ಲಕ್ಷೇಶ್ವರ ತಾಲೂಕಿನಲ್ಲಿ ಶೇ. ೮೨.೭೦ ದಾಖಲೆ ಮತದಾನ

KannadaprabhaNewsNetwork |  
Published : Oct 24, 2026, 02:30 AM IST
ಪೊಟೋ- ಲಕ್ಷ್ಮೇಶ್ವರ  ಪಟ್ಟಣದ ಪುರಸಭೆಯಲ್ಲಿನ ಮತಗಟ್ಟಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತಚಲಾಯಿಸಲು ಸಾಲುಗಟ್ಟಿ ನಿಂತಿರುವ ಪದವೀಧರ ಮತದಾರರು. | Kannada Prabha

ಸಾರಾಂಶ

ಪುರಸಭೆ ಮತದಾನ ಕೇಂದ್ರದಲ್ಲಿ ಒಟ್ಟು ಎರಡು ಮತಗಟ್ಟೆ ಸ್ಥಾಪಿಸಲಾಗಿತ್ತು. ೭೬ ಮತ್ತು ೭೬ ಎ. ಕೇಂದ್ರಗಳಲ್ಲಿ ತುರುಸಿನ ಮತದಾನ ನಡೆಯಿತು.

ಲಕ್ಷ್ಮೇಶ್ವರ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಪಟ್ಟಣದ ಪುರಸಭೆಯ ಮತದಾನ ಕೇಂದ್ರದಲ್ಲಿ ಶಾಂತಿಯುತವಾಗಿ ನಡೆಯಿತು. ಆರಂಭದಲ್ಲಿ ತುಸು ಮಂದಗತಿಯಲ್ಲಿ ಸಾಗಿದ್ದ ಮತದಾನ ಮಧ್ಯಾಹ್ನದ ಹೊತ್ತಿಗೆ ಮತದಾರು ಮತದಾನ ಕೇಂದ್ರಕ್ಕೆ ಧಾವಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ಬಾರಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ಶೇ.೮೨.೭೦ ರಷ್ಟು ದಾಖಲೆಯ ಮತದಾನವಾಗಿದೆ.

ಪುರಸಭೆ ಮತದಾನ ಕೇಂದ್ರದಲ್ಲಿ ಒಟ್ಟು ಎರಡು ಮತಗಟ್ಟೆ ಸ್ಥಾಪಿಸಲಾಗಿತ್ತು. ೭೬ ಮತ್ತು ೭೬ ಎ. ಕೇಂದ್ರಗಳಲ್ಲಿ ತುರುಸಿನ ಮತದಾನ ನಡೆಯಿತು. ಸಂಜೆ ೪ ಗಂಟೆಯವರೆಗೂ ಮತದಾರರು ಮತದಾನ ಕೇಂದ್ರಕ್ಕೆ ಹಾಜರಾಗಿದ್ದು ವಿಶೇಷವಾಗಿತ್ತು. ತಾಲ್ಲೂಕಿನಲ್ಲಿ ಒಟ್ಟು ೧೫೩೮ ಮತದಾರರು ಇದ್ದು ಅವರಲ್ಲಿ ೧೨೭೨ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಶೇ.೮೨.೭೦ ರಷ್ಟು ಮತದಾನವಾಗಿದೆ.

ಶಾಸಕ ಡಾ.ಚಂದ್ರು ಲಮಾಣಿ ದಂಪತಿ ಸಮೇತ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಈಶ್ವರ, ಹಾವೇರಿ ಲೋಕಸಭಾ ಕ್ಷೇತ್ರದ ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ತಮ್ಮ ಮತ ಚಲಾಯಿಸಿದರು. ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ, ಡಿ.ಬಿ.ಬಳಿಗಾರ, ಎಸ್.ಎಸ್.ನಾಗಲೋಟಿ, ಸಿ.ಜಿ.ಹಿರೇಮಠ ಸೇರಿದಂತೆ ಅನೇಕ ಹಿರಿಯರು ತಮ್ಮ ಮತ ಚಲಾಯಿಸಿದರು. ಅದರಂತೆ ಪ್ರಥಮ ಬಾರಿಗೆ ಮತದಾನ ಮಾಡುವ ಹಕ್ಕು ಪಡೆದ ಪದವೀಧರರು ಅಷ್ಟೆ ಉತ್ಸಾಹದಿಂದ ಮತಚಲಾಯಿಸಲು ಆಗಮಿಸಿದ್ದರು. ಇವರ ನಡುವೆ ವಿಕಲಚೇತನರು ಸಹ ಸಹಾಯಕರ ಸಹಾಯದಿಂದ ಮತಚಲಾಯಿಸಲು ಮತಕೇಂದ್ರಕ್ಕೆ ಆಗಮಿಸಿದ್ದು ಕಂಡು ಬಂದಿತು. ತಹಶೀಲ್ದಾರ ಧನಂಜಯ ಎಂ., ಅವರು ತಾಲ್ಲೂಕಾಡಳಿತದ ವತಿಯಿಂದ ಮತದಾನ ನಡೆಯಲು ವ್ಯವಸ್ಥೆ ಮಾಡಿದರು. ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಆನಂದ ಕ್ಯಾರಕಟ್ಟಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಕೊರತೆ, ತೊಗರಿ ಬೆಳೆಗಾರ ಕಂಗಾಲು
ಚಿರತೆ ಉಗುರು ಸಂಗ್ರಹಿಸಿಟ್ಟ ಆರೋಪಿ ಬಂಧನ