ನಾಳೆಯಿಂದ ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ, ವಾರ್ಷಿಕ ಉತ್ಸವ

KannadaprabhaNewsNetwork |  
Published : May 05, 2026, 02:45 AM IST
ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ದೇವಾಲಯದ ಗರ್ಭಗುಡಿ ಹಾಗೂ ಮುಖ ಮಂಟಪ. | Kannada Prabha

ಸಾರಾಂಶ

ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ದೇವಾಲಯದ ಗರ್ಭಗುಡಿ ಹಾಗೂ ಮುಖ ಮಂಟಪ ಕಾಮಗಾರಿ ಸಂಪೂರ್ಣ ಗೊಂಡಿದ್ದು ಅಷ್ಟ ಬಂಧ ಬ್ರಹ್ಮಕಲಶೋತ್ಸವ, ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ವಾರ್ಷಿಕ ಉತ್ಸವ ಮೇ 6 ರಿಂದ 10 ರ ವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬಲ್ಲಮಾವಟಿ ಗ್ರಾಮದ ಶ್ರೀ ಭಗವತಿ ದೇವಾಲಯದ ಗರ್ಭಗುಡಿ ಹಾಗೂ ಮುಖ ಮಂಟಪ ಕಾಮಗಾರಿ ಸಂಪೂರ್ಣ ಗೊಂಡಿದ್ದು ಅಷ್ಟ ಬಂಧ ಬ್ರಹ್ಮಕಲಶೋತ್ಸವ, ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ವಾರ್ಷಿಕ ಉತ್ಸವ ಮೇ 6 ರಿಂದ 10 ರ ವರೆಗೆ ನಡೆಯಲಿದೆ.

ತಂತ್ರಿಗಳಾದ ದಿವಾಕರ ಭಟ್ಟ ನೇತೃತ್ವದಲ್ಲಿ ಮೇ 6ರಂದು ಸಂಜೆ 5:20ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮೇ 7ರಂದು 101 ತೆಂಗಿನಕಾಯಿ ಗಣಪತಿ

ಹೋಮ, ಅಷ್ಟ ದಿಕ್ಪಾಲಕ ಹೋಮ , ಚಂಡಿಕಾ ಹೋಮ ನಡೆಯಲಿದೆ. ಮೇ ಎಂಟರಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ ಪ್ರತಿಷ್ಠಾ ಹೋಮ, ದೇವಿಯ ಪ್ರತಿಷ್ಠೆ, ಬ್ರಹ್ಮ ಕಳಸ ಅಭಿಷೇಕ ಮಹಾಪೂಜೆ ನಡೆಯಲಿದೆ.

ಮೇ 9ರಂದು ಶನಿವಾರ ದೇವಿಯ ಅವಭೃತ ಸ್ನಾನ, ನೃತ್ಯ ಬಲಿ ಹಾಗೂ ಮಹಾಪೂಜೆ (ರಾತ್ರಿ ಅನ್ನದಾನ ಇರುತ್ತದೆ) 10 ಭಾನುವಾರ ದೇವಿಯ ಶುದ್ಧ ಕಳಶ ನಡೆಯಲಿದೆ. ಎಂದು ಭಗವತಿ ದೇವಾಲಯದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಸಾಧನೆಗೆ ಸುನಿಲ್ ಕುಮಾರ್ ಪ್ರಶಂಸೆ
ಸುಂಟಿಕೊಪ್ಪದಲ್ಲಿ ಬಿಜೆಪಿ ವಿಜಯೋತ್ಸವ