ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ರವೀಂದ್ರ ಪಾಟೀಲ್

KannadaprabhaNewsNetwork |  
Published : Aug 04, 2025, 12:15 AM IST
ಯಾದಗಿರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ರವೀಂದ್ರ ಪಾಟೀಲ್ | Kannada Prabha

ಸಾರಾಂಶ

Ravindra Patil as the President of the District Bar Association

-ಉಪಾಧ್ಯಕ್ಷರಾಗಿ ಭೀಮರೆಡ್ಡಿ ಅಚ್ಚೋಲಾ ಆಯ್ಕೆ । ಪ್ರಧಾನ ಕಾರ್ಯದರ್ಶಿಯಾಗಿ ಭೀಮಾಶಂಕರ ಆಶನಾಳ

--

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ಜಿಲ್ಲಾ ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ಎಸ್. ಪಾಟೀಲ್ ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಭೀಮಾಶಂಕರ ಆಶನಾಳ ವಿಜಯ ಸಾಧಿಸಿದ್ದಾರೆ.

ವಕೀಲರ ಸಂಘದ ಭವನದಲ್ಲಿ ಶುಕ್ರವಾರ ಚುನಾವಣೆ ನಡೆದಿತ್ತು. ಉಪಾಧ್ಯಕ್ಷರಾಗಿ ಭೀಮರೆಡ್ಡಿ ಅಚ್ಚೋಲಾ, ಜಂಟಿ ಕಾರ್ಯ ದರ್ಶಿಯಾಗಿ ವಿನೋದ ಕುಮಾರ ಜೈನ್ ಜಯಗಳಿಸಿದ್ದಾರೆ. ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಶಾಂತಪ್ಪ ಖಾನಳ್ಳಿ 151 ಮತಗಳನ್ನು ಪಡೆದರೆ, ಅವರ ಎದುರಾಳಿಯಾಗಿದ್ದ ಆರ್.ಎಸ್ ಪಾಟೀಲ್ ಅವರು 177 ಮತಗಳನ್ನು ಪಡೆಯುವ ಮೂಲಕ 26 ಮತಗಳಿಂದ ಗೆಲುವಿನ ನಗೆ ಬೀರಿದರು.

ಇನ್ನು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಭೀಮರೆಡ್ಡಿ ಅಚ್ಚೋಲಾ ಅವರು ಅತ್ಯಧಿಕ 240 ಮತಗಳನ್ನು ಪಡೆಯುವದರೊಂದಿಗೆ ಪ್ರಚಂಡ ಜಯ ಗಳಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ 4 ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ ಭೀಮಾಶಂಕರ ಆಶನಾಳ ಅವರು, 152 ಮತಗಳನ್ನು ಗಳಿಸುವ ಮೂಲಕ ಗೆದ್ದು ಬೀಗಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ವಿನೋದಕುಮಾರ ಜೈನ್ ಅವರು 209 ಮತಗಳನ್ನು ಪಡೆದು ವಿಜಯೋತ್ಸವದ ಮಾಲೆ ತಮ್ಮ ಕೊರಳಿಗೆ ಹಾಕಿಕೊಂಡರು.

ಒಟ್ಟು 347 ಮತದಾರರಲ್ಲಿ 332 ಸದಸ್ಯರು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದ್ದರು. 2025 - 26 ನೇ ಸಾಲಿಗಾಗಿ ನೂತನ ಪದಾಧಿಕಾರಿಗಳ ಆಯ್ಕೆಯಾದ ಫಲಿತಾಂಶದ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಹಣಮಂತ ಹಪ್ಪಳ ಅವರು ಮಾಹಿತಿ ನೀಡಿದರು. ಮಹಿಳಾ ಮೀಸಲಾತಿ ಇದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಾವಿತ್ರಿ ಎಂ. ಪಾಟೀಲ್, ಖಜಾಂಚಿ ಸ್ಥಾನಕ್ಕೆ ಸುಷ್ಮಾ ಜಾಧವ್ ಹಾಗೂ ಮೋಹನಕುಮಾರ ಗಜರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 4 ಸ್ಥಾನಗಳಿಗೆ ಚುನವಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

-

3ವೈಡಿಆರ್‌10 : ಯಾದಗಿರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ರವೀಂದ್ರ ಪಾಟೀಲ್

3ವೈಡಿಆರ್‌11 : ಯಾದಗಿರಿ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳು ಗೆಲುವಿನ ನಗೆ ಬೀರುತ್ತಿರುವುದು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌