ರಟ್ಟೀಹಳ್ಳಿ-ಬೆಳಗಾವಿ ಬಸ್‌ಗೆ ಶಾಸಕ ಬಣಕಾರ ಚಾಲನೆ

KannadaprabhaNewsNetwork |  
Published : Jul 30, 2024, 12:42 AM IST
ರಟ್ಟೀಹಳ್ಳಿ ತಾಲೂಕ ಕೇಂದ್ರದಿಂದ ಬ್ಯಾಡಗಿ, ಹಾವೇರಿ ಮೂಲಕ ಬೆಳಗಾವಿಗೆ ನೂತನ ಬಸ್ಸಗೆ ಶಾಸಕ ಯು.ಬಿ ಬಣಕಾರ ಚಾಲನೆ  | Kannada Prabha

ಸಾರಾಂಶ

ರಟ್ಟೀಹಳ್ಳಿ ತಾಲೂಕು ಕೇಂದ್ರದಿಂದ ಬ್ಯಾಡಗಿ, ಹಾವೇರಿ ಮೂಲಕ ಬೆಳಗಾವಿಗೆ ನೂತನ ಬಸ್‌ಗೆ ಶಾಸಕ ಯು.ಬಿ. ಬಣಕಾರ ಚಾಲನೆ ನೀಡಿದರು.

ರಟ್ಟೀಹಳ್ಳಿ: ರಟ್ಟೀಹಳ್ಳಿ ತಾಲೂಕು ಕೇಂದ್ರದಿಂದ ಬ್ಯಾಡಗಿ, ಹಾವೇರಿ ಮೂಲಕ ಬೆಳಗಾವಿಗೆ ನೂತನ ಬಸ್‌ಗೆ ಶಾಸಕ ಯು.ಬಿ. ಬಣಕಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಬೆಳಗಾವಿ ಘಟಕದ ಬೆಳಗಾವಿ-ರಟ್ಟೀಹಳ್ಳಿ ಮಾರ್ಗಗಳಲ್ಲಿ ಸಂಚರಿಸುವುದರಿಂದ ಅನೇಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಜಿಲ್ಲಾ ಕೇಂದ್ರ ಹಾಗೂ ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಸಂಚರಿಸುವರಿಗೆ ಸಾಕಷ್ಟು ಅನುಕೂಲವಾಗಿತ್ತು, ಆದರೆ ಕೆಲವು ತಿಂಗಳುಗಳಿಂದ ಬಸ್‌ ಸಂಚಾರ ನಿಲ್ಲಿಸಲಾಗಿತ್ತು. ಆದ್ದರಿಂದ ಸಾರ್ವಜನಿಕರು ನನಗೆ ಅನೇಕ ಬಾರಿ ಮನವಿ ಮಾಡಿದ್ದರಿಂದ ಇಂದು ನೂತನ ಬಸ್‌ಗೆ ಚಾಲನೆ ನೀಡಲಾಗಿದೆ. ಈ ಬಸ್‌ ಮಾಸೂರ ಗ್ರಾಮದಿಂದ ಮುಂಜಾನೆ 8.15ಕ್ಕೆ ಹೊರಟು ಪಟ್ಟಣಕ್ಕೆ 8.30ಕ್ಕೆ ತಲುಪುವುದು ಎಂದರು.

ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಸಾರಿಗೆ ಇಲಾಖೆಯಲ್ಲಿನ ತೊಂದರೆಗಳಿಗೆ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗಿದ್ದು, ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಿದ್ದು, ಇನ್ನೆರಡು ತಿಂಗಳಲ್ಲಿ ಪ್ರತಿಯೊಂದು ಘಟಕ್ಕೆ ಚಾಲಕ, ನಿರ್ವಾಹಕರನ್ನು ನೇಮಕ ಮಾಡಲು ಸಚಿವರು ಸಮರ್ಪಕ ಉತ್ತರ ನೀಡಿದ್ದಾರೆ. ರಟ್ಟೀಹಳ್ಳಿ ಪಟ್ಟಣಕ್ಕೆ ನೂತನ ಘಟಕಕ್ಕೆ ಮನವಿ ಮಾಡಲಾಗಿದ್ದು, ಹಿರೇಕೆರೂರ ಘಟಕದಲ್ಲಿ 96 ಶಡ್ಯೂಲ್‌ಗಳಿದ್ದು ಹೊಸದಾಗಿ ಡಿಪೋಗಳನ್ನು ನಿರ್ಮಾಣ ಮಾಡಲು ಜಾಗೆ ಹುಡುಕುತ್ತಿದ್ದು, ಸ್ಥಳದ ಲಭ್ಯತೆ ನೋಡಿಕೊಂಡು ಸ್ಥಾಪನೆ ಮಾಡಲಾಗುವುದು ಎಂದರು.

ರಟ್ಟೀಹಳ್ಳಿ ಪಟ್ಟಣದಲ್ಲಿ ನೂತನ ಬಸ್‌ ಘಟಕ ಸ್ಥಾಪನೆಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಮಾಡಿದ್ದು ಪಟ್ಟಣದಲ್ಲಿ ನೂತನ ಘಟಕ ಸ್ಥಾಪನೆ ಮಾಡಿದರೆ ಹಿರೇಕೆರೂರ ಶೆಡ್ಯೂಲ್‌ಗಳ ಹೊರೆ ಕಡಿಮೆ ಮಾಡಲು ಅನುಕೂಲವಾಗುವುದು. ಆದ್ದರಿಂದ ಆದಷ್ಟು ಬೇಗ ಘಟಕ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಹಿರೇಕೆರೂರ ಘಟಕದ ವ್ಯವಸ್ಥಾಪಕ ನಾರಾಯಣಪ್ಪ ಗೌರಕ್ಕನವರ, ಪಿ.ಡಿ. ಬಸನಗೌಡ್ರ, ರೈತ ಮುಖಂಡ ಹನಮಂತಪ್ಪ ದೀವಗಿಹಳ್ಳಿ, ರಮೇಶ ಭೀಮಪ್ಪನವರ, ಮಹೇಶ ಗುಬ್ಬಿ, ವೀರನಗೌಡ ಪ್ಯಾಟಿಗೌಡ್ರ, ನಾಗರಾಜ ಕೊಣ್ತಿ, ಮಂಜು ಮಾಸೂರ, ನಾಸೀರಸಾಬ್ ಸೈಕಲ್ಗಾರ, ರಿಯಾಜ್ ನರಗುಂದಕರ್, ಪರಮೇಶಪ್ಪ ಕಟ್ಟೆಕಾರ, ಕಪೀಲ ಪೂಜಾರ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ