Ready to fight against social scourge : Rajeshwari Hegde
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದಿಂದ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ ಪಿಡುಗುಗಳ ವಿರುದ್ಧ ಯುವ ಜನತೆ ಜಾಗೃತರಾಗಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ ಎಂದರು.
ಗ್ರಂಥಾಲಯಗಳೇ ಹಿಂದೆಲ್ಲಾ ನಮಗೆ ಜ್ಞಾನದ ಕಣಜವಾಗಿದ್ದವು. ಯಾವುದೇ ಮಾಹಿತಿ, ಅಂಕಿ ಅಂಶ, ಜ್ಞಾನ ಬೇಕೆಂದರೂ ಗ್ರಂಥಾಲಯ ಅಥವಾ ಅದರ ಬಗ್ಗೆ ಆಳ ಅರಿವು ಇದ್ದ ವರ ಬಳಿ ಹೋಗಿ ಕೇಳಿ ತಿಳಿಯಬೇಕಿತ್ತು. ಆದರೆ, ಇಂದು ತಂತ್ರಜ್ಞಾನವು ಸಾಕಷ್ಟು ಮುಂದುವರಿದಿದೆ. ಬೆರಳ ತುದಿಯಲ್ಲೇ ಎಲ್ಲಾ ಮಾಹಿತಿ ಲಭಿಸುವ ಕಾಲ ಇದು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಕ್ಷಣ ಮಾತ್ರದಲ್ಲಿ ಸಿಗುತ್ತದೆ. ಇಷ್ಟಾದರೂ ಯುವ ಪೀಳಿಗೆಗೆ ಹೋರಾಟಕ್ಕೆ, ಜನಪರ ಕಾರ್ಯದಿಂದ ಹಿಂದೆ ಸರಿಯುತ್ತಿರುವುದು ವಿಷಾದದ ಸಂಗತಿ ಎಂದು ಅವರು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಜಿ.ಸಲಗರೆ ಮಾತನಾಡಿ, ಕಾನೂನು ಪದವಿ ಓದಿದ ನಂತರ ನೀವು ನಿರ್ವಹಿಸುವ ಜವಾಬ್ದಾರಿ ಅತ್ಯಂತ ಗೌರವಯುತವಾದದ್ದು, ಈ ಮೂಲಕ ಸಮಾಜದಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಮೂಲಕ ಸ್ವೇಚ್ಛಾಚಾರ ತಡೆಗಟ್ಟುವ ಹೊಣೆಗಾರಿಕೆಯನ್ನು ಹೊರಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಬದಲಾವಣೆ ಯಾರೋ ಬಂದು ಮಾಡುವುದಲ್ಲ. ನಮ್ಮಿಂದಲೇ ಅದು ಆರಂಭವಾಗಬೇಕೆಂಬ ಅರಿವಿರಲಿ ಎಂದರು.
ಕಾಲೇಜು ಪ್ರಾಚಾರ್ಯ ಡಾ.ಜಿ.ಎಸ್.ಯತೀಶ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಟಿ.ವಿದ್ಯಾಧರ ವೇದವರ್ಮ, ಟಿ.ಸಿ.ಪಂಕಜ, ಎಚ್.ಆರ್.ಪವನ್, ಬಿ.ಪಿ.ಬಸವನಗೌಡ, ಬೋಧಕ-ಬೋಧಕೇತರ ಸಿಬ್ಬಂದಿ, ಕಾನೂನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು. ಕಾಲೇಜಿಂದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು 20 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು, ನಗರದ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಬಿಎಸ್ಸೆನ್ನೆಲ್ ಕಚೇರಿ ವೃತ್ತ, ಹಳೆ ಪಿಬಿ ರಸ್ತೆ, ಪಾಲಿಕೆ, ಅಕ್ಕ ಮಹಾದೇವಿ ರಸ್ತೆ ಮಾರ್ಗವಾಗಿ ರಾ.ಲ.ಕಾನೂನು ಕಾಲೇಜಿನವರೆಗೆ ಜಾಥಾದಲ್ಲಿ ಸಾಗಿದರು. ನಂತರ ಕಾನೂನು ಕಾಲೇಜು ತಲುಪಿದ ಜಾಥಾ ಸಮಾಪನೆಗೊಂಡಿತು.
ಕ್ಯಾಪ್ಷನ್: 24ಕೆಡಿವಿಜಿ2: ದಾವಣಗೆರೆ ರಾ.ಲ.ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಜಾಥಾಗೆ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಚಾಲನೆ ನೀಡಿದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಜಿ.ಸಲಗರೆ ಇದ್ದರು.