ ಚೀಟಿ ಫಲಾನುಭವಿಗಳಿಗೆ 1, 2 ಮತ್ತು 3 ಸದಸ್ಯರನ್ನು ಹೊಂದಿರುವ ಪ್ರತಿ ಕಾರ್ಡ್‌ದಾರರಿಗೆ 35 ಕೆಜಿ ಅಕ್ಕಿ, 4 ಸದಸ್ಯರು ಹೊಂದಿರುವ ಪ್ರತಿ ಕಾರ್ಡ್‌ಗೆ 45 ಕೆಜಿ ಅಕ್ಕಿ, 5 ಸದಸ್ಯರು ಹೊಂದಿರುವ ಪ್ರತಿ ಕಾರ್ಡ್‌ದಾರರಿಗೆ ೬೫ಕೆಜಿ ಅಕ್ಕಿ, ೬ಸದಸ್ಯರು ಹೊಂದಿರುವ ಪ್ರತಿ ಕಾರ್ಡ್‌ಗೆ೮೫ ಕೆಜಿ ಅಕ್ಕಿ, ೭ಸದಸ್ಯರು ಹೊಂದಿರುವ ಪ್ರತಿ ಕಾರ್ಡ್‌ಗೆ ೧೦೫ ಕೆಜಿ ಅಕ್ಕಿ, ೮ ಸದಸ್ಯರು ಹೊಂದಿರುವ ಪ್ರತಿ ಕಾರ್ಡ್‌ಗೆ ೧೨೫ ಕೆಜಿ ಅಕ್ಕಿ, ೯ ಸದಸ್ಯರು ಹೊಂದಿರುವ ಪ್ರತಿ ಕಾರ್ಡ್‌ಗೆ೧೪೫ ಕೆ.ಜಿ ಅಕ್ಕಿ, ೧೦ಸದಸ್ಯರು ಹೊಂದಿರುವ ಪ್ರತಿ ಕಾರ್ಡ್‌ಗೆ೧೬೫ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರಿಗೆ ೧೫ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.ರಾಜ್ಯದ ೫ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ, ಈ ಸಂಬಂಧ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ರಾಜ್ಯದ ಜನತೆಗೆ ಸ್ಪಷ್ಟಪಡಿಸಿದ್ದು ವಿರೋಧಪಕ್ಷದವರು ಸರ್ಕಾರ ಜಾರಿಗೆ ತಂದಿರುವ ಒಳ್ಳೆಯ ಯೋಜನೆಗಳನ್ನು ಸಹಿಸದೆ ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.