ರಾಣಿಬೆನ್ನೂರು: ಸಮಾಜ ಪ್ರತಿಭಾವಂತರನ್ನು ಪೋಷಿಸಿದರೆ ಅವರು ಭವಿಷ್ಯದಲ್ಲಿ ಸಮಾಜದ ಋಣ ತೀರಿಸುತ್ತಾರೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ನಗರದ ಚೆನ್ನೇಶ್ವರ ಮಠದಲ್ಲಿ ಜರುಗಿದ ಜ್ಞಾನವಾಹಿನಿ ಮಾಸಿಕ ಧರ್ಮಸಭೆ ಹಾಗೂ ಸ್ಥಳೀಯ ಲಿಂಗವಂತ ಸಮಾಜದ ನಿವೃತ್ತ ನೌಕರರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನಲ್ಲಿ ಲಿಂಗವಂತ ಸಮಾಜದ ಮಕ್ಕಳಿಗೆ ಹಾಗೂ ವಚನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಮೂಲ್ಯ ಜಿಗಲಿ, ಸಿರಿ ಅಜ್ಜವಡಿಮಠ, ಈಶ್ವರಿ ಚಕ್ರಸಾಲಿ, ಭಾವನಾ ಶೆಟ್ಟರ, ಕಾರ್ತೀಕ ಅಂಕಲಕೋಟಿ, ಸೌಂದರ್ಯ ತಿಳವಳ್ಳಿ ಪ್ರತಿಭಾ ಪುರಸ್ಕಾರ ಹಾಗೂ ವಚನ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಮ್ಮ ಚಿತ್ತ ಗುರುಭಕ್ತಿಯತ್ತ ಎಂಬ ವಿಷಯ ಕುರಿತು ಸಿದ್ಧಲಿಂಗಸ್ವಾಮಿ ಉಜ್ಜಯಿನಿಮಠ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ದಾನೇಶ್ವರಿ ಅಕ್ಕನ ಬಳಗದ ವತಿಯಿಂದ ಏರ್ಪಡಿಸಿದ್ದ ವಚನ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನಿವೃತ್ತ ನೌಕರರ ಸಂಘದ ಎಸ್.ಎನ್. ಜಂಗಳೇರ, ಎಸ್.ಎಂ. ಸಂಕಮ್ಮನವರ, ಎಸ್.ಎಸ್. ಜ್ಯೋತಿ, ಎಂ.ಪಿ. ಜ್ಯೋತಿ, ಎಸ್.ಬಿ. ಲಕ್ಕಣ್ಣನವರ, ಎಸ್.ಎಸ್. ಬಡಿಗಣ್ಣನವರ, ಎನ್.ಎಸ್. ಪಾಟೀಲ, ಎಸ್.ಎಚ್. ಪಾಟೀಲ, ಎಸ್.ಕೆ. ನೇಸ್ವಿ, ವಿ.ಎಸ್. ಮೂಲಿಮನಿ, ವಿ.ಎಂ. ಕರ್ಜಗಿ, ಜಿ.ಪಿ. ಬೆಳವಿಗಿ, ವಿ.ವೀ. ಹರಪನಹಳ್ಳಿ, ಕಸ್ತೂರಿ ಪಾಟೀಲ, ಅಮೃತಗೌಡ, ಮಳೆಮಠ, ಮಡಿವಾಳರ, ಹಾಲಸಿದ್ದಯ್ಯ, ಮಾಕಳ ಮತ್ತಿತರರಿದ್ದರು.ವೈವಿಧ್ಯಮ ಬೆಳೆಯಿಂದ ನಿರಂತರ ಆದಾಯರಾಣಿಬೆನ್ನೂರು: ಏಕ ಬೆಳೆ ಪದ್ಧತಿಯಿಂದಾಗಿ ಮಣ್ಣಿನ ಗುಣಧರ್ಮ ಹಾಳಾಗಿದ್ದು, ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆದಲ್ಲಿ ನಿರಂತರ ಆದಾಯ ಮಾಡಿಕೊಳ್ಳಲು ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞೆ ಡಾ. ಸಿದ್ದಗಂಗಮ್ಮ ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಣಿಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲೂಕಿನ ಆಯ್ದ ರೈತರಿಗೆ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಸಮಗ್ರ ಕೃಷಿಯಲ್ಲಿ ತೋಟಗಾರಿಕೆ ಮಹತ್ವ ಕುರಿತು ಡಾ. ಸಂತೋಷ, ಕೃಷಿ ಪೂರಕವಾಗಿ ಹೈನುಗಾರಿಕೆ ಹಾಗೂ ಮೇವಿನ ಬೆಳೆ ಕುರಿತು ಪಶು ವಿಜ್ಞಾನಿ ಕುರಿತು ಡಾ. ಮಹೇಶ ಕಡಗಿ ಮಾತನಾಡಿದರು.ಮಣ್ಣು ವಿಜ್ಞಾನಿ ಡಾ. ರಶ್ಮಿ, ಎ.ಎಚ್. ಬಿರಾದಾರ್, ವನಸಿರಿ ಸಂಸ್ಥೆ ಮುಖ್ಯಸ್ಥ ಎಸ್.ಡಿ. ಬಳಿಗಾರ, ತರಬೇತಿಯಲ್ಲಿ 65 ರೈತರು ಹಾಗೂ ವನಸಿರಿ ಸಂಸ್ಥೆ ಸಿಬ್ಬಂದಿ ಪಾಲ್ಗೊಂಡಿದ್ದರು.