ವಾಮಾಚಾರದಿಂದ ಖಿನ್ನತೆ ಒಳಗಾಗಿದ್ದ ದಲಿತರಿಗೆ ಅಭಯ

KannadaprabhaNewsNetwork |  
Published : Nov 25, 2026, 02:30 AM IST
ಪೋಟೋ ಕಲಿಕೇರಿ ಗ್ರಾಮದ ಸ್ಮಶಾನಕ್ಕೆ ಸಮಾಜ ಕಲ್ಯಾಣಾಧಿಕಾರಿ ಹುಲುಗಪ್ಪ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.ಪೋಟೋ ಕನ್ನಡಪ್ರಭದಲ್ಲಿ ಪ್ರಕಟಗೊಂಡ ವರದಿ.   | Kannada Prabha

ಸಾರಾಂಶ

ವಾಮಾಚಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಲೂಕಿನ ಕಲಿಕೇರಿ ಗ್ರಾಮದ ದಲಿತರಿಗೆ ತಾಲೂಕು ಸಮಾಜ ಕಲ್ಯಾಧಿಕಾರಿ ಡಾ. ಹುಲುಗಪ್ಪ ಈಚೆಗೆ ಗ್ರಾಮಕ್ಕೆ ಭೇಟಿ ನೀಡಿ ದೈರ್ಯ ತುಂಬಿದ್ದಾರೆ.

ಕನಕಗಿರಿ ತಾಲೂಕಿನ ಕಲಿಕೇರಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ ಕನಕಗಿರಿ

ವಾಮಾಚಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಲೂಕಿನ ಕಲಿಕೇರಿ ಗ್ರಾಮದ ದಲಿತರಿಗೆ ತಾಲೂಕು ಸಮಾಜ ಕಲ್ಯಾಧಿಕಾರಿ ಡಾ. ಹುಲುಗಪ್ಪ ಈಚೆಗೆ ಗ್ರಾಮಕ್ಕೆ ಭೇಟಿ ನೀಡಿ ದೈರ್ಯ ತುಂಬಿದ್ದಾರೆ. ದೀಪಾವಳಿ ಅಮವಾಸ್ಯೆ ದಿನದಂದು ನಾಲ್ಕೈದು ದಲಿತರ ಪೋಟೋ ಹಾಗೂ ವಾಹನಗಳಿಗೆ ಕಪ್ಪು ಬಟ್ಟೆ, ಅರಿಶಿಣ, ಕುಂಕುಮ ಸೇರಿ ನಾನಾ ವನಸ್ಪತಿಗಳೊಂದಿಗೆ ಬೆಚ್ಚಿ ಬೀಳುವ ರೀತಿಯಲ್ಲಿ ಸ್ಮಶಾನದಲ್ಲಿ ವಾಮಾಚಾರ ನಡೆದಿತ್ತು. ಈ ಬಗ್ಗೆ ಗ್ರಾಮದಲ್ಲಿ ಚಿಕ್ಕಮಕ್ಕಳು, ಮಹಿಳೆಯರು ಭಯ ಭೀತರಾಗಿದ್ದರು. ವಾಮಾಚಾರಕ್ಕೆ ಒಳಗಾದ ದಲಿತ ಕುಟುಂಬಸ್ಥರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಸಮಾಜ ಕಲ್ಯಾಣಾಧಿಕಾರಿ ಡಾ. ಹುಲುಗಪ್ಪ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆ ನಡೆಸಿದ್ದು, ಸ್ಮಶಾನ ಹಾಗೂ ದಲಿತರ ಮನೆಗಳಿಗೆ ತೆರಳಿ ವಾಮಾಚಾರವನ್ನು ಯಾರೂ ನಂಬಬಾರದು. ಇದೆಲ್ಲವೂ ಸುಳ್ಳಾಗಿದ್ದು, ಕೆಲ ದುಷ್ಕರ್ಮಿಗಳು ಬದುಕುವುದಕ್ಕಾಗಿ ಈ ರೀತಿ ಮಾಡುತ್ತಿರುತ್ತಾರೆ. ಎಲ್ಲರೂ ಧೈರ್ಯದಿಂದ ಜೀವನ ಸಾಗಿಸಬೇಕು. ಯಾರ ಮೇಲಾದರೂ ಅನುಮಾನ ಇದ್ದರೆ ಕೂಡಲೇ ಮಾಹಿತಿ ನೀಡಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್‌ ನಗರ ಮತ್ತು ಗ್ರಾಮೀಣ ಸೇವಾ ಸಂಸ್ಥೆಯ ಅಧ್ಯಕ್ಷ ಪಾಮಣ್ಣ ಅರಳಿಗನೂರು ಮಾತನಾಡಿ, ವಾಮಾಚಾರ ಮೌಢ್ಯ ಆಚರಣೆಯಾಗಿದೆ. ದಲಿತರನ್ನು ಗುರಿಯಾಗಿಸಿ ಈ ರೀತಿ ವಾಮಾಚಾರ ಮಾಡಿರುವುದು ಖಂಡನೀಯ. ಕಾಣದ ಕೈಗಳು ಈ ಕೃತ್ಯ ಮಾಡಿವೆ. ಯಾರೂ ಮಾನಸಿಕವಾಗುವ ಅಗತ್ಯವಿಲ್ಲ. ನಿಮ್ಮ ಜತೆ ನಾವಿದ್ದೇವೆ. ನಿರ್ಭಯವಾಗಿ ಜೀವನ ಸಾಗಿಸಿ. ಗ್ರಾಮದಲ್ಲಿ ಪವಾಡ ಬಯಲು ಹಾಗೂ ಮೌಢ್ಯ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಈ ವೇಳೆ ಪಾಮೇಶ ಹರಿಜನ, ಭೀಮೇಶ, ಹುಲುಗಪ್ಪ ಹರಿಜನ, ಪಂಪಾಪತಿ ಗಂಗಾಮತ, ಮಮ್ಮದಸಾಬ ಸೇರಿದಂತೆ ಇತರರು ಇದ್ದರು.

ಕನ್ನಡಪ್ರಭ ಇಂಪ್ಯಾಕ್ಟ್

ನ. ೧೬ರಂದು ಸ್ಮಶಾನದಲ್ಲಿ ಐವರು ದಲಿತರ ಪೋಟೋ ಇಟ್ಟು ವಾಮಾಚಾರ ಹಾಗೂ ನ. ೧೭ರಂದು ವಾಮಾಚಾರದಿಂದ ಖಿನ್ನತೆಗೆ ಒಳಗಾದ ದಲಿತರು ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ವಿಸ್ಕೃತ ವರದಿಯಿಂದ ಎಚ್ಚೆತ್ತುಕೊಂಡಿರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಈಚೆಗೆ ಭೇಟಿ ನೀಡಿ, ಪರಿಶೀಲಿಸಿದ್ದು, ವಾಮಾಚಾರಕ್ಕೆ ಒಳಗಾದ ದಲಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಬಳಕೆ ದುಷ್ಪರಿಣಾಮ ಎಚ್ಚರ ವಹಿಸಿ: ಮಾರುತಿ ಬಾಗಡೆ
ಕಾವೇರಿ ಸಂರಕ್ಷಣೆಗೆ ಯೋಜನೆ ರೂಪಿಸಿ: ರವಿಶಂಕರ್ ಗುರೂಜಿ