ಹುಬ್ಬಳ್ಳಿ:
ಜೂನ್ ತಿಂಗಳ ಇತಿಹಾಸದಲ್ಲೇ ಇದು ಈ ವರೆಗೆ ದಾಖಲಾದ ಅತ್ಯಧಿಕ ಸಾಧನೆಯಾಗಿದೆ. ಇದರೊಂದಿಗೆ, ದೈನಂದಿನ ಸರಾಸರಿ ವ್ಯಾಗನ್ ಲೋಡಿಂಗ್ನಲ್ಲೂ ಹೊಸ ದಾಖಲೆ ನಿಮಾಣವಾಗಿದೆ. ನಿತ್ಯ ಸರಾಸರಿ 2,221 ವ್ಯಾಗನ್ಗಳನ್ನು ಲೋಡ್ ಮಾಡಲಾಗಿದೆ. ಇದು ಕಳೆದ ವರ್ಷದ (2,143 ವ್ಯಾಗನ್ಗಳು) ಸಾಧನೆಗಿಂತ ಶೇ. 3.6ರಷ್ಟು ಅಧಿಕವಾಗಿದೆ.
ಕಬ್ಬಿಣದ ಅದಿರು 1.69 ಮಿಲಿಯನ್ ಟನ್ (ಎಂಟಿ) ಸಾಗಣೆಯಾಗಿದ್ದು, ಶೇ. 6.3ರಷ್ಟು ಬೆಳವಣಿಗೆ ಕಂಡಿದೆ. ಉಕ್ಕು (ಸ್ಟೀಲ್) 0.90 ಎಂಟಿ ಸಾಗಣೆಯೊಂದಿಗೆ ಶೇ. 7.4ರಷ್ಟು ಏರಿಕೆಯಾಗಿದೆ. ಆರ್ಎಂಎಸ್ಪಿ ಶೇ. 34.5ರಷ್ಟು ಭಾರಿ ಹೆಚ್ಚಳ ಕಂಡುಬಂದಿದ್ದು, 0.23 ಎಂಟಿ ತಲುಪಿದೆ. ಖನಿಜ ತೈಲ 0.21 ಎಂಟಿ ಸಾಗಣೆಯಾಗಿದ್ದು, ಶೇ. 15.8ರಷ್ಟು ಪ್ರಗತಿ ಸಾಧಿಸಿದೆ. ಸಿಮೆಂಟ್ 0.03 ಎಂಟಿ ಸಾಗಣೆಯೊಂದಿಗೆ ಶೇ. 32ರಷ್ಟು ತೇಜಿ ಕಂಡಿದೆ. ಕಂಟೇನರ್ ಸಾಗಣೆ 0.09 ಎಂಟಿ ತಲುಪಿದ್ದು, ಶೇ. 15.8 ರಷ್ಟು ಏರಿಕೆಯಾಗಿದೆ.ಜೂನ್ 2026ರಲ್ಲಿ ದಾಖಲಾದ ಒಟ್ಟು ಆದಾಯ ₹733.23 ಕೋಟಿ ಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 1.55 ರಷ್ಟು (₹11.22 ಕೋಟಿ) ಹೆಚ್ಚಾಗಿದೆ. ಪ್ರಯಾಣಿಕರ ವಿಭಾಗದಿಂದ ಬಂದ ಆದಾಯ ₹290.43 ಕೋಟಿಗಳಾಗಿದ್ದು, ಶೇ. 15.08ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಪ್ರಯಾಣಿಕರ ಸಂಖ್ಯೆಯಲ್ಲೂ ಶೇ. 4.36ರಷ್ಟು ಪ್ರಗತಿಯಾಗಿದ್ದು, ಒಟ್ಟು 14.85 ಮಿಲಿಯನ್ ಜನ ಸಂಚರಿಸಿದ್ದಾರೆ.