ಕಳಚಿದ್ದ ಚನ್ನಮ್ಮನ ಪ್ರತಿಮೆಯ ಬಲಗೈ ಅಳವಡಿಕೆ

KannadaprabhaNewsNetwork |  
Published : Oct 22, 2026, 03:00 AM IST
ಚನ್ನಮ್ಮ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ಪುತ್ಥಳಿಯ ಕಳಚಿದ್ದ ಖಡ್ಗ ಹಿಡಿದಿದ್ದ ಬಲಗೈಯನ್ನು ತಾಲೂಕಾಡಳಿತದ ಅಧಿಕಾರಿಗಳು ರಾತ್ರೋರಾತ್ರಿ ಸರಿಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ಪುತ್ಥಳಿಯ ಕಳಚಿದ್ದ ಖಡ್ಗ ಹಿಡಿದಿದ್ದ ಬಲಗೈಯನ್ನು ತಾಲೂಕಾಡಳಿತದ ಅಧಿಕಾರಿಗಳು ರಾತ್ರೋರಾತ್ರಿ ಸರಿಪಡಿಸಿದ್ದಾರೆ.

ಬಲಗೈ ಕಳಚಿದ ವಿಷಯ ಕಾಡ್ಗಿಚ್ಚಿನಂತೆ ಹರಡಿದ ಪರಿಣಾಮ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮಧ್ಯರಾತ್ರಿಯೇ ಸವದತ್ತಿಯ ಉಗರಗೋಳ ಗ್ರಾಮದ ಕೆಲಸಗಾರರನ್ನು ಕರೆಸಿ ಸರಿಪಡಿಸಿದ್ದಾರೆ. ಅ.23 ರಿಂದ 25ರವರೆಗೆ ನಡೆಯುವ ಕಿತ್ತೂರು ಉತ್ಸವಕ್ಕೆ ಸಚಿವರು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಆಗಮಿಸಲಿದ್ದಾರೆ. ಈ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಇಲ್ಲಿಯೇ ವೀರಜ್ಯೋತಿಯನ್ನು ಬರಮಾಡಿಕೊಂಡು ಈ ಸ್ಥಳದಿಂದಲೇ ಮೆರವಣಿಗೆ ಆರಂಭಿಸುವ ವಾಡಿಕೆ. ಆದರೆ, ಉತ್ಸವಕ್ಕೆ ಎರಡು ದಿನ ಬಾಕಿ ಉಳಿದ ಪರಿಣಾಮ ಎಲ್ಲರಲ್ಲಿಯೂ ಈ ಬಲಗೈ ಕಳಚಿದೆ ಪ್ರಕರಣ ತಲ್ಲಣ ಮೂಡಿಸಿತ್ತು. ಪರಿಣಾಮ ಮಧ್ಯರಾತ್ರಿವರೆಗೂ ತಾಲೂಕಾಡಳಿತ ಎಚ್ಚರಿಕೆ ವಹಿಸಿ ಎಲ್ಲವನ್ನು ಸರಿಪಡಿಸಿದೆ.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಪಪಂ ಸದಸ್ಯರು ಸೇರಿದಂತೆ ತಹಸೀಲ್ದಾರ್‌ ಕಲ್ಲಗೌಡ ಪಾಟೀಲ, ಸಿಪಿಐ ಸಿವಾನಂದ ಗುಡಗನಟ್ಟಿ, ಪಿಎಸ್ಐ ಭರತ.ಎಸ್, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ ಸೇರಿದಂತೆ ಪ್ರಮುಖರು ಹಾಗೂ ಶಾಸಕರ ಆಪ್ತರು ಸ್ಥಳದಲ್ಲಿದ್ದರು.

-------------

ಬಾಕ್ಸ್

ಮೂರ್ತಿ ಬದಲಾವಣೆಗೆ ಆಗ್ರಹ

ಪುತ್ಥಳಿ ಪ್ರತಿಷ್ಠಾಪಿಸಿ 20 ವರ್ಷ ಕಳೆದರೂ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಇತ್ತ ಗಮನ ಹರಿಸಿಲ್ಲ. ಈಗ ಬಲಗೈ ಕಳಚಿ ಭಿನ್ನವಾಗಿದೆ. ಕೂಡಲೇ ಈ ಮೂರ್ತಿಯನ್ನು ಬದಲಾಯಿಸಿ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಚನ್ನಮ್ಮಾಜಿಯ ಅಭಿಮಾನಿಗಳು ಹಾಗೂ ಪಟ್ಟಣದ ನಾಗರಿಕರು ಮತ್ತು ಸಂಘ ಸಂಸ್ಥೆಗಳ ಮುಖಂಡರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀಕನಹಳ್ಳಿ: 100ನೇ ವರ್ಷದ ಮಹೋತ್ಸವ ಅದ್ಧೂರಿಯಾಗಿ ಆಚರಿಸೋಣ
ಸಜ್ಜನ ಶಕ್ತಿಯ ವಿಜಯವೇ ಸನಾತನ ಪರಂಪರೆಯ ಸಂದೇಶ: ಸಿ.ಟಿ.ರವಿ