ಕನ್ನಡಪ್ರಭ ವಾರ್ತೆ ಮಡಿಕೇರಿ
ಫೈನಲ್ ಪಂದ್ಯಾಟದಲ್ಲಿ ಆರ್.ಸಿ.ಬಿ.ಬೈಲುಕುಪ್ಪೆ ತಂಡವು( 67/0) ವಿರಾಜಪೇಟೆ ಕೊಡಗು ಯುವ ವಾರಿಯರ್ಸ್ (66/5) ತಂಡವನ್ನು ಸೋಲಿಸಿತು. ವಿಜೇತ ತಂಡದ ಪರ ಕಿರಣ್ ಅಜೇಯ (48) ಹಾಗೂ ವಿಜಯ್ ಅಜೇಯ(14) ಅವರ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚೊಚ್ಚಲ ನಾಯ್ಡೂಸ್ ಕಪ್ ಗೆದ್ದು ಸಂಭ್ರಮಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ನಲ್ಲಿ ಕೊಡಗು ಯೂತ್ ವಾರಿಯರ್ಸ್ ವಿರಾಜಪೇಟೆ ತಂಡವು 6 ನಿಗದಿತ ಓವರ್ ನಲ್ಲಿ ಒಟ್ಟು 74 ರನ್ ಗಳಿಸಿತು. ಗುರಿ ಬೆನ್ನತ್ತಿದ ಮೂರ್ನಾಡು ಎಕ್ಸ್ ಟ್ರೀಮ್ ಬ್ಲಾಸ್ಟರ್ಸ್ ತಂಡವು ಕೇವಲ 34 ರನ್ ಗಳಿಸಿ ಸೋಲನ್ನಪ್ಪಿತು.ದ್ವಿತೀಯ ಸೆಮಿಫೈನಲ್ ನಲ್ಲಿ ಆರ್.ಸಿ.ಬಿ.ಬೈಲುಕುಪ್ಪೆ (64) ತಂಡವು ಪೆರುಂಬಾಡಿ ಪ್ಯಾಂಥರ್ಸ್ (62) ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ತೀರ್ಪುಗಾರರಾಗಿ ವೆಂಕಟೇಶ್, ಪ್ರತಾಪ್ ಲವ್ಲಿ ಹಾಗೂ ಸ್ಕೋರರ್ ಆಗಿ ಮೋಹಿತ್- ಲಿತಿನ್ ದಾಸ್, ವೀಕ್ಷಕ ವಿವರಣೆಗಾರರಾಗಿ ಟಿ.ವಿ.ಲೋಕೇಶ್, ಟಿ.ಎನ್.ಮಂಜುನಾಥ್ , ನಿರೂಪಣೆಯನ್ನು ನಿರ್ಮಲಾ ವಿಜಯ್ ನೆರವೇರಿಸಿದರು.
ಕ್ರೀಡೆ ಎಲ್ಲರನ್ನೂ ಒಂದುಗೂಡುವಂತೆ ಮಾಡುತ್ತದೆ. ಕೊಡಗು ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳೂ ಕ್ರೀಡೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಬಲಿಜ ಸಮುದಾಯವೂ ವರ್ಷಂಪ್ರತಿ ಕ್ರೀಡಾಕೂಟವನ್ನು ನಡೆಸಬೇಕು. ಮಹಿಳೆಯರು, ಬಾಲಕ, ಬಾಲಕಿಯರು, ಯುವತಿಯರೂ ಕ್ರೀಡೆಯಲ್ಲಿ ತೊಡಗಲು ಕಾರ್ಯಕ್ರಮ ಹಾಕಿಕೊಳ್ಳಬೇಕು.ಮುಂದಿನ ವರ್ಷ ನಾಯ್ಡೂಸ್ ಕ್ರಿಕೆಟ್ ಮೊದಲ ಬಹುಮಾನವನ್ನು ಪ್ರಾಯೋಜಿಸುವುದಾಗಿ ಬಲಿಜ ಮುಖಂಡರಾದ ಟಿ.ಪಿ.ರಮೇಶ್ ಇದೇ ಸಂದರ್ಭ ಘೋಷಣೆ ಮಾಡಿದರು.
ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ಕ್ರಿಕೆಟ್ ತಂಡ ಯುವಕರಿಗೆ ಮಾತ್ರಾ ಸೀಮಿತವಾಗದೆ ಯುವತಿಯರು, ಹಿರಿಯರು, ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಡೆಸುವಂತಾಗಬೇಕು. ಮುಂದಿನ ವರ್ಷ ಜಿಲ್ಲೆಯ ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಂಘಟಕರಾದ ಮೂರ್ನಾಡು ಶ್ರೀನಿವಾಸ್, ಹರ್ಷ, ವಿನೋದ್, ಚೇತನ್ ಮತ್ತು ತಂಡ ಪ್ರಚಾರಪಡಿಸಲು ಮನವಿ ಮಾಡಿದರು.
ಮಹಿಳಾ ವಿಭಾಗದ ವಿಜೇತರು
ಹೆಣ್ಣುಮಕ್ಕಳ ಜಿಗ್ ಜಾಗ್ ಸ್ಪರ್ಧೆಯಲ್ಲಿ ಪ್ರಿಯಾ ರಂಜನ್ , ಮೈಸೂರು (ಪ್ರಥಮ)ಹಾಗೂ ರಚನಾ ಪ್ರಕಾಶ್, ಮೈಸೂರು(ದ್ವಿತೀಯ) ಬಹುಮಾನ ಗೆದ್ದುಕೊಂಡರು.
ಪ್ರಧಾನ ಪ್ರಾಯೋಜಕರಾಗಿ ರೋಹಿತ್ ಆನಂದ್, ಆಶಾ ಎಂ.ಎಸ್, ಪದ್ಮನಾಭ ನಾಯ್ಡು,, ಲೋಹಿತ್ ನಾಯ್ಡು ಮುಂತಾದವರು ಸಹಕರಿಸಿದರು. ಇದೇ ಸಂದರ್ಭ ಮಡಿಕೇರಿ ತಾಲೂಕು ಬಲಿಜ ಸಮಾಜದಿಂದ 10 ಸಾವಿರ ರು. ನಗದನ್ನು ಅಧ್ಯಕ್ಷೆ ಮೀನಾಕ್ಷಿ ಕೇಶವ್ ಘೋಷಣೆ ಮಾಡಿದರು. 25 ರಂದು ನಡೆದ ಟೂರ್ನಿಯಲ್ಲಿ ಒಟ್ಟು 7 ತಂಡಗಳು ಭಾಗವಹಿಸಿದ್ದವು.