ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಹಳಪೇಟೆಯಲ್ಲಿ ಗುರುಸಾರ್ವಭೌಮರ ಪೂರ್ವಾರಾಧನೆಯ ನಿಮಿತ್ತ ಪ್ರವಚನ ನೀಡಿ ಮಾತನಾಡಿದ ಅವರು, ಗುರುರಾಯರು ತಾವು ಸಂಪಾದಿಸಿರುವ ತಪಸ್ಸಿನ ಫಲವನ್ನು ಭಕ್ತ ಜನಕೋಟಿಗೆ ಹಂಚುತ್ತಿದ್ದಾರೆ. ಅದಕ್ಕಾಗಿಯೇ ಅಪ್ಪಣಾಚಾರ್ಯರು ತಾವು ಬರೆದಿರುವ ರಾಘವೇಂದ್ರ ಸ್ತೋತ್ರದಲ್ಲಿ ರಾಯರ ಮಹಿಮೆಯನ್ನು ಈ ರೀತಿ ಉಲ್ಲೇಖಿಸಿದ್ದಾರೆ ಎಂದರು.
ಬೆಳಿಗ್ಗೆ ಅಷ್ಟೋತ್ತರ, ವಿಶೇಷ ಅಲಂಕಾರ, ಪೂಜೆ, ಪಂಚಾಮೃತಾಭೀಷೇಕ, ಮಹಾಮಂಗಳಾರತಿ, ಜರುಗಿತು.ಅಧ್ಯಕ್ಷ ತಿರುಮಲಾಚಾರ್ಯ ಭಕ್ರಿ, ವಾಸುದೇವಾಚಾರ್ಯ ಸಗರ, ಅರ್ಚಕ ನರಸಿಂಹಾಚಾರ್ಯ ರೊಟ್ಟಿ, ವಿಠ್ಠಲಾಚಾರ್ಯ ಪ್ರತಿನಿಧಿ ಇದ್ದರು.
------21ವೈಡಿಆರ್4: ಶಹಾಪುರ ನಗರದ ಹಳಪೇಟೆಯಲ್ಲಿ ಗುರುಸಾರ್ವಭೌಮರ ಪೂರ್ವಾರಾಧನೆಯ ನಿಮಿತ್ತ ಪ್ರವಚನ ನೀಡಿದ ಐ.ಜಿ. ನಾರಾಯಣಾಚಾರ್ಯರು.